ವಿಶ್ವ ಗಾಣಿಗರ ಟ್ರಸ್ಟ್ ಆವರಣದಲ್ಲಿ ಪೀಠಾಧಿಪತಿಗಳಾಗಿ ಬಿ.ಜೆ , ಪುಟ್ಟಸ್ವಾಮಿಯವರು ಪಟ್ಟಭಿಷೇಕದ ಕಾರ್ಯಕ್ರಮವನ್ನು ನಡೆಸದಂತೆ ಘನ ನ್ಯಾಯಾಲಯವು ಆದೇಶ ಮಾಡಿರುವುದರಿಂದ ದಿನಾಂಕ : 15-05-2022 ರಂದು ಕರ್ನಾಟಕ ರಾಜ್ಯದ ಗಾಣಿಗ ಸಮಾಜವು ಈ ಕಾರ್ಯ ಕ್ರಮಕ್ಕೆ ಹಾಜರಾಗ ಬಾರದೆಂದು ಸವಿನೆಯ ಪಾರ್ಥನೆ

ಕರ್ನಾಟಕ ರಾಜ್ಯದಲ್ಲಿ ಅಲ್ಪಸಂಖ್ಯಾತರು ಮತ್ತು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗದವರಾದ ಕರ್ನಾಟಕ ರಾಜ್ಯ ಗಾಣಿಗ ಜನಾಂಗಕ್ಕೆ ತಪ್ಪು ಮಾಹಿತಿ ನೀಡಿ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನದ ಮಠಕ್ಕೆ ಪ್ರಥಮ ಪೀಠಾಧಿಪತಿಗಳಾಗಿ ಅಧಿಕಾರ ಸ್ವೀಕರಿಸಲು ವಿಧಾನ ಪರಿಷತ್ ಸದಸ್ಯರಾದ ಶ್ರೀ.ಬಿ.ಜೆ.ಪುಟ್ಟಸ್ವಾಮಿಯವರು ಪ್ರಯತ್ನ ಮಾಡುತ್ತಿರುವ ಬಗ್ಗೆ ಸದರಿ ಕಾರ್ಯಕ್ರಮವನ್ನು ನಡೆಸದಂತೆ ಆದೇಶ ನೀಡಬೇಕೆಂದು ಗೌರವಾನ್ವಿತ ಘನ ವಕೇಷನಲ್ ನ್ಯಾಯಾಲಯ ಬೆಂಗಳೂರು ( ಬೆಂಗಳೂರು ಗ್ರಾಮಾಂತರ ) ಈ ನ್ಯಾಯಾಲಯದಲ್ಲಿ ದಾವಾ ಅರ್ಜಿ ಸಲ್ಲಿಸಲಾಗಿದ್ದು ಸದರಿ ವಿಚಾರದ ಬಗ್ಗೆ ದಿನಾಂಕ : 15-05-2022 ರಂದು ವಿಶ್ವ ಗಾಣಿಗರ ಸಮುದಾಯ ಟ್ರಸ್ಟ್ ಆವರಣದಲ್ಲಿರುವ ಗಾಣಿಗ ಸಂಸ್ಥಾನ ಮಠದ ಪೀಠಾಧೀಪತಿಗಳಾಗಿ ಬಿ.ಜೆ. ಪುಟ್ಟಸ್ವಾಮಿಯವರು ಪಟ್ಟಭಿಷೇಕದ ಕಾರ್ಯಕ್ರಮವನ್ನು ನಡೆಸದಂತೆ ಆದೇಶ ಮಾಡಿರುತ್ತದೆ . ಆದ ಕಾರಣ ದಿನಾಂಕ : 15-05-2022 ರಂದು ಕರ್ನಾಟಕ ರಾಜ್ಯದ ಗಾಣಿಗ ಸಮಾಜವು ಈ ಕಾರ್ಯ ಕ್ರಮಕ್ಕೆ ಹಾಜರಾಗ ಬಾರದೆಂದು ಮಾದ್ಯಮದ ಮುಖಾಂತರ ಸವಿನೆಯ ಪಾರ್ಥನೆ ಮಾಡಿ ಕೊಳ್ಳಬೇಕಾಗಿರುತ್ತದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಇಂಟಕ್ ರಾಜು, ಎನ್, ಅಧ್ಯಕ್ಷರು ತಿಳಿಸಿದರು.

City Today News

9341997936