ಶ್ರೀಮತಿ ಲಲಿತಮ್ಮ ಡಾ. ಚಂದ್ರಶೇಖರ್ ಅವರ ಕುರಿತ ಅಭಿನಂದನಾ ಗ್ರಂಥ ಲಲಿತ ಕೀರ್ತಿ ಯನ್ನು ಬಿಡುಗಡೆ

ನಾಡಿನ‌ ಹೆಸರಾಂತ ಸಾಹಿತಿ ಶ್ರೀಮತಿ ಲಲಿತಮ್ಮ ಡಾ. ಚಂದ್ರಶೇಖರ್ ಅವರ ಕುರಿತ ಅಭಿನಂದನಾ ಗ್ರಂಥ ಲಲಿತ ಕೀರ್ತಿ ಯನ್ನು ಬಿಡುಗಡೆ ಮಾಡಲಾಯಿತು. ಸುಮಾರು 100 ಮೇರು ಕನ್ನಡ ಸಾಹಿತಿಗಳು ಮತ್ತು ಕುಟುಂಬದ ಸದಸ್ಯರು ಬರೆದ ಲೇಖನಗಳನ್ನು ಈ ಅಭಿನಂದನಾ ಗ್ರಂಥದಲ್ಲಿ ಮುದ್ರಿಸಲಾಗಿದೆ. ಕೋವಿಡ್ ಸುರಕ್ಷತಾ ದೃಷ್ಟಿಯಿಂದ ಈ ಗ್ರಂಥವನ್ನು ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಾಯಿತು. 13 ವಿವಿಧ ದೇಶಗಳಲ್ಲಿರುವ ಮತ್ತು ಭಾರತದ 8 ರಾಜ್ಯಗಳಲ್ಲಿರುವ ಶ್ರೀಮತಿ ಲಲಿತಮ್ಮ ನವರ ಕನ್ನಡ ಸಾರಸ್ವತ ಲೋಕದ ಗಣ್ಯರು, ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳು ಈ ಸರಳ ಸಮಾರಂಭವನ್ನು ಆನ್ ಲೈನ್ ಮೂಲಕ ನೇರವಾಗಿ ವೀಕ್ಷಿಸಿದರು. ಅವರ ಕುಟುಂಬದ ಕೊಡುಗೆಯಾಗಿ ನಿಮಗೆ ಶೀಘ್ರದಲ್ಲಿಯೇ ಈ ಲಲಿತ ಕೀರ್ತಿ ಅಭಿನಂದನಾ ಗ್ರಂಥವನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುವುದು.

City Today News

(citytoday.media)

9341997936