
ಒಂದು ಸಂಘಟನ ಪ್ರತಿಭಟನೆಗೆ ಮಣಿದ ಸರ್ಕಾರ ! ಕಾರ್ಮಿಕರಿಗೆ ಲಸಿಕೆ ಕೋತಾ ?
ಬೆಂಗಳೂರು : ವಿಶ್ವದಾದ್ಯಂತ ಕೋವಿಡ್ -19 ರಿಂದ ಉದ್ಭವಿಸಿದ್ದ ಸಂಕಷ್ಟ ಇನ್ನೂ ದೂರಾಗಿಲ್ಲ . ಕರೋನಾದಿಂದ ಮುಕ್ತರಾಗಲು ಲಸಿಕೆ ಒಂದೇ ಮಾರ್ಗ ಎಂದು ಪ್ರಧಾನಿ ನರೇಂದ್ರ ಮೋದಿ ಸಾರಿ ಸಾರಿ ಹೇಳುತ್ತಿದ್ದರೂ ಸಹ ಕಾರ್ಮಿಕ ಸಂಘಟನೆಯೊಂದರ ಸ್ವಪ್ರತಿಷ್ಠೆ ಕಾರಣದಿಂದ ಕಾರ್ಮಿಕ ವಲಯಕ್ಕೆ ಲಸಿಕೆ ನೀಡುವ ಯೋಜನೆ ನನೆಗುಂದಿಗೆ ಬಿದ್ದಿದೆ . ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯಕ್ಕೆ ಸೇರಿದ ಒಂದು ಕೋಟಿಗೂ ಅಧಿಕ ಕಾರ್ಮಿಕರು ವಿವಿಧ ವಲಯಗಳಲ್ಲಿ ಇದ್ದಾರೆ . ಈ ಕಾರ್ಮಿಕರಿಗೆ ಕೋವಿಡ್ ಲಸಿಕೆ ಅನಿವಾರ್ಯ . ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರ ಕಾಳಜಿಯಿಂದಾಗಿ ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರಿಗೆ ಲಸಿಕೆ ನೀಡುವ ಬೃಹತ್ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು . ಆದರೆ , ರಾಜ್ಯದಲ್ಲಿ ಇರುವ ಹತ್ತು ಹಲವು ಕಾರ್ಮಿಕ ಸಂಘಟನೆ ಪೈಕಿ ಒಂದೇ ಒಂದು ಕಾರ್ಮಿಕ ಸಂಘಟನೆ ಇದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿತು . ಈ ಹೋರಾಟವನ್ನು ಕೂಡಲೆ ಪರಿಗಣಿಸಿದ ಸರ್ಕಾರವು ಕಾರ್ಮಿಕ ಲಸಿಕೆ ಅಭಿಯಾನವನ್ನು ಕೈಬಿಟ್ಟಿರುವುದು ಎಷ್ಟು ಸರಿ ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ . ಲಸಿಕೆಗಾಗಿ ಮೂರು ದಿನ ವ್ಯರ್ಥ ! : ಸರ್ಕಾರವು ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡುತ್ತಿದೆ . ಹೀಗಾಗಿ ಕಾರ್ಮಿಕ ಕಲ್ಯಾಣ ನಿಧಿಯಿಂದ ಕಾರ್ಮಿಕರಿಗೆ ಲಸಿಕೆ ಕೊಡಿಸುವುದು ಬೇಡ ಎಂಬುದು ಲಸಿಕೆ ಅಭಿಯಾನವನ್ನು ವಿರೋಧಿಸುತ್ತಿರುವ ಒಂದು ಸಂಘಟನೆಯ ವಾದವಾಗಿದೆ , ಆದರೆ , ಸರ್ಕಾರಿ ಆಸ್ಪತ್ರೆಯಲ್ಲಿ ಕೊರತೆ ಕಾರಣ ನೀಡುತ್ತಿರುವ ಲಸಿಕೆ ಪ್ರಮಾಣ ಅತ್ಯಲ್ಪ ಮತ್ತು ಲಸಿಕೆಗಾಗಿ ಟೋಕನ್ ಪಡೆಯಲು ಒಂದು ದಿನ , ಲಸಿಕೆ ಪಡೆಯಲು ಒಂದು ದಿನ , ನoತರ ಜ್ವರದಿಂದ ಬಳಲಿದರೆ ಒಂದು ದಿನ ಹೀಗೆ ಕಾರ್ಮಿಕರು ಲಸಿಕೆಗಾಗಿ ಮೂರು ದಿನಗಳ ಕೂಲಿ ಬಿಟ್ಟು ಲಸಿಕೆ ಪಡೆಯಲು ಶಕ್ತರೇ ಎಂಬುದನ್ನು ಲಸಿಕೆ ಅಭಿಯಾನ ವಿರೋಧಿಸುತ್ತಿರುವ ಸಂಘಟನೆಗೆ ಚಿಂತಿಸದಿರುವುದು ಶೋಚನೀಯವೇ ಸರಿ . ಇನ್ನು ಲಸಿಕೆಗಾಗಿ ಯಾವುದೇ ಹಣ ಬಳಸಿದರೂ ಅದು ಸರ್ಕಾರದ ಹಣವೇ , ತೆರಿಗೆ ಸೇರಿದಂತೆ ವಿವಿಧ ಸೆಸ್ಗಳ ಮೂಲಕ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವೇ ಅಲ್ಲವೇ ? ಅಲದಲೆ ಕಟ್ಟಡ ಕಾರ್ಮಿಕರ ಸಸ ಹಣವನ್ನು ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಬಳಸಿದರೆ ತಪ್ಪೇನು ಎಂಬುದು ಸಂಘಟನೆಗಳಿಗೆ ಗೊತ್ತಿಲ್ಲದ ವಿಷಯವೇನಲ್ಲ . ಹೀಗಿದ್ದರೂ ಲಸಿಕೆ ಅಭಿಯಾನವನ್ನು ವಿರೋಧಿಸುತ್ತಿರುವುದು ಸ್ತಪ್ರತಿಷ್ಟೇಯಲ್ಲದೆ ಮತ್ತೇನು ? ಎಂಬುದು ಇತರೆ ಕಾರ್ಮಿಕ ಸಂಘಟನೆಗಳ ಪ್ರಶ್ನೆಯಾಗಿದೆ . ? ಈ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆಗಾಗಿ ಹಣ ನೀಡಲಾಗುತ್ತಿದೆ ಎಂಬ ವಾದವನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಯೊಂದು ಲಸಿಕೆ ಅಭಿಯಾನವನ್ನು ವಿರೋಧಿಸುತ್ತಿರುವುದು ಅಸಮಂಜಸವಾಗಿದೆ . ಏಕೆಂದರೆ ಬಾಸತಿ ಆಸ್ಪತ್ರೆಗಳಿಗೆ ಲಸಿಕೆ ಮೊತ್ತವನ್ನು ಸರ್ಕಾರಿ ದರದಲ್ಲಿ ಮಾತ್ರ ನೀಡಲಾಗುತ್ತಿದೆ . ಹೀಗಿದ್ದಾಗ ಕಾರ್ಮಿಕ ಸಂಘಟನೆಯ ತಕರಾರು ಏಕೆ ? ಎಂಬುದೇ ಸಂಶಯಾಸ್ಪದವಾಗಿದೆ . ಕಟ್ಟಡ ಕಾರ್ಮಿಕರು ಹಾಗೂ ಸಾಕಷ್ಟು ಪ್ರಮಾಣದ ವಲಸೆ ಕಾರ್ಮಿಕರಿಗೆ ಲಸಿಕೆ ಕುರಿತು ತಿಳುವಳಿಕೆ ಮೂಡಿಸಬೇಕಿದೆ . ಆಸ್ಪತ್ರೆಗಳ ಮಾಹಿತಿ , ಲಸಿಕೆ ಪಡೆದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು ಹಾಗೂ ಎರಡು ಡೋಸ್ ಪಡೆಯುವ ಅನಿವಾರ್ಯತೆ ಇತ್ಯಾದಿಗಳ ಕುರಿತು ಮಾಹಿತಿ ಒದಗಿಸಬೇಕಿದೆ . ಹೊರ ರಾಜ್ಯದ ಕಾರ್ಮಿಕರಿಗೆ ಈ ರಾಜ್ಯದ ಆರೋಗ್ಯ ವ್ಯವಸ್ಥೆಯ ಬಗ್ಗೆ ಮಾಹಿತಿ ಕೊರತೆಯೂ ಕಾಡುತ್ತಿದೆ . ಈ ಎಲ್ಲ ಕಾರ್ಮಿಕರು ಈವರೆಗೂ ಪಡೆದ ಲಸಿಕೆ ಪ್ರಮಾಣ ಶೇ . 5ಕ್ಕಿಂತ ಕಡಿಮೆ ಎಂಬುದು ಇಲಾಖೆಯ ಮಾಹಿತಿಯೇ ತಿಳಿಸುತ್ತಿದೆ . ಹೀಗಿದ್ದಾಗಲೂ ಸೆಸ್ ಉಳಿತಾಯದ ನೆಪದಲ್ಲಿ ಕಟ್ಟಡ ಮತ್ತು ವಲಸೆ ಕಾರ್ಮಿಕರ ಜೀನವದ ಜೊತೆ ಚೆಲ್ಲಾಟವಾಡುತ್ತಾ , ಸಮಾಜದಲ್ಲಿ ಕೋವಿಡ್ ಸರಪಳಿಯನ್ನು ತಡೆಗಟ್ಟದೆ ಈ ರೀತಿ ವರ್ತಿಸುತ್ತಿರುವ ಕಾರ್ಮಿಕ ಮುಖಂಡರಿಗೆ ಹೇಗೆ ಅರ್ಥ ಮಾಡಿಸಬೇಕು ಎಂಬುದು ಯಕ್ಷ ಪ್ರಶ್ನೆ . ಕೋವಿಡ್ 1 ಮತ್ತು 2 ನೇ ಅಲೆಯಲ್ಲಿ ಸರ್ಕಾರಗಳು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಮಾಜವು ತನ್ನೆಲ್ಲಾ ಆದ್ಯತೆಯನ್ನು ಬದಿಗೊತ್ತಿ ಆರೋಗ್ಯ ರಕ್ಷಣೆಯನ್ನೇ ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿವೆ . ಮೂರನೇ ಆಲೆ ಭೀತಿ – ಕಾರ್ಮಿಕ ವಲಯದಲ್ಲಿ ಆತಂಕ : ಇನ್ನು ಕೊರೋನಾ ಮೂರನೇ ಅತಿ ಭೀತಿ ಎದುರಾಗಿದೆ . ಇಂತಹ ಸಂದರ್ಭದಲ್ಲಿ ದಿನ ನಿತ್ಯದ ಅನ್ನಕ್ಕಾಗಿ ಕೂಲಿ ನಾಲಿ ಮಾಡುವ ಕಾರ್ಮಿಕರಿಗೆ ಲಸಿಕೆ ಅನಿವಾರ್ಯ , ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಎಷ್ಟು ಪ್ರಮಾಣದ ಕಾರ್ಮಿಕರು ಮುಂದಾಗುತ್ತಾರೆ ? ಮತ್ತು ಎಷ್ಟು ಕಾರ್ಮಿಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ದೊರಕಲಿದೆ ? ಎಂಬ ಚಿಂತೆ ಇಲ್ಲದೆ , ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿದ್ದೆಡೆಗೆ ತೆರಳಿ ಲಸಿಕೆ ಹಾಕುವ ಅಭಿಯಾನವನ್ನು ವಿರೋಧಿಸುತ್ತಿರುವ ಸಂಘಟನೆಗಳ ಉದ್ದೇಶವಾದರೂ ಏನು ? ಎಂಬುದು ಅಸ್ಪಷ್ಟವೇನಲ್ಲ ! . ಮೂರನೇ ಆಲೆ ಭೀತಿಯಿಂದ ಕಾರ್ಮಿಕ ವರ್ಗವನ್ನು ಕಾಪಾಡಬೇಕಿದ್ದರೆ ಲಸಿಕೆ ಅಭಿಯಾನ ಅನಿವಾರ್ಯ . ಹೀಗಾಗಿ ಸರ್ಕಾರವು ಯಾವುದೇ ಸಂಘಟನೆಗಳ ಆಟಾಟೋಪಕ್ಕೆ ತಲೆಬಾಗದೆ ಕಾರ್ಮಿಕರ ಲಸಿಕೆ ಅಭಿಯಾನವನ್ನು ಮುಂದುವರೆಸುವ ದಿಟ್ಟ ನಿರ್ಧಾರಕ್ಕೆ ಮುಂದಾಗುವ ಮೂಲಕ ದೇಶವನ್ನು ಮೂರನೇ ಅಲೆಯಿಂದ ಮೂರನೇ ಅಲೆಯಿಂದ ಮುಕ್ತವಾಗಿಸಬೇಕು , ಜಾಗತಿಕ ಸಾಂಕ್ರಾಮಿಕ ಕೋವಿಡ್ -19 ರಿಂದ ಉದ್ಭವಿಸಿದ ಸಂಕಷ್ಟದ ಸಂದರ್ಭದಲ್ಲಿ ಉಚ್ಚ ಮತ್ತು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕಾರ್ಮಿಕ ಇಲಾಖೆಯು ರಾಜ್ಯದಾದ್ಯಂತ ಸಂಘಟಿತ , ಅಸಂಘಟಿತ ಮತ್ತು ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ಅನ್ನು ವಿತರಿಸುವ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿತ್ತು . ಹೀಗೆ ಲಾಕ್ಡೌನ್ ಸಂದರ್ಭದಲ್ಲಿ 30 ಲಕ್ಷ ಕಿಟ್ಗಳ ವಿತರಣೆಯಂತಹ ಸವಾಲಿನ ಕೆಲಸವನ್ನು ನಿಭಾಯಿಸಿದ ಕಾರ್ಮಿಕ ಇಲಾಖೆಯು ಸ್ಥಳೀಯ ಶಾಸಕರು ಮತ್ತು ಸಂಸದರಂತಹ ಜನಪ್ರತಿನಿಧಿಗಳ ಸಲಹೆ ಸೂಚನೆಗಳಂತೆ ನಿಭಾಯಿಸಿದೆ . ಆದರೆ , ಕೆಲ ಕಾರ್ಮಿಕ ಸಂಘಟನೆಗಳು ಮೊಸರಿನಲ್ಲಿ ಕಲ್ಲು ಹುಡುಕುವಂತ ಸ್ಥಳೀಯ ಪನಪ್ರತಿನಿಧಿಗಳ ಕಾರ್ಯವೈಖರಿಗೂ ಆಕ್ಷೇಪ ವ್ಯಕ್ತಪಡಿಸಿದ್ದವು . ಇದೇ ಅಲ್ಲದೆ , ಸರ್ಕಾರದ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ವಯ ಶ್ರಮಿಕ ವರ್ಗಕ್ಕೆ ಮೂನಿಟಿ . ಬೂಸ್ಟರ್ ಕಿಟ್ ಮತ್ತು ಕೋವಿಡ್ನಿಂದ ಸುರಕ್ಷಿತವಾಗಿರಿಸಲು ಸೋಪ್ , ಮಾಸ್ಕ , ಸ್ಯಾನಿಟೈಜರ್ ವಿತರಣೆಯ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸುವ ಮೂಲಕ ಉತ್ತಮ ಕಾರ್ಯಕ್ಕೆ ಕೆಲ ಸಂಘಟನೆಗಳು ತೊಡಕಾಗಿದ್ದು ಆಕ್ಷೇಪಾರ್ಹ . ಇನ್ನು ಕೆಟಿಟಿಪಿ ಕಾಯ್ದೆಯಂತೆ ಶ್ರಮಿಕ ವರ್ಗಕ್ಕೆ ಟೂಲ್ ಕಿಟ್ ನೀಡಲು ಮುಂದಾಗಿರುವ ಕಾರ್ಮಿಕ ಇಲಾಖೆ ವಿರುದ್ಧ ಅಪಸ್ವರ ಎತ್ತುತ್ತಿರುವ ಕೆಲ ಕಾರ್ಮಿಕ ಸಂಘಟನೆಗಳ ಸ್ವಪ್ರತಿಷ್ಠೆಯ ಕಾರ್ಯವೈಖರಿ ಕಾರ್ಮಿಕ ವರ್ಗದ ಅಸಮಾಧಾನಕ್ಕೆ ಕಾರಣವಾಗಿದೆ . ಇನ್ನು ವಲಸೆ ಮತ್ತು ಸಂಘಟಿತ ಕಾರ್ಮಿಕರು ಹಲವಾರು ವರ್ಷಗಳಿಂದ ಉತ್ತಮ ವಸತಿ ವ್ಯವಸ್ಥೆ ಇಲ್ಲದೆ ಗುಡಿಸಲುಗಳಲ್ಲಿ ವಾಸಿಸುತ್ತಿದ್ದು , ಶ್ರಮಿಕ ವರ್ಗದವರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಮಹತ್ತರ ಯೋಜನೆಯನ್ನು ಕಾರ್ಮಿಕ ಇಲಾಖೆ ಹಮ್ಮಿಕೊಂಡಿದ್ದು , ಇದಕ್ಕೂ ಸಹ ಕೆಲ ಸಂಘಟನೆಗಳು ತಡೆಯೊಡ್ಡುವ ಮೂಲಕ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿರುವುದು ಅಕ್ಷಮ್ಯವೇ ಸರಿ . ಕಾರ್ಮಿಕ ಇಲಾಖೆಯ ಆಹಾರ ಕಿಟ್ ಪಡೆದು ನೋಂದಣಿ ಹೆಸರಿನಲ್ಲಿ ಹಣ ಸಂಗ್ರಹಿಸಿರುವ ಆರೋಪವೂ ಸಹ ಕೆಲ ಕಾರ್ಮಿಕ ಸಂಘಟನೆಗಳ ಮೇಲಿದ್ದು ರಾಜ್ಯ ಸರ್ಕಾರದ ಶ್ರಮಿಕ ವರ್ಗದ ಪರವಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಕೇವಲ ಸ್ವಪ್ರತಿಷ್ಠೆಗೆ ಒಳಗಾಗಿ ಆಡ್ಡಗಾಲು ಹಾಕುತ್ತಿರುವ ಕಾರ್ಮಿಕ ನಾಯಕರ ವರ್ತನೆ ದುರಾದೃಷ್ಟಕರ . ಸರ್ಕಾರದ ಒಳ್ಳೆಯ ಕೆಲಸಗಳು ಮುಂದುವರೆಸುವಲ್ಲಿ ಬಿಎಂಎಸ್ನ ಯಾವುದೇ ಅಭ್ಯಂತರ ವಿರುವುದಿಲ್ಲ . ಒಳ್ಳೆಯ ಕೆಲಸಗಳಿಗೂ ಎಂದಿಗೂ ತೊಡಕುಗಳನ್ನುಂಟುಮಾಡುವುದಿಲ್ಲ .
– ವೆಂಕಟೇಶ ಹೆಚ್.ಎಂ.
ರಾಜ್ಯ ಉಪಾಧ್ಯಕ್ಷರು – ಭಾರತೀಯ ಮಸ್ದೂರ್ ಸಂಘ , ಕರ್ನಾಟಕ
City Today News
9341997936
You must be logged in to post a comment.