ಯಲಹಂಕ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ , ಭಾರತ ರತ್ನ , ಬಾಬಾಸಾಹೇಬ್ ” ಡಾ.ಬಿ.ಆರ್.ಅಂಬೇಡ್ಕರ್ ” ರವರ 14 ಅಡಿ ಎತ್ತರದ ಲೋಹದ ಪ್ರತಿಮೆ

ಯಲಹಂಕ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ , ಭಾರತ ರತ್ನ , ಬಾಬಾಸಾಹೇಬ್ ” ಡಾ.ಬಿ.ಆರ್.ಅಂಬೇಡ್ಕರ್ ” ರವರ 14 ಅಡಿ ಎತ್ತರದ ಲೋಹದ ಪ್ರತಿಮೆಯನ್ನು ನಿರ್ಮಿಸಲು ಸರ್ಕಾರದಿಂದ 160 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲು ಮಂಜೂರಾತಿ ಆದೇಶ ನೀಡಿರುವುದರ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ . ಬೆಂಗಳೂರು ನಗರ ಜಿಲ್ಲೆ , ಯಲಹಂಕ ತಾಲ್ಲೂಕು , ಯಲಹಂಕ ಹೋಬಳಿ , ಯಲಹಂಕ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ , ಭಾರತ ರತ್ನ , ವಿಶ್ವಚೇತನ ಬಾಬಾ ಸಾಹೇಬ್ ” ಡಾ.ಬಿ.ಆರ್.ಅಂಬೇಡ್ಕರ್ ” ರವರ 14 ಅಡಿ ಎತ್ತರದ ಲೋಹದ ಪ್ರತಿಮೆಯನ್ನು ನಿರ್ಮಿಸಲು ಸರ್ಕಾರದಿಂದ 160 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲು ಮಂಜೂರಾತಿ ಆದೇಶ ಹೊರಡಿಸಿರುವುದಕ್ಕಾಗಿ , ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ.ಬಿ.ಎಸ್.ಯಡಿಯೂರಪ್ಪ ರವರು , ಹಾಲಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ.ಬಸವರಾಜ ಬೊಮ್ಮಾಯಿ ರವರಿಗೆ ಮತ್ತು ಸಮಾಜ ಕಲ್ಯಾಣ ಸಚಿವರಾದ ಸನ್ಮಾನ್ಯ ಶ್ರೀ.ಕೋಟಾ ಶ್ರೀನಿವಾಸ ಪೂಜಾರಿ ರವರು ಹಾಗೂ ಯಲಹಂಕ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ.ಎಸ್.ಆರ್.ವಿಶ್ವನಾಥ್ ರವರು ಹಾಗೂ ಸರ್ಕಾರದ ಹಿರಿಯ ಅಧಿಕಾರಿ ವರ್ಗದವರಿಗೆ ಸಮಿತಿವತಿಯಿಂದ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗುತ್ತಿದೆ .

ಯಲಹಂಕ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 14 ಅಡಿ ಎತ್ತರದ ಲೋಹದ ಪ್ರತಿಮೆಯನ್ನು ನಿರ್ಮಿಸಬೇಕೆಂದು ಮೇಲ್ಕಂಡ ಸಮಿತಿಯ ವತಿಯಿಂದ ಬಹಳ ವರ್ಷಗಳ ಬೇಡಿಕೆಯಾಗಿತ್ತು . ಈ ಕುರಿತು ನಮ್ಮ ಸಂಘಟನೆಯಿಂದ ಸರ್ಕಾರಕ್ಕೆ ಅನೇಕ ಬಾರಿ ಹೋರಾಟಗಳನ್ನು ಹಮ್ಮಿಕೊಂಡು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿತ್ತು . ಅಂತಿಮವಾಗಿ ರಾಜ್ಯ ಸರ್ಕಾರವು ಯಲಹಂಕ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 14 ಅಡಿ ಎತ್ತರದ ಲೋಹದ ಪ್ರತಿಮೆಯನ್ನು ನಿರ್ಮಿಸಲು ಸರ್ಕಾರದಿಂದ 160 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿ ಮಂಜೂರಾತಿ ಆದೇಶ ಸಂಖ್ಯೆ : ಸಕಇ.121.ಎಸ್ . ಎಲ್.ಪಿ .2020 , ಬೆಂಗಳೂರು , ದಿನಾಂಕ : 11-03-2022 ರಂತೆ ಆದೇಶ ಮಾಡಿರುವುದು ದ.ಸಂ.ಸ ಸಮತಾವಾದ ) ಸಮಿತಿಗೂ ಹಾಗೂ ಇಡೀ ಕ್ಷೇತ್ರದ ದಲಿತ ಸಮುದಾಯದವರಿಗೆ ತುಂಬಾ ಸಂತೋಷವಾಗಿರುತ್ತದೆ .

ಪತ್ರಿಕಾ ಗೋಷ್ಠಿಯಲ್ಲಿ ಹೆಚ್.ಮಾರಪ್ಪ ರಾಜ್ಯಾಧ್ಯಕ್ಷರು, ಮುನಿರಾಜು ಹೊಂಗಸಂದ್ರ ರಾಜ್ಯ ಸಂಘಟನಾ ಸಂಚಾಲಕರು, ಆರ್.ವೆಂಕಟಾಚಲಪತಿ ಪ್ರಧಾನ ಸಂಚಾಲಕರು, ಬೆಂಗಳೂರು ನಗರ ಜಿಲ್ಲೆ ಹಾಜರಿದ್ದರು

City Today News

9341997936