ಬಿಬಿಎಂಪಿ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡ 50 ರಷ್ಟು ಮೀಸಲಾತಿ , ಮೊದಲ ಬಾರಿ ಮತ ಚಲಾಯಿಸುವ ಯುವ ವಿದ್ಯಾವಂತ ಯುವಕ – ಯುವತಿಯರಿಗೆ ವಿಶೇಷ ಆದ್ಯತೆ- ನ್ಯಾಷನಲ್ ಪೀಪಲ್ಸ್ ಪಾರ್ಟಿ

ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಕೇಂದ್ರದ ಆಡಳಿತ ಪಕ್ಷದ ಭಾಗವಾಗಿರುತ್ತದೆ . ಈ ಪಾರ್ಟಿಯ ಕಚೇರಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಪ್ರಾರಂಭವಾಗಿದೆ . ನ್ಯಾಷನಲ್ ಪೀಪಲ್ಸ್ ಪಾರ್ಟಿಯು ಮುಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯನ್ನು ಗಮನದಲ್ಲಿಟ್ಟು ಬೆಂಗಳೂರು ವ್ಯಾಪ್ತಿಯ ಜನತೆಗೆ ಹೆಚ್ಚಿನ ಸೇವೆಯನ್ನು ನೀಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ . ವಿಶೇಷವಾಗಿ ರಸ್ತೆಗಳ ದುರಸ್ತಿ , ಪರಿಸರ ಮತ್ತು ಹಸಿರು ವನವನ್ನು ಬೆಳೆಸಲು ವಿಶೇಷ ಅಧ್ಯತೆ ನೀಡಲು ಕ್ರಮ ಕೈಗೊಳ್ಳುತ್ತಿದೆ . ಈಗಾಗಲೇ ಎಲ್ಲಾ ಬಿಬಿಎಂಪಿ ವಾರ್ಡುಗಳಲ್ಲಿ ನಮ್ಮ ಅಭ್ಯರ್ಥಿಗಳು ಚಟುವಟಿಕೆಗಳನ್ನು ಮಾಡುತ್ತಾ ಬರುತ್ತಿದ್ದಾರೆ .

ಪಕ್ಷದ ಮುಖ್ಯ ಉದ್ದೇಶ : ಬಿಬಿಎಂಪಿ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡ 50 ರಷ್ಟು ಮೀಸಲಾತಿ , ಮೊದಲ ಬಾರಿ ಮತ ಚಲಾಯಿಸುವ ಯುವ ವಿದ್ಯಾವಂತ ಯುವಕ – ಯುವತಿಯರಿಗೆ ವಿಶೇಷ ಆದ್ಯತೆ ,

ಪಕ್ಷದ ಘೋಷಣೆ : ಮತದ ಮೌಲ್ಯವನ್ನು ಅರಿತು ‘ ನನ್ನ ಮತ ಮಾರಾಟಕ್ಕಿಲ್ಲ ಘೋಷಣೆಯೊಂದಿಗೆ ಚುನಾವಣಾ ಪ್ರಚಾರವನ್ನು ಮಾಡುತ್ತಿದೆ

ನಮ್ಮ ಪಕ್ಷವು ಬಿಬಿಎಂಪಿಯಲ್ಲಿ ಆಡಳಿತ ಪಕ್ಷವಾಗಿ ಆಯ್ಕೆಯಾದರೆ ಬಡತನ ರೇಖೆಗಿಂತ ಕಡಿಮ ಆದಾಯ ಇರುವವರಿಗೆ ಉಚಿತ ಶಿಕ್ಷಣ ಹಾಗೂ ಮಕ್ಕಳಿಗೆ ಉಚಿತ ಬಸ್ ಪಾಸ್ ಇತರ ವಸ್ತುಗಳನ್ನು ನೀಡಲು ನಿರ್ಧರಿಸಿದ್ದು ಜೊತೆಗೆ ಎಲ್ಲಾ ರೀತಿಯಲ್ಲಿ ಆರೋಗ್ಯ ಸೇವೆಯನ್ನು ಮತ್ತು ಇತರ ಪ್ರದೇಶಗಳಲ್ಲಿ ಇರುವ ಸಣ್ಣ ರೈತರಿಗೆ ಟ್ರ್ಯಾಕ್ಟರ್‌ಗಳನ್ನು ಹಾಗೂ ರಸಗೊಬ್ಬರ , ಬೀಜ ಬಿತ್ತನೆ , ಸಾಲ ಸೌಲಭ್ಯಗಳನ್ನು ನೀಡಲು ವಿಶೇಷ ರೈತರ ಸಹಾಯ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ . ಯುವಜನತೆಗೆ ಉದ್ಯೋತ ಒದಗಿಸಲು ವಿಶೇಷ ಕೌಶಲ್ಯ ತರಬೇತಿ ಮತ್ತು ಉದ್ಯೋಗ ಮೇಳಗಳನ್ನು ಮಾಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಶ್ರೀ ಅಶೋಕ್ ಕುಮಾರ್ ಜೇವಿಯರ್ ತಿಳಿಸಿದರು . ಮೊ . 9845016339

ನಮ್ಮ ಪಾರ್ಟಿಯ ವತಿಯಿಂದ ಸ್ಪರ್ಧಿಸಲು ಅಭ್ಯರ್ಥಿಗಳು ಮುಂದೆ ಬಂದರೆ ಪಾರ್ಟಿಯ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಯನ್ನು ಸಂಪರ್ಕಿಸಬಹುದಾಗಿದೆ . ಕರ್ನಾಟಕದಲ್ಲಿ ಈಗಾಗಲೇ ಸಂಘಟನೆ ಮಾಡುತ್ತಿರುವ ಈ ನಮ್ಮ ಪಾರ್ಟಿಗೆ ಮಾಧ್ಯಮ ವರ್ಗದವರು ಹೆಚ್ಚಿನ ಪ್ರಚಾರವನ್ನು ನೀಡುವುದರ ಮೂಲಕ ಪ್ರೋತ್ಸಾಹಿಸಬೇಕೆಂದು ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಭು ಬಾಸ್ಕೋರವರು ತಿಳಿಸಿದರು.

City Today News

9341997936