ಸಂಗೋಪನಾ ಸಚಿವ ಶ್ರೀ ಪ್ರಭು ಚೌಹಾಣ್ ಕೂಡಲೆ ವಜಾಗೊಳಿಸಿ – ಡಾ.ಲಕ್ಷ್ಮಣ ಸೋರಳ್ಳಿ, ಔರಾದ ವಿಧಾನಸಭಾ ಕ್ಷೇತ್ರ

ಪಶು ಸಂಗೋಪನಾ ಸಚಿವ ಶ್ರೀ ಪ್ರಭು ಚೌಹಾಣ್ ಕೂಡಲೆ ವಜಾಗೊಳಿಸಿ . ಕರ್ನಾಟಕ ಸರ್ಕಾರದ ಪಶು ಸಂಗೋಪನಾ ಸಚಿವರಾಗಿರುವ ಶ್ರೀ ಪ್ರಭು ಚೌಹಾಣ್ ಅವರಿಗೆ ಸಂಬಂಧಿಸಿದ ನಕಲಿ ಜಾತಿ ಪತ್ರದ ಪ್ರಕರಣ ಕುರಿತಂತೆ ಉಚ್ಚ ನ್ಯಾಯಾಲಯ ಮರು ತನಿಖೆಗೆ ಆದೇಶಿಸಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಈ ಕೂಡಲೆ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸುತ್ತೇನೆ .

ರಾಜ್ಯ ಉಚ್ಚ ನ್ಯಾಯಾಲಯದ ಕಲುಬುರುಗಿ , ಪೀಠವು ದಿನಾಂಕ 01 / 02 / 2022 ರಂದು ಶ್ರೀ ಪ್ರಭು ಚೌಹಾಣ್ ಅವರ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮರು ತನಿಖೆ ಕೈಗೊಳ್ಳಲು ಬೀದರ್‌ನ ಜಾತಿ ಪರಿಶೀಲನಾ ಸಮಿತಿಗೆ ಆದೇಶ ನೀಡಿದೆ . ಸಮಿತಿಯ ಮೇಲೆ ಪ್ರಭು ಚೌಹಾಣ್ ರವರು ತಮ್ಮ ಸಚಿವ ಸ್ಥಾನದ ಪ್ರಭಾವವನ್ನು ಬಳಸುವ ಸಾಧ್ಯತೆ ಇರುವುದರಿಂದ ಈ ಕೂಡಲೆ ಅವರನ್ನು ವಜಾಗೊಳಿಸಬೇಕೆಂದು ಕೋರುತ್ತೇವೆ .

ಮೂಲತಃ ಮಹಾರಾಷ್ಟ್ರ ಮೂಲದವರಾದ ಪ್ರಭು ಚೌಹಾಣ್‌ರವರು , ಕರ್ನಾಟಕದ ಲಂಬಾಣಿ ಸಮುದಾಯದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದು ಇವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇ ಕೆಂದು ಕೋರಿ ಕರ್ನಾಟಕ ಹೈಕೋರ್ಟ್‌ ಕಲಬುರಗಿ ಪೀಠದಲ್ಲಿ ರಿಟ್ ಅರ್ಜಿ ದಾಖಲಿಸಲಾಗಿದ್ದು ( WRIT PETITION NO . 225917/2020 ( GM – CC ) C / W WRITE PETITION NO . 226907/2020 ) ಘನತೆವೆತ ನ್ಯಾಯಾಧೀಶರಾದ ಇ . ಎಸ್ . ಇಂದಿರೇಶ್ ಅವರ ನ್ಯಾಯಪೀಠವು 1-2-2022ರಂದು ಆದೇಶ ನೀಡಿದ್ದು ಈ ಹಿಂದೆ 20-11-2017ರಂದು ಬೀದರ್‌ನ ಜಾತಿ ಪರಿಶೀಲನ ಸಮಿತಿ ನೀಡಿದ್ದ ತನಿಖಾ ವರದಿ ಮತ್ತು 31-3-2020 ಹಾಗೂ 10-4-2020ರಂದು ಬೀದರ್ ಜಿಲ್ಲಾಧಿಕಾರಿಗಳು ನೀಡಿದ್ದ ಆದೇಶಗಳನ್ನು ರದ್ದುಗೊಳಿಸಿರುತ್ತದೆ . ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಹೊಸದಾಗಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದು , ಇದಕ್ಕಾಗಿ ತಿಂಗಳ ಗಡುವನ್ನು ವಿಧಿಸಿದೆ .

ಶ್ರೀ ಪ್ರಭು ಚೌಹಾಣ್‌ರವರು ಕರ್ನಾಟಕ ಸರ್ಕಾರದಲ್ಲಿ ಅತ್ಯಂತ ಪ್ರಭಾವಶಾಲಿ ಸಚಿವರಾಗಿದ್ದು ಜಾತಿ ಪರಿಶೀಲನಾ ಸಮಿತಿಯ ಮೇಲೆ ತಮ್ಮ ಸಚಿವ ಸ್ಥಾನದ ಪ್ರಭಾವವನ್ನು ಬಳಸಿಕೊಂಡು ತಮಗೆ ಬೇಕಾದ ಹಾಗೆ ವರದಿ ಬರುವಂತೆ ನೋಡಿಕೊಳ್ಳುವಷ್ಟು ಶಕ್ತಿಶಾಲಿಯಾಗಿರುತ್ತಾರೆ . ಅಧಿಕಾರಿಗಳ ಮೇಲೆ ತಮ್ಮ ಅಧಿಕಾರದ ಪ್ರಭಾವವನ್ನು ಬೀರಿ ತನಿಖೆಯನ್ನು ದಿಕ್ಕು ತಪ್ಪಿಸುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ . ಈ ಹಿನ್ನೆಲೆಯಲ್ಲಿ ಪ್ರಭು ಚೌಹಾಣ್‌ರವರು ಒಂದು ಕ್ಷಣವು ಅಧಿಕಾರದಲ್ಲಿ ಮುಂದುವರೆಯಬಾರದು . ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಈ ಕೂಡಲೆ ಪ್ರಭು ಚೌಹಾಣ್‌ರವರನ್ನು ಸಚಿವ ಸಂಘಟದಿಂದ ವಜಾಗೊಳಿಸಬೇಕು ಮತ್ತು ಹೈ ಕೋರ್ಟ್‌ನ ಅಂತಿಮ ತೀರ್ಪ ಬರುವವರೆಗೆ ಯಾವುದೇ ರೀತಿಯ ಸಾಂವಿಧಾನಿಕ ಹುದ್ದೆಗಳಿಗೆ ನೇಮಿಸಬಾರದೆಂದು ಆಗಹಿಸುತ್ತೇನೆ .

ಪ್ರಕರಣದ ವಿವರ : ರಾಜ್ಯ ಸರ್ಕಾರದ ಪಶು ಸಂಗೋಪನಾ ಸಚಿವರಾದ ಶ್ರೀ ಪ್ರಭು ಚೌಹಾಣ್‌ರವರರು ಮೂಲತಃ ಮಹಾರಾಷ್ಟ್ರಕ್ಕೆ ಸೇರಿದವರು . ಅವರು ಮತ್ತು ಅವರ ಕುಟುಂಬ ಸದಸ್ಯರೆಲ್ಲರು ಮಹಾರಾಷ್ಟ್ರಕ್ಕೆ ಸೇರಿದವರಾಗಿರುತ್ತಾರೆ . ಪ್ರಭು ಚೌಹಾಣ್ ಅವರ ಅಜ್ಜ ಮಹಾರಾಷ್ಟ್ರದ ಲಾತುರ ಜಿಲ್ಲೆ ದೇವಣಿ ತಾಲೂಕು ತೊಗರಿಯಬ ಗ್ರಾಮದವರಾಗಿರುತ್ತಾರೆ . ನಂತರ ಪ್ರಭು ಚೌಹಾಣ್‌ರವರ ಕುಟುಂಬ ಮಹಾರಾಷ್ಟ್ರ ರಾಜ್ಯದ ನಾಂದೇಡ ಜಿಲ್ಲೆ ದೇಗಲೂರು ತಾಲೂಕಿನ ತಿಳವಣಿ ” ಗ್ರಾಮಕ್ಕೆ ವಲಸೆ ಬಂದು ಅಲ್ಲೇ ವಿದ್ಯಾಭ್ಯಾಸ ನಡೆಸಿರುತ್ತದೆ . ಇದಲ್ಲದೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ವ್ಯಾಪಾರ ವ್ಯವಹಾರಗಳನ್ನು ನಡೆಸಿರುತ್ತಾರೆ . ಇತ್ತೀಚೆಗೆಯಷ್ಟೇ ಅಂದರೆ 2008 ರಿಂದ ತಮ್ಮ ತಾಯಿ ಮೋಟುಬಾಯಿಯವರ ತವರೂರಾದ ಔರಾದ್ ತಾಲೂಕಿನ ಘಮಸುಬಾಯಿ ತಾಂಡದಲ್ಲಿ ವಾಸವಾಗಿರುತ್ತಾರೆ .

ಮಹಾರಾಷ್ಟ್ರದಲ್ಲಿ ಲಂಬಾಣಿ ಸಮುದಾಯವು ಪರಿಶಿಷ್ಟ ಜಾತಿಗೆ , ಪರಿಶಿಷ್ಟ ಜನಾಂಗಕ್ಕೆ ಸೇರಿರುವುದಿಲ್ಲ . ಬದಲಾಗಿ ಅಲ್ಲಿ ಈ ಸಮುದಾಯವು ಡಿನೋಟಿಫೈಡ್ ನೊಮೆಡಿಕ್ ಟೈಬ್ ಗುಂಪಿನಲ್ಲಿ ಸೇರುತ್ತದೆ . ಅವರ ಮೂಲ ಜಾತಿ ಪ್ರಮಾಣಪತ್ರಗಳು ಇದನ್ನೆ ಖಚಿತಪಡಿಸುತ್ತದೆ , ಆದರೆ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕರ್ನಾಟಕದ ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಲುವಾಗಿ ಪ್ರಭು ಚೌಹಾಣ್‌ರವರು ತಮ್ಮ ಮೂಲ ಜಾತಿ ಪ್ರಮಾಣ ಪತ್ರವನ್ನು ಮುಚ್ಚಿಟ್ಟು ಕರ್ನಾಟಕದ ಲಂಬಾಣಿ ಸಮುದಾಯದವರಿಗೆ ನೀಡಲಾಗುವ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನು ಅಕ್ರಮವಾಗಿ ಮಾಡಿಸಿಕೊಂಡಿರುತ್ತಾರೆ . ನಂತರ ಕರ್ನಾಟಕದ ಪರಿಶಿಷ್ಟ ಜಾತಿಯವರಿಗೆ ನ್ಯಾಯಯುತವಾಗಿ ಸಲ್ಲಬೇಕಿದ್ದ ಶಾಸಕ ಸ್ಥಾನವನ್ನು ಪರಿಶಿಷ್ಟ ಜಾತಿಯವರಲ್ಲದ ಪ್ರಮು ಚೌಹಾಣ್‌ರವರು ಅನೈತಿಕವಾಗಿ ಕಸಿದುಕೊಂಡಿರುತ್ತಾರೆ . ಇದು ಕ್ರಿಮಿನಲ್ ಅಪರಾಧ ಅಷ್ಟೇ ಅಲ್ಲದೆ ಸಮಾಜಕ್ಕೆ ಅದರಲ್ಲು ವಿಶೇಷವಾಗಿ ಅವಕಾಶ ವಂಚಿತ ಪರಿಶಿಷ್ಟ ಜಾತಿ ವರ್ಗಕ್ಕೆ ನಡೆಸಿದ ಮಹಾದ್ರೋಹವಾಗಿರುತ್ತದೆ .

ಶ್ರೀ ಪ್ರಭು ಚೌಹಾಣ್ ಅವರ ನಕಲಿ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಆದೇಶದ ಮೇರೆಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ತನಿಖೆ ನಡೆಸಿ ದಿನಾಂಕ 17-12-2015ರಂದು ವಿಶ್ವತ ವರದಿ ನೀಡಿದ್ದು ( ವರದಿ ಲಗತ್ತಿಸಿದೆ ) ವಿಸ್ತ್ರತ ವರದಿ ನೀಡಿದ್ದು ಪಭು ಚೌಹಾಣ್‌ರವರ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಅವರ ಹುಟ್ಟೂರಿನಲ್ಲಿ ತನಿಖೆ ನಡೆಸಿ ಅವರ ತಂದೆ – ತಾಯಿ , ಅಜ್ಜ – ಅಜ್ಜಿ , ಮತ್ತು ಸಂಬಂಧಿಗಳ ಹೇಳಿಕೆಗಳನ್ನು ಪಡೆದು ದಾಖಲೆಗಳನ್ನು ಕ್ರೋಢೀಕರಿಸಿ ಪ್ರಭು ಚೌಹಾರವರು ಮಹಾರಾಷ್ಟ್ರದ ವ್ಯಾಪ್ತಿ ಪಟ್ಟಿಯಲ್ಲಿ ಬರುವ ವಿಮುಕ್ತ ಟೈಪ್‌ಗೆ ಸೇರಿದವರಾಗಿದ್ದು , ಪರಿಶಿಷ್ಟ ಜಾತಿಗೆ ಸೇರಿರುವುದಿಲ್ಲ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿರುತ್ತದೆ . ಕರ್ನಾಟಕ ಸರ್ಕಾರದ ಸುತ್ತೋಲೆ ಸಂಖ್ಯೆ DSW/E & T3 / CR106 / 97-98 ದಿನಾಂಕ 18-12-1997 ಪ್ರಕಾರ ಯಾವುದೇ ಭಾರತೀಯ ಪ್ರಜೆಯ ಜಾತಿಯು ಆತನ ಹುಟ್ಟಿದ ಸ್ಥಳದ ಮೇಲಿಂದ ನಿರ್ಧಾರವಾಗುತ್ತದೆ . ಶ್ರೀ ಪ್ರಧ ಚೌಹಾಣ್‌ರವರು ಮತ್ತು ಅವರ ಮಕ್ಕಳಾದ ಪ್ರಿಯಾಂಕ ಮತ್ತು ಪ್ರತೀಕ ಇವರ ಶಾಲಾ ದಾಖಲಾತಿ ಆಧಾರದಲ್ಲಿ ಇವರುಗಳು ಮಹಾರಾಷ್ಟ್ರ ರಾಜ್ಯದ ನಾಂದೇಡ ಜಿಲ್ಲೆ ದೇಗಲೂರು ತಾಲೂಕಿನ ಅಳವಣ ಗ್ರಾಮದಲ್ಲಿ ಹುಟ್ಟಿರುವುದರಿಂದ ಅವರು ಕರ್ನಾಟಕದ ಪರಿಶಿಷ್ಟ ಜಾತಿಗೆ ಸೇರಿದವರಾಗಿರುವುದಿಲ್ಲ . ಅವರೂ ಚೌಹಾಣ್ ರವರು ತಾವು ಕರ್ನಾಟಕ ರಾಜ್ಯದ ಔರಾದ್ ತಾಲೂಕಿನ ಘಮಸುಬಾಯಿ , ತಾಂಡದ ಕಾಖಲ ನಿವಾಸಿಯೆಂದು ಪರಿಶಿಷ್ಟ ಜಾತಿಯ ಪ್ರಮಾಣಪತ್ರವನ್ನು ತಹಸಿಲ್ದಾರರಿಂದ ಅಕ್ರಮವಾಗಿ ಪಡೆದಿರುತ್ತಾರೆಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ತನ್ನ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿರುತ್ತದೆ , ಅಲ್ಲದೆ ಪ್ರಭು ಚೌಹಾಣ್‌ರವರು ಸುಳ್ಳು ಜಾತಿ ಪತ್ರ ಪಡೆದುಕೊಂಡು ಪರಿಶಿಷ್ಟ ಜಾತಿಗೆ ಸಿಗುವ ಮೀಸಲಾತಿಯನ್ನು ಮೋಸದಿಂದ ಪಡೆದಿರುತ್ತಾರೆಂದು ಸುಮಾರು 240 ಪುಟಗಳ ವರದಿಯಲ್ಲಿ ತಿಳಿಸಲಾಗಿದೆ .

ನಾಗರಿಕ ಹಕ್ಕು ಜಾರಿನಿರ್ದೇಶನಾಲಯದ ತನಿಖಾ ವರದಿಯ ಪ್ರಭು ಚೌಹಾಣ್ ರವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಔರಾದ್ ವಿಧಾನಸಭಾಕ್ಷೇತ್ರ ಚುನಾವಣೆಯಲ್ಲಿ ಗೆಲುವು ಪಡೆದಿರುವುದು ಅಕ್ರಮವಾಗಿದೆಯೆಂದು ತಿಳಿಸಿದ್ದರು ಸಹ ಸಚಿವರು ತಮ್ಮ ಪ್ರಭಾವವನ್ನು ಬಳಸಿ ಬೀದರ್‌ನ ಜಿಲ್ಲಾಧಿಕಾರಿಗಳ ಮೇಲೆ ಪ್ರಭಾವ ಬೀರಿ ಜಾತಿ ಪರಿಶೀಲನ ಸಮಿತಿಯ ವರದಿಯಲ್ಲಿ ಕ್ಲೀನ್‌ಚಿಟ್ ಪಡೆದಿದ್ದರು . ಈ ವರದಿಯ ಆಧಾರದ ಮೇಲೆ ಬೀದರ್ ಜಿಲ್ಲಾಧಿಕಾರಿಗಳು , ಎರಡು ಆದೇಶಗಳನ್ನು ಹೊರಡಿಸಿ ಸಚಿವರನ್ನು ಅಕ್ರಮವಾಗಿ ರಕ್ಷಣೆ ಮಾಡಿದ್ದರು . ಈ ಸಂಬಂಧ ಈಗ ದಿನಾಂಕ : 1-02-2022ರಂದು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠ ತನ್ನ ಆದೇಶದಲ್ಲಿ ಜಾತಿ ಪರಿಶೀಲನಾ ಸಮಿತಿಯ ವರದಿಯನ್ನು ರದ್ದುಪಡಿಸಿದ್ದು , ಜಿಲ್ಲಾಧಿಕಾರಿಗಳ ಎರಡು ಆದೇಶಗಳನ್ನು ಸಹ ಅಸಿಂಧುಗೊಳಿಸಿರುತ್ತಾರೆ .

ಈಗ ಹೊಸದಾಗಿ ಜಾತಿ ಪರಿಶೀಲನಾ ಸಮಿತಿ ವರದಿ ನೀಡುವಂತೆ ಹೈಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ನ್ಯಾಯಯುತ ತನಿಖೆಗೆ ಅವಕಾಶವಾಗುವಂತೆ ಪಭು ಚೌಹಾಣ್‌ರವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸುತ್ತೇನೆ , ಬೀದರ್ ಜಿಲ್ಲಾಧಿಕಾರಿಗಳು ಹಾಗು ಜಾತಿ ಪರಿಶೀಲನಾ ಸಮಿತಿ ಸದಸ್ಯರು ಯಾವುದೇ ರೀತಿಯ ಹಣಕಾಸಿನ ಆಮಿಶ , ಒತ್ತಡ , ಪ್ರಭಾವ ಇತ್ಯಾದಿಗಳಿಗೆ ಮಣಿಯದೆ ನ್ಯಾಯಯುತವಾದ ವರದಿಯನ್ನು ನಿಗದಿತ ಅವಧಿಯೊಳಗೆ ಹೈಕೋರ್ಟ್‌ಗೆ ಸಲ್ಲಿಸಬೇಕೆಂದು ಕೋರುತ್ತೇನೆ .

ಡಾ.ಲಕ್ಷ್ಮಣ ಸೋರಳ್ಳಿ, ಔರಾದ ವಿಧಾನಸಭಾ ಕ್ಷೇತ್ರ

City Today News

9341997936