ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು “ಪ್ರತಿಭಾವಂತ ಯುವಕ ಯುವರತ್ನ” ಮಲ್ಲನಗೌಡ ಎಸ್ ಪಾಟೀಲ್ ಎಂದು ಹಾರೈಸಿ ಆಶೀರ್ವಾದಿಸಿದರು

ಶುಕ್ರವಾರ, ದಿನಾಂಕ 15.01.2021 ರಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹರಿಹರದಲ್ಲಿ ಹರಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಯುವರತ್ನ ಸಮಾವೇಶದಲ್ಲಿ ಶ್ವಾಸಗುರು ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು, ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದ ಮಲ್ಲನಗೌಡ ಎಸ್ ಪಾಟೀಲ್(M.Tech) ರಾಷ್ಟ್ರೀಯ ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಪಂಚಮಸಾಲಿ ಮಹಾಸಭಾ ಐಟಿಬಿಟಿ ಘಟಕ ಇವರಿಗೆ ರುದ್ರಾಕ್ಷಿ ಮಾಲೆಯನ್ನು ಕೊರಳಲ್ಲಿ ಹಾಕಿ, ತಲೆಯ ಮೇಲೆ ಪುಷ್ಪವನ್ನು ಧಾರೆಯರಿಯುವುದರ ಮೂಲಕ ತುಂಬು ಹ್ರೃದಯದಿಂದ ಹಾಗೂ ಭಕ್ತಿ ಪೂರ್ವಕವಾಗಿ, “ಪ್ರತಿಭಾವಂತ ಯುವಕ ಯುವರತ್ನ” ಎಂಬ ಒಳ್ಳೆಯ ಪ್ರಶಂಸೆಯ ಮಾತುಗಳನ್ನಾಡಿ ಹಾರೈಸಿ ಆಶೀರ್ವಾದಿಸಿದರು.

ಶ್ರೀ ಅವಧೂತ ವಿನಯ ಗುರೂಜೀಯವರು ದಿವ್ಯ ಸಾನಿಧ್ಯ ವಹಿಸಿದ್ದರು. ಸಭೆಯಲ್ಲಿ ಚಿತ್ರನಟ ಶ್ರೀ ಪುನಿತ್ ರಾಜಕುಮಾರ್, ಯುವನಟ ಶ್ರೀ ಶಶಿಕುಮಾರ್, ಮಾನ್ಯ ಸಚಿವರಾದ ಶ್ರೀ ಸಿ. ಪಿ. ಯೋಗೇಶ್ವರ ಅವರ ಸುಪುತ್ರಿ, ಶ್ರೀ ಎಮ್ ರುದ್ರೇಶ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಬೆಂಗಳೂರು ಅಧ್ಯಕ್ಷರು, ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅರುಣಕುಮಾರ ಪೂಜಾರವರು, ಶ್ರೀ ಮುನಿರತ್ನ ಶಾಸಕರು ರಾಜರಾಜೇಶ್ವರಿ ನಗರ ಬೆಂಗಳೂರು, ಮಾಜೀ ಮುಖ್ಯ ಮಂತ್ರಿ ದಿವಂಗತ ಶ್ರೀ ಎಸ್ ನಿಜಲಿಂಗಪ್ಪರವರ ಮೊಮ್ಮಗ ಹಾಗೂ ಮಾಜೀ ಉಪಮಹಾಪೌರರು ದಾವಣಗೆರೆ ಶ್ರೀ ಬಿ. ಲೋಕೇಶ್, ಮಾಜೀ ಮುಖ್ಯಮಂತ್ರಿ ದಿವಂಗತ ಶ್ರೀ ಜೆ. ಎಚ್. ಪಟೇಲ್ ರ ಸುಪುತ್ರ ಶ್ರೀ ತೇಜಸ್ವಿ ಪಟೇಲ್, ಮಾಜೀ ಸಚಿವರು ಹಾಗೂ ಹಾಲಿ ಶಾಸಕರಾದ ಶ್ರೀ ಶಿವಾನಂದ ಪಾಟೀಲರ ಸುಪುತ್ರಿ ಸ್ಪಶ೯ ಫೌಂಡೇಶನ್ ಅಧ್ಯಕ್ಷರಾದ ಕುಮಾರಿ ಸಂಯುಕ್ತ ಎಸ್ ಪಾಟೀಲ, ಸಮಾಜದ ರಾಜ್ಯಾಧ್ಯಕ್ಷರಾದ ಶ್ರೀ ನಾಗನಗೌಡರು, ನಿಕಟಪೂರ್ವ ರಾಜ್ಯಾಧ್ಯಕ್ಷರಾದ ಶ್ರೀ ಬಸವರಾಜ ದಿಂಡೂರ, ಪದಾಧಿಕಾರಿಗಳಾದ ಹಾಗೂ ಹಿರಿಯರಾದ ಶ್ರೀ ಬಾವಿ ಬೆಟ್ಟಪ್ಪ, ಶ್ರೀ ಬಿ. ಸಿ. ಉಮಾಪತಿ ಹಾಗೂ ಚಂದ್ರಶೇಖರ ಪೂಜಾರ ಹಾಗೂ ಅನೇಕ ಗಣ್ಯಮಾನ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

City Today News
9341997936