ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವಾಗಿ ಒಟ್ಟಾರೆ 8 ಕೋಟಿ ರೂ ಆರ್ಥಿಕ ನೆರವು : ಉದ್ಯಮಿ , ಸಮಾಜ ಸೇವಕ ಕೆ.ಜಿ.ಎಫ್ ಬಾಬು

ಕೋವಿಡ್ ನಿಂದ ಸಾಕಷ್ಟು ಸಂಕಷ್ಟದಲ್ಲಿರುವ ಬಡ ಕುಟುಂಬಗಳು ಹಾಗೂ 20 ಸಾವಿರ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು

ಬೆಂಗಳೂರು , ಸೆ 30 ; ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಬಡ ಕುಟುಂಬಕ್ಕೆ ಆರ್ಥಿಕ ನೆರವು ನೀಡುತ್ತಿ ದ್ದು , ಇದೀಗ ಸಂಕಷ್ಟದಲ್ಲಿರುವ ವಿದ್ಯಾರ್ಥಿ ಸಮುದಾಯಕ್ಕೆ ಹಣಕಾಸು ಸೌಲಭ್ಯ ಉಮ್ರಾ ಚಾರಿಟಬಲ್ ಟ್ರಸ್ಟ್ ನಿಂದ ಕಲ್ಪಿಸ ಲಾಗುವುದು ಎಂದು ಉದ್ಯಮಿ , ಸಮಾಜ ಸೇವಕ ಕೆ.ಜಿ.ಎಫ್ ಬಾಬು ಪತ್ರಿಕಾ ಗೋಷ್ಠಿಯಲ್ಲಿ ಪ್ರೆಸ್‌ಕ್ಲಬ್ ಕ್ಲಬ್ ನಲ್ಲಿ ಹೇಳಿದ್ದಾರೆ .

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಕೋವಿಡ್ ನಿಂದ ಸಾಕಷ್ಟು ಮಂದಿ ವಿದ್ಯಾರ್ಥಿಗಳು ಅಧ್ಯಯನ ಮುಂದುವರೆಸಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದಾರೆ . ಕಾಲೇಜು ಶುಲ್ಕ ಪಾವತಿಸಲು , ಪಠ್ಯ ಪುಸ್ತಕ ಖರೀದಿ ಮಾಡಲು ಸಹ ಆಗುತ್ತಿಲ್ಲ . ಈ ಸಮಸ್ಯೆ ಮನಗಂಡು ಬಡ ಕಾಲೇಜು ವಿದ್ಯಾರ್ಥಿಗಳು , ಪೋಷಕರಿಗೆ ನೆರವು ನೀಡಲಾಗುವುದು , ಕೋವಿಡ್ ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳ ಮನೆ ಬಾಗಿಲಿಗೆ ಹಣಕಾಸು ನೆರವು ಒದಗಿಸಲಾಗುವುದು ಎಂದರು .

ಕೋಲಾರದಿಂದ ಬೆಂಗಳೂರಿಗೆ ಬಂದು ನೆಲೆಸಿರುವ , ವಸತಿ ನಿಲಯಗಳಲ್ಲಿರುವ ಕುಟುಂಬಗಳಿಗೂ ಸಹ ಆರ್ಥಿಕ ನೆರವು ಕಲ್ಪಿಸಲಾಗುವುದು , ಶಾಲಾ – ಕಾಲೇಜುಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ನೆರವು ಒದಗಿಸಲಾಗುವುದು ಎಂದು ಹೇಳಿದರು . ಬಡ ಕುಟುಂಬ ಹಾಗೂ ಮಧ್ಯಮ ವರ್ಗದವರು ಸೇರಿದಂತೆ ಎಲ್ಲಾ ವರ್ಗ ಸೇರಿ ಸುಮಾರು 2.40 ಲಕ್ಷ ಜನರಿಗೆ ಹಣ ಕಾಸಿನ ನೆರವು ನೀಡಲಾಗುತ್ತಿದೆ . ಕೋಲಾರದ ಪ್ರತಿ ಮನೆಗೂ ನಗದು ಮತ್ತು ಚೆಕ್ ಮೂಲಕ ಕೆಜಿಎಫ್ ಬಾಬು ಅರ್ಥಿಕ ನೆರವು ವಿತರಿಸಲಾಗುತ್ತಿದೆ . 4 ಮಂದಿ ಇರುವ ಕುಟುಂಬಕ್ಕೆ 2 ಸಾವಿರ ರೂ . 6 ಸದಸ್ಯರು ಇರುವ ಕುಟುಂಬಕ್ಕೆ 3 ಸಾವಿರ ರೂ . ಹಾಗೂ 8 ಜನರ ಕುಟುಂಬಕ್ಕೆ 4 ಸಾವಿರ ರೂ . ಮತ್ತು 10 ಜನರ ಕುಟುಂಬಕ್ಕೆ 5 ಸಾವಿರ ರೂ . ನೆರವು ನೀಡಲಾಗುತ್ತಿದೆ .

ಮೊದಲನೇ ಹಂತದಲ್ಲಿ ತಾಲ್ಲೂಕಿನ ಇಪ್ಪತ್ತು ಸಾವಿರ ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ಪ್ರೋತ್ಸಾಹ ಧನ ನೀಡುತ್ತಿದೆ . ಎರಡನೇ ಹಂತದಲ್ಲಿ ವಿದ್ಯಾರ್ಥಿಗಳಿಗೆ ಮತ್ತ 2 ಸಾವಿರ ಆರ್ಥಿಕ ನೆರವು ನೀಡುತ್ತಿದ್ದೇವೆ .ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವಾಗಿ ಒಟ್ಟಾರೆ 8 ಕೋಟಿ ರೂಪಾಯಿಯನ್ನು ಉಮಾ ಚಾರಿಟಬಲ್ ಟ್ರಸ್ಟ್ ನಿಂದ ಕೆಜಿಎಫ್ ಬಾಬು ರವರು ತಿಳಿಸಿದರು .

ಈ ಸಮಾಜಸೇವೆಗೆ ಆ .10 ರಂದು ನರಸಾಪುರದಲ್ಲಿ ಚಾಲನೆ ನೀಡಲಾಗುತ್ತದೆ . ಈ ಆರ್ಥಿಕ ನೆರವು ಪಡೆಯಲು ಇಚ್ಚಿಸುವವರು ಮತದಾರರ ಗುರುತಿನ ಚೀಟಿ , ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರದ ಜೊತೆಗೆ ಅರ್ಜಿ ಸಲ್ಲಿಸಬೇಕು . ಈ ಸೇವೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು 9845070999 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಕೆಜಿಎಫ್ ಬಾಬು ಹೇಳಿದ್ದಾರೆ .

ಕೋವಿಡ್ ಕಾರಣಕ್ಕೆ ತಾಲ್ಲೂಕಿನ ಜನರು ಸಂಕಷ್ಟದಲ್ಲಿದ್ದು , ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ನೀಡುತ್ತಿದ್ದೇನೆ , ಮುಂದ ಮತ ಮತದಾರರ ಪಟ್ಟಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಆಧಾರ್ ಕಾರ್ಡ್ ಮಾಹಿತಿ ಮಾಹಿತಿ ಆಧರಿಸಿ ತಲಾ 2 ಸಾವಿರ ನೆರವನ್ನು ಪ್ರತಿಮನೆಗೆ ತಲೆಸುತ್ತು ತಲುಪಿಸುತ್ತೇನೆ ಈ ಉದ್ದೇಶಕ್ಕಾಗಿ 20 ಕೋಟಿ ವೆಚ್ಚವಾಗಲಿದೆ .

ಹೆಚ್ಚಿನ ಮಾಹಿತಿ ಪಡೆಯಲು : ಉಮ್ರಾ ಚಾರಿಟಬಲ್ ಫೌಂಡೇಷನ್ ಮೊಬೈಲ್ ಸಂಖ್ಯೆ : 9845070999

City Today News

9341997936