
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ದಿನಾಂಕ : 30-31ನೇ ಮೇ ಹಾಗೂ 1 ನೇ ಜೂನ್ -2022 ರವರೆಗೆ ಬೆಂಗಳೂರು ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ‘ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು -2022 ನಡೆಯಲಿವೆ .

ದಿನಾಂಕ : 30-05-2022ರಂದು ಸಂಜೆ 4-30 ಗಂಟೆಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್ . ಬೊಮ್ಮಾಯಿರವರು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ . ಈ ಕಾರ್ಯಕ್ರಮದಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಸಂಪುಟದ ಹಲವು ಸಚಿವರು ಭಾಗವಹಿಸಲಿದ್ದಾರೆ .
*ರಾಜ್ಯಾದ್ಯಂತ 10 ಸಾವಿರಕ್ಕೂ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ . * ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಆನ್ಲೈನ್ನಲ್ಲಿ ನೋಂದಾಯಿಸಿಕೊಂಡಿರುವ ಎಲ್ಲಾ ಕ್ರೀಡಾಪಟುಗಳಿಗೆ ಗುಣಮಟ್ಟದ ಟ್ರಾಕ್ಟ್ ಮತ್ತು ಕ್ಯಾಪ್ ನೀಡಲಾಗುವುದು . *ಉದ್ಘಾಟನಾ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಕೆ.ಜಿ.ಐ.ಡಿ. ಇಲಾಖೆಯ Online ಸೇವೆ ಯೋಜನೆ ಹಾಗೂ SMS ಮೂಲಕ ನೌಕರರ ಮಾಸಿಕ ವೇತನ ಭತ್ಯೆಗಳ ಮಾಹಿತಿ ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ . * ದಿನಾಂಕ 30-05-2022 ರಂದು ಸಂಜೆ 7.00 ಗಂಟೆಗೆ ಖ್ಯಾತ ಗಾಯಕರಾದ ಶ್ರೀ ವಿಜಯ್ ಪ್ರಕಾಶ್ರವರಿಂದ ‘ ಸಂಗೀತ ರಸ ಸಂಜೆ ‘ ಕಾರ್ಯಕ್ರಮ ನಡೆಯಲಿದೆ . *ದಿನಾಂಕ : 31-05-2022 ರಂದು ಸಂಜೆ 7.00 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ 15 ಜಾನಪದ ಕಲಾ ತಂಡಗಳಿಂದ ‘ ಜನಪದೋತ್ಸವ ಕಾರ್ಯಕ್ರಮ ನಡೆಯಲಿದೆ .* ರಾಜ್ಯ ಮಟ್ಟದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ಟ್ರೋಫಿ ನೀಡಲಾಗುವುದು . * ದಿನಾಂಕ : 30-05-2022 ರಿಂದ 01-06-2022ರವರೆಗೆ ಮೂರು ದಿನಗಳ ಕಾಲ ಎಲ್ಲಾ ಕ್ರೀಡಾಪಟುಗಳಿಗೆ ರುಚಿ – ಶುಚಿಯಾದ ಊಟೋಪಹಾರ ವ್ಯವಸ್ಥೆ ಮಾಡಲಾಗಿದೆ .
ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಕೇಂದ್ರ ಸಂಘದ Online ನೋಂದಣಿ ಮಾಡಿಕೊಂಡಿರುವ ಎಲ್ಲಾ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಸಂಘವು ಮನವಿ ಮಾಡುತ್ತದೆ ಎಂದು ಸಿ.ಎಸ್.ಷಡಾಕ್ಟರಿ, ರಾಜ್ಯಾಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
City Today News
9341997936
You must be logged in to post a comment.