ಬೆಂಗಳೂರಿನಲ್ಲಿ ಬಾರ್ಬೆಕ್ಯು ನೇಷನ್‍ನ 14ನೇ ಔಟ್‍ಲೆಟ್ ಫೀನಿಕ್ಸ್ ಮಾರ್ಕೆಟ್‍ಸಿಟಿಯಲ್ಲಿ ಆರಂಭ

ಬೆಂಗಳೂರು, ಆಗಸ್ಟ್ 19, 2022: ಬಾರ್ಬೆಕ್ಯು ನೇಷನ್ ಇಂದು ಬೆಂಗಳೂರಿನ ಫೀನಿಕ್ಸ್ ಮಾರ್ಕೆಟ್‍ಸಿಟಿಯಲ್ಲಿ ಹೊಸ ಔಟ್‍ಲೆಟ್(ಮಳಿಗೆ) ಅನ್ನು ಪ್ರಾರಂಭಿಸಿದೆ. ಇದು ರಾಜ್ಯದ ರಾಜಧಾನಿಯಲ್ಲಿ ಕ್ಯಾಶುವಲ್ ಡೈನಿಂಗ್ ಚೈನ್(ಅನೌಪಚಾರಿಕ ಭೋಜನ ಮಳಿಗೆಗಳ ಸರಣಿ)ನ 14ನೇ ಘಟಕವಾಗಿದೆ. 4,700 ಚದರ ಅಡಿ ವಿಶಾಲವಾದ ಮಳಿಗೆ 143 ಜನರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಸಾಂಸ್ಥಿಕ ಮಧ್ಯಾಹ್ನದ ಭೋಜನ ಮತ್ತು ಕುಟುಂಬ ಕೂಟಗಳನ್ನು ಆಯೋಜಿಸಲು ಇದು ಸೂಕ್ತ ಸ್ಥಳವಾಗಿದೆ. ಔಟ್‍ಲೆಟ್‍ನ ಒಳಭಾಗವು ರೋಮಾಂಚಕ ಮತ್ತು ಇಂದಿನ ಒಲವುಗಳಿಗೆ ಹೊಂದುವಂತಿದೆ. ಇದು ಸಹಸ್ರಮಾನದ ಯುವಜನತೆ ಮತ್ತು ಬೆಂಗಳೂರಿನ ಭೋಜನ ಪ್ರಿಯರ ರುಚಿಸೌಂದರ್ಯಕ್ಕೆ ತಕ್ಕಂತಿದೆ.
ಬಾರ್ಬೆಕ್ಯು ನೇಷನ್ ಹಾಸ್ಪಿಟಾಲಿಟಿ ಲಿಮಿಟೆಡ್‍ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಶ್ರೀ ಫೈಜ್ ಅಜೀಮ್ ಮಾತನಾಡಿ, “ಬೆಂಗಳೂರಿನಲ್ಲಿ ಮತ್ತೊಂದು ಔಟ್‍ಲೆಟ್ ಆರಂಭಿಸಲು ನನಗೆ ಸಂತೋಷವಾಗಿದೆ. ಮಳಿಗೆಯೊಳಗಿನ ಸಂಭ್ರಮಪೂರ್ಣ ವಾತಾವರಣವು ಅತಿಥಿಗಳನ್ನು ಹುರಿದುಂಬಿಸುವ ಖಾತ್ರಿಯಿದೆ. ನಾವು ನಮ್ಮ ಆತಿಥ್ಯಕ್ಕೆ ಖ್ಯಾತಿ ಗಳಿಸಿದ್ದೇವೆ ಮತ್ತು ನಮ್ಮ ಅತಿಥಿಗಳು ನಿರಾಶೆಗೊಳ್ಳುವುದಿಲ್ಲ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ” ಎಂದರು

ಬಾರ್ಬೆಕ್ಯು ನೇಷನ್‍ನಲ್ಲಿರುವ ಈಟ್-ಆಲ್-ಯು-ಕ್ಯಾನ್ ಬಫೆಯು ಸಸ್ಯಾಹಾರಿ ಮತ್ತು ಮಾಂಸಾಹಾರಿ ಪದಾರ್ಥಗಳ ಶ್ರೇಣಿಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ಷ್ಯಗಳನ್ನು ನೀಡುತ್ತದೆ. ಸ್ಟಾರ್ಟರ್‍ಗಳ ಪೈಕಿ, ಮಾಂಸಾಹಾರಿಗಳು ಪ್ರಸಿದ್ಧ ಮೆಕ್ಸಿಕನ್ ಚಿಲ್ಲಿ ಗಾರ್ಲಿಕ್ ಫಿಶ್, ಹಾಟ್ ಗಾರ್ಲಿಕ್ ಚಿಕನ್ ವಿಂಗ್ಸ್, ತಂದೂರಿ ತಂಗ್ಡಿ, ಕಾಜು ಸೀಕ್ ಕಬಾಬ್, ಕೋಸ್ಟಲ್ ಬಾರ್ಬೆಕ್ಯೂ ಪ್ರಾನ್ಸ್ ಮತ್ತು ಇನ್ನೂ ಹೆಚ್ಚಿನವುಗಳನ್ನು ಸೇವಿಸಬಹುದು, ಸಸ್ಯಾಹಾರಿಗಳು ಬಾಯಲ್ಲಿ ನೀರೂರಿಸುವ, ಕುಟಿ ಮಿರ್ಚ್ ಕ ಪನೀರ್ ಕ ಟಿಕ್ಕಾ, ವೋಕ್ ಟಾಸ್ಡ್ ಸೀಖ್ ಕಬಾಬ್, ಶಬ್ನಮ್ ಕೆ ಮೋಟಿ ಮಶ್ರೂಮ್, ಪೂರಿ ಕಬಾಬ್, ಮತ್ತು ಹನೀ, ಸೆಸೇಮ್ ಸಿನಮನ್ ಪೈನಾಪಲ್ ಮುಂತಾದವುಗಳನ್ನು ಭುಜಿಸಿ ಆನಂದಿಸಬಹುದು. ಮಾಂಸಾಹಾರಿಗಳ ಮುಖ್ಯ ಕೋರ್ಸ್ ವಿಭಾಗವು ಚಿಕನ್ ದಮ್ ಬಿರಿಯಾನಿ, ರಾಜಸ್ಥಾನಿ ಲಾಲ್ ಮಾಸ್ ಮತ್ತು ದಮ್ ಕಾ ಮುರ್ಘ್ ಗಳನ್ನು ಹೊಂದಿದ್ದರೆ, ಸಸ್ಯಾಹಾರಿಗಳು ಪನೀರ್ ಬಟರ್ ಮಸಾಲಾ, ಮೇಥಿ ಮಟರ್ ಮಲೈ, ದಾಲ್-ಎ-ದಮ್ ಮತ್ತು ವೆಜ್ ದಮ್ ಬಿರಿಯಾನಿ ಗಳನ್ನು ಸೇವಿಸಬಹುದು. ಲೈವ್ ಕೌಂಟರ್‍ಗಳು ಚಿಲ್ಲಿ ಕ್ರಿಸ್ಪಿ ಪುರಿ, ಪಾಲಕ್ ಚಾಟ್, ಮಾರ್ಗರಿಟಾ ಪಿಜ್ಜಾ, ಕೀಮಾ ಪಾವ್ ಮತ್ತು ಚಿಕನ್ ಶೀಕ್‍ನಂತಹ ವಿವಿಧ ಮಾಂಸಾಹಾರಿ/ಶಾಕಾಹಾರಿ ಆಯ್ಕೆಗಳನ್ನು ಸಾದರಪಡಿಸುತ್ತವೆ. ಡೆಸರ್ಟ್ ವಿಭಾಗದಲ್ಲಿ ಚಾಕೊಲೇಟ್ ಬ್ರೌನಿ, ರೆಡ್ ವೆಲ್ವೆಟ್ ಪೇಸ್ಟ್ರಿಗಳು, ಅಂಗೂರಿ ಗುಲಾಬ್ ಜಾಮುನ್, ಕೇಸರಿ ಫಿರ್ನೀ ಮತ್ತು ಹೆಚ್ಚಿನವು ಇರುತ್ತವೆ. ರೆಸ್ಟೋರೆಂಟ್‍ನಲ್ಲಿರುವ ಕುಲ್ಫಿಗಳ ವಿಸ್ತಾರವಾದ ಶ್ರೇಣಿ ಅತಿಥಿಗಳು ಜೊಲ್ಲು ಸುರಿಸುವಂತೆ ಮಾಡುತ್ತದೆ. ಈ ಕುಲ್ಫಿಗಳನ್ನು ವಿವಿಧ ಸುವಾಸನೆಗಳನ್ನು ಮಿಶ್ರಣ ಮಾಡುವ ಮೂಲಕ ತಿರುಚಿದ ರುಚಿ ಆನಂದಿಸಬಹುದು ಮತ್ತು ಹೆಚ್ಚು ಇಷ್ಟಪಡುವ ಸಿಹಿಭಕ್ಷ್ಯದ ವೈವಿಧ್ಯಮಯ ಸಂಯೋಜನೆಗಳನ್ನು ಸೃಷ್ಟಿಸಬಹುದು.
City Today News
9341997936
You must be logged in to post a comment.