ಮೊಳೆ ಮುಕ್ತ ಮರಗಳುದೇಶದಲ್ಲೇ ಮೊದಲ ಬಾರಿಗೆ ಮೊಳೆ ಮುಕ್ತ ಮರ ಎಂಬ ವಿಷಯಕ್ಕೆ ಕಾಲ್ನಡಿಗೆ

ಮೊಳೆ ಮುಕ್ತ ಮರಗಳು
ದೇಶದಲ್ಲೇ ಮೊದಲ ಬಾರಿಗೆ ಮೊಳೆ ಮುಕ್ತ ಮರ ಎಂಬ ವಿಷಯಕ್ಕೆ ಕಾಲ್ನಡಿಗೆ ಕಾರ್ಯಕ್ರಮ

ಮನೆಗೊಂದು ಮರ, ಊರಿಗೊಂದು ವನ ಎಂಬುದನ್ನು ನಾವೆಲ್ಲರೂ ಕೇಳಿದ್ದೇವೆ.

ದುರಾಸೆ, ಖರ್ಚಿಲ್ಲದೇ ಜಾಹೀರಾತಿನಿಂದ ನಗರಗಳಲ್ಲಿ ಮರಗಳಿಗೆ ಮೊಳೆ ಹೊಡೆದು ವಿರೂಪಗೊಳಿಸುತ್ತಿರುವ ವ್ಯಾಪಾರಿಗಳು
ಮರಗಳನ್ನು ಹಾಳು ಮಾಡುತ್ತಿದ್ದಾರೆ. ಮರಗಳಿಗೂ ಒಂದು ಜೀವವಿದೆ ಎಂಬುದನ್ನು ಮರೆತು ಫಲಕಗಳನ್ನು ಹಾಕಿರುತ್ತಾರೆ.

ಮರಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದಕ್ಕೆ ಇಂದು ಬೆಳಗ್ಗೆ
‘ಮೊಳೆ ಮುಕ್ತ ಮರ’ ಶೀರ್ಷಿಕೆಯಡಿ ಬೆಂಗಳೂರು ಹುಡುಗರ ತಂಡ ಎಂ.ಜಿ ರೋಡ್ ಬಾಲ ಭವನ ದಿಂದ – ಬಿ.ಬಿ.ಎಂ.ಪಿ ಕೇಂದ್ರ ಕಛೇರಿಯವರೆಗೂ ವಾಕಥಾನ್ ಅನ್ನು ಆಯೋಜಿಸಿದ್ದರು.

ಈ ಕಾರ್ಯಕ್ರಮದಲ್ಲಿ ರೈಲ್ವೆಸ್ ನ ಎ.ಡಿ.ಜಿ. ಪಿ ಯಾಗಿರುವ ಭಾಸ್ಕರ್ ರಾವ್, ಪಾಲಿಕೆ ಆಯುಕ್ತರಾಗಿರುವ ಮಂಜುನಾಥ್ ಪ್ರಸಾದ್.
ಶ್ರೀ ದಾರೀ ಆಂಜನೇಯ ಸ್ವಾಮಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಅಂಬರೀಷ್.ಜೀ ಸೇರಿದಂತೆ 25ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಭಾಗಿಯಾದವು.

ಮರಗಳಿಗೆ ಮೊಳೆ ಹೊಡೆಯುವ ಹೀನ ಕೃತ್ಯವನ್ನು ಮಾಡದೆ, ಇದರ ಬಗ್ಗೆ ಅರಿವು ಮೂಡಿಸಿ, ಇದರಿಂದ ಆಗುವ ಕಾನೂನು ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಈ ವಾಕಥಾನ್ ನ ಉದ್ದೇಶವಾಗಿದೆ.

City Today News
9341997936