“ಮಡಿವಾಳ ಮಾಚಿದೇವ ಜಯಂತಿ” ಫೆಬ್ರವರಿ 1

ಫೆಬ್ರವರಿ 1 ರಂದು ಮಡಿವಾಳ ಮಾಚಿದೇವ ಜಯಂತಿಗೆ ಮಾಧ್ಯಮ ಮೂಲಕ ಆಹ್ವಾನಿಸುವ ಕುರಿತು ಪತ್ರಿಕಾ ಗೋಷ್ಠಿ ನಡೆಸಲಾಯಿತು

ಮಡಿವಾಳ ಮಾಚಿದೇವರು, ಶರಣ ಸಾಹಿತ್ಯ ಪರಂಪರ ಹಾಗೂ ಬಸವಾದಿ ಶರಣರ ವಚನಗಳನ್ನು ಸಂರಕ್ಷಿಸಿ, ಎಲ್ಲಾ ಶರಣರ ವೈಭವತೆಯನ್ನು 21ನೇ ಶತಮಾನಕ್ಕೂ ಉಳಿಸಿಟ್ಟು ಹೋಗಿದ್ದಾರ. ಅವರ ಸೇವೆ, ನಿಮ್ಮ ಮತ್ತು ತ್ಯಾಗದ ಫಲವಾಗಿ ನಾವಿಂದು ಬಸವಣ್ಣನವರು ಸೇರಿದಂತೆ ನೂರಾರು ಶರಣರ ವಚನಗಳ ಸವಿಯನ್ನು ಉಣುತ್ತಿದ್ದೇವೆ.

ಅವರ ಜಯಂತಿ ಕೇವಲ ಜಾತಿಯಾಧಾರಿತವಾಗುತ್ತಿರುವುದು ನಿಜಕ್ಕೂ ದುಃಖಕರ ಮಡಿವಾಳರಿಗೆ ಮೀಸಲಾಗಿರದೆ ಸಮುದಾಯತೀತವಾಗಿ ಎಲ್ಲರೂ ಆಚರಿಸುವಂತ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆ, ಶರಣ ಸಾಹಿತ್ಯ ಪರಿಷತ್ತು ಹಾಗೂ ಮಾಧ್ಯಮಗಳು ಹೆಚ್ಚಿನ ಪ್ರಚಾರ ನೀಡುವ ಅವಶ್ಯಕತೆ ಇದೆ.

ಎಲ್ಲ. ಸಮುದಾಯಗಳಿಗೂ ಅವರ ಜೀವನ ಮೌಲ್ಯ ಮತ್ತು ಕಾರ್ಯತತ್ಪರತೆಯನ್ನು ಪರಿಚಯಿಸುವ ಕಾರ್ಯವಾಗಬೇಕಿದೆ. ಆದ್ದರಿಂದ, ಮಡಿವಾಳ ಮಾಚಿದೇವರ ಜಯಂತಿಯನ್ನು ವಿಜೃಂಭಣೆ, ಮತ್ತು ವೈಭವೋಪೇತವಾಗಿ ಆಚರಿಸುವಂತೆ ಹಾಗೂ ಅವರ ತತ್ತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವಂತೆ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಬೇಕಾಗಿದೆ. ಈ ಬಾರಿ ಎಲ್ಲಾ ಮಹಾಪುರುಷರ ಜಯಂತಿಯನ್ನು ಜಿಲ್ಲಾವಾರು ಆಚರಿಸಲು ಸರಕಾರದ ಆದೇಶವಾಗಿದ್ದು. DOB:01/02/2023 ರಂದು ಮಡಿವಾಳ ಮಾಚಿದೇವರ ಜಯಂತಿಯನ್ನು ಕೊಪ್ಪಳದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ, ತಾಲ್ಲೂಕು ಕ್ರೀಡಾಂಗಣ ಕೊಪ್ಪಳ ಇಲ್ಲಿ ಆಚರಿಸಲಾಗುತ್ತದೆ.

ಆದರಿಂದ, ರಾಜ್ಯದ ಎಲ್ಲಾ ಸಮುದಾಯದ ಬಂದುಗಳು ಹಾಗೂ ಮಡಿವಾಳ ಬಂದುಗಳು ಹಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಾಧ್ಯಮಗಳ ಮೂಲಕ ಕೋರಲಾಗಿದೆ ಎಂದು ರಾಜು ಎಂ. ತಲ್ಲೂರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News – 9341997936