ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಮಹಾತಪಸ್ವಿ ಸೇವಾ ಪ್ರತಿಷ್ಠಾನ ಟ್ರಸ್ಟ(ರಿ) ಹರಿಹರದ ಬೆಂಗಳೂರು ಶಾಖೆಯ ವತಿಯಿಂದ “ರುದ್ರಾಕ್ಷಿ ಧಾರಣ ಸಂಸ್ಕಾರ ಪಾಲನ” ಎಂಬ ಅಭಿಯಾನ

ದಿನಾಂಕ: 11-03-2021ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಮಹಾತಪಸ್ವಿ ಸೇವಾ ಪ್ರತಿಷ್ಠಾನ ಟ್ರಸ್ಟ(ರಿ) ಹರಿಹರದ ಬೆಂಗಳೂರು ಶಾಖೆಯ ವತಿಯಿಂದ “ರುದ್ರಾಕ್ಷಿ ಧಾರಣ ಸಂಸ್ಕಾರ ಪಾಲನ” ಎಂಬ ಅಭಿಯಾನವನ್ನು ನೆಲಮಂಗಲದ ಮುಕ್ತಿನಾತೇಶ್ವರ, ತಟ್ಟೆಕೇರಿಯ ಶ್ರೀ ಕಣಿವೆ ಮಹದೇಶ್ವರ ಸ್ವಾಮಿ ದೇವಸ್ಥಾನ, ಹುಳಿಮಾವಿನ ಸೋಮೇಶ್ವರ ದೇವಸ್ಥಾನ, ಲೆಗ್ಗೆರೆಯ ಮಂಜುನಾಥ ದೇವಸ್ಥಾನದಲ್ಲಿ ನಡೆಸಲಾಯಿತು.

ಬಂದಂತಹ ಎಲ್ಲಾ ಭಕ್ತಾದಿಗಳಿಗೆ ಉಚಿತವಾಗಿ ರುದ್ರಾಕ್ಷಿ ನೀಡುವ ಮೂಲಕ ಶಿವರಾತ್ರಿ ಹಬ್ಬವನ್ನು ಹಾಗೂ ಸನಾತನ ಸಂಸ್ಕೃತಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಈ ಕಾರ್ಯಕ್ರಮವು ಪರಮಪೂಜ್ಯ ಶ್ರೀ ಶ್ರೀ ಅವಧೂತ ಕವಿ ಗುರುರಾಜ್ ಗುರೂಜಿಯವರ ಆಶೀರ್ವಾದದೊಂದಿಗೆ ಹಾಗೂ ಟ್ರಸ್ಟಿನ ಪದಾಧಿಕಾರಿಗಳ ಸಮ್ಮುಖದಲ್ಲಿ ಅತ್ಯಂತಯಶಸ್ವಿಯಾಗಿ ನಡೆಸಲಾಯಿತು.

City Today News
9341997936