ಸಂಸ್ಕೃತ ಮಹೋತ್ಸವ : 2021-22, ‘ಸಂಸ್ಕೃತ ಗ್ರಂಥ ಪುರಸ್ಕಾರ ‘ ಪ್ರದಾನ ಸಮಾರಂಭ

ಸಂಸ್ಕೃತ ಮಹೋತ್ಸವ : 2021-22 ಕೇಂದ್ರ ಸರ್ಕಾರದ ನಿರ್ದೇಶನದಂತೆ ಸಂಸ್ಕೃತೋತ್ಸವ ದಿನಾಚರಣೆಯು 1969 ರಿಂದ ದೇಶಾದ್ಯಂತ ನಡೆಯುತ್ತಾ ಬಂದಿದ್ದು ಅದರ ಭಾಗವಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಪ್ರತಿ ವರ್ಷ ಕಪ್ ಸಮ್ಮೇಳನಗಳು , ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು ಹಾಗೂ ವಿಚಾರ ಗೋಷ್ಠಿಗಳು ಮುಂತಾದ ಕಾರ್ಯಕ್ರಮಗಳನ್ನು ಆಚರಿಸುತ್ತಾ ಬರುತ್ತಿದ್ದು , ಅದರ ಪ್ರಯುಕ್ತ ಒಂದು ವಾರಗಳ ಕಾಲ ಸಂಸ್ಕೃತ ಸಪ್ತಾಹ ಕಾರ್ಯಕ್ರಮವನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗುತ್ತಿದೆ . ಅದರಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರೋತ್ಸಾಹದಿಂದ ಎಲ್ಲಾ ರಾಜ್ಯಗಳು ವಿವಿಧ ದೇಶಗಳಲ್ಲಿಯೂ ಕೂಡ ಸಂಸ್ಕೃತ ದಿನವನ್ನು ವೈವಿಧ್ಯಮಯವಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಈ ವರ್ಷದ ಸಂಸ್ಕೃತ ಮಹೋತ್ಸವವನ್ನು ದಿನಾಂಕ : 09.09.2021 ರಂದು ಗುರುವಾರದಂದು ಬೆಳಿಗ್ಗೆ 11.00 ಘಂಟೆಗೆ ಗಾಯನ ಸಮಾಜ ಸಭಾಂಗಣದಲ್ಲಿ ಆಯೋಜಿಸಲಾಗಿದೆ . ಇದನ್ನು ಮಾನ್ಯ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಸ್ಟೋಟ್ ಇವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಸಂಸ್ಕೃತ ಗ್ರಂಥ ಪುರಸ್ಕಾರಗಳನ್ನು ಪ್ರದಾನ ಮಾಡಲಿದ್ದಾರೆ . ಹಾಗೂ ಎಸ್ , ವ್ಯಾಸ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ ರಾಮಚಂದ್ರ ಜಿ ಭಟ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ . ಇದರ ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿ -2020 ಅನುಷ್ಠಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ . ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತವನ್ನು ಕೋರುತ್ತೇವೆ .

ರಾಷ್ಟ್ರೀಯ ಶಿಕ್ಷಣ ನೀತಿ -2020 ಅನುಷ್ಠಾನ: ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಡಾ . ಸಿ.ಎಸ್ . ಅಶ್ವಥ್‌ನಾರಾಯಣ ಇವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ನಿರ್ದೇಶನಗಳಂತೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ರನ್ನು ಈ ವರ್ಷದಿಂದ ಅನುಷ್ಠಾನಗೊಳಿಸಲಾಗುತ್ತಿದೆ .

ರಾಷ್ಟ್ರೀಯ ಶಿಕ್ಷಣ ನೀತಿ -2020 ಪ್ರಮುಖ ಅಂಶಗಳು: ನಾಲ್ಕು ವರ್ಷಗಳ ಸ್ನಾತಕಪೂರ್ವ ಪದವಿಗಳನ್ನು ಈ ವರ್ಷದಿಂದ ಆರಂಭವಾಗುತ್ತಿದೆ . ಈ ಪದವಿ ತರಗತಿಗಳಲ್ಲಿ ವಿದ್ಯಾರ್ಥಿಗಳು ಕ್ರೆಡಿಟ್ ಪದ್ಧತಿ ಮುಖ್ಯ , ಅಮುಖ್ಯ ವಿಷಯಗಳನ್ನು ಅಧ್ಯಾಯನ ಮಾಡಲು ಅವಕಾಶವಿದೆ ಹಾಗೂ ಬೇರೆ ವಿಭಾಗಗಳಲ್ಲಿ ನಡೆಯುವ ಕೆಲವು ಕೋರ್ಸಗಳನ್ನು Open Elective ರೂಪದಲ್ಲಿ ತೆಗೆದುಕೊಳ್ಳಲು ಅವಕಾಶಗಳನ್ನು ಕಲ್ಪಿಸಲಾಗಿದೆ ಹಾಗೂ ಉದ್ಯೋಗಾವಕಾಶ ದೃಷ್ಟಿಯಿಂದ ಕಂಪ್ಯೂಟರ್ , ಸಾಕ್ಷರತೆ , ಯೋಗ ಸ್ವಾಸ್ಥ್ಯ ಮುಂತಾದ ವಿಷಯಗಳನ್ನು ಅಧ್ಯಯನ ಮಾಡಲು ಕಲ್ಪಿಸಲಾಗಿದೆ , ಭಾಷೆಗಳ ಅಧ್ಯಯನಕ್ಕೂ ಅವಕಾಶ ಕಲ್ಪಿಸಲಾಗಿದೆ . ಸಂಸ್ಕೃತ ಭಾಷೆಯಲ್ಲಿ ಉಪಲಬ್ಧವಾಗಿರುವ ಅನೇಕ ವಿಷಯಗಳನ್ನು Open Elective ರೂಪದಲ್ಲಿ ಅಧ್ಯಯನ ಮಾಡಲು ಅವಕಾಶಗಳನ್ನು ಕಲ್ಪಿಸಲಾಗಿದೆ .

ಪ್ರೊ.ಎಂ.ಕೊಟ್ರೇಶ್

ಕುಲಸಚಿವರು

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಚಾಮರಾಜಪೇಟೆ , ಬೆಂಗಳೂರು

City Today News

9341997936