ಸನಾತನ ಹಿಂದೂ ಧರ್ಮದ ಸಂರಕ್ಷಣೆಗಾಗಿ ಈ ಹಿಂದೂ ದೇವರ ಫೋಟೋ ಮತ್ತು ವಿಗ್ರಹಗಳನ್ನು ಶಾಸ್ತ್ರೋಪ್ತವಾಗಿ ವಿಸರ್ಜನೆ ಮಾಡುವ ವಿಧಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ

ಸನಾತನ ಹಿಂದೂ ಧರ್ಮದಲ್ಲಿ ದೇವತಾ ವಿಗ್ರಹಗಳು ಚಿತ್ರಪಟಗಳ ಪೂಜಾರಾಧನೇ ಅನಾದಿಕಾಲದಿಂದ ನಡೆದುಕೊಂಡು ಬಂದ ಒಂದು ವಿಶಿಷ್ಟ ಪರಂಪರೆಯ ಭವ್ಯ ಇತಿಹಾಸ ಈ ರೀತಿಯಾಗಿ ಪೂಜೆ ಹೋಮ ಯಾಗ ನಡೆದುಕೊಂಡು ಬರುತ್ತದೆ ಹೀಗೆ ನಡೆದುಕೊಂಡು ಬಂದ ದೇವತಾ ಮೂರ್ತಿಗಳು ಹಾಗೂ ದೇವರ ಚಿತ್ರಪಟಗಳು ರಸ್ತೆ ಬದಿಯಲ್ಲಿ ಹಾಗೂ ದೇವಾಲಯಗಳಾಗುವ ಅಶ್ವತ್ ಕಟ್ಟೆಗಳ ಮುಂದೆ ಮೂಲೆಗುಂಪಾಗಿ ಬಿದ್ದಿರುವುದು ಸಾಕಷ್ಟು ನೋವನ್ನು ತರುತ್ತದೆ ಆದುದರಿಂದ ಭಗವತ್ ಭಕ್ತಾದಿಗಳಲ್ಲಿ ವಿನಂತಿಸಿಕೊಳ್ಳುತ್ತಾ ಸನಾತನ ಹಿಂದೂ ಧರ್ಮದ ಸಂರಕ್ಷಣೆಗಾಗಿ ಈ ಹಿಂದೂ ದೇವರ ಫೋಟೋ ಮತ್ತು ವಿಗ್ರಹಗಳನ್ನು ಶಾಸ್ತ್ರೋಪ್ತವಾಗಿ ವಿಸರ್ಜನೆ ಮಾಡುವ ವಿಧಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಅಖಿಲ್ ಭಾರತ ಹಿಂದೂ ಧಾರ್ಮಿಕ ಮಹಾಸಭಾ ಹಮ್ಮಿಕೊಂಡಿತ್ತು
ಈ ಕಾರ್ಯಕ್ರಮದ ಅಂಗವಾಗಿ
ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ
ನಮ್ಮ ಕಾರ್ಯಕರ್ತರು ಜನರಿಗೆ ಅರಿವು ಮೂಡಿಸುವುದು ಹ್ಯಾಗೆ ಈ ದೇವರ ಫೋಟೋಗಳನ್ನ ವಿಸರ್ಜನೆ ಮಾಡುವುದರ ಬಗ್ಗೆ ತಿಳಿಸಿಕೊಡಲಾಯಿತು

ಈ ಸಂದರ್ಭದಲ್ಲಿ ಅಖಿಲ್ ಭಾರತ ಹಿಂದೂ ಧಾರ್ಮಿಕ ಮಹಾಸಭೆಯ ರಾಜ್ಯಾಧ್ಯಕ್ಷರು ಡಾಕ್ಟರ್ ವೇದ ಬ್ರಹ್ಮ ಶ್ರೀ ಎಂ ಬಿ ಅನಂತಮೂರ್ತಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾಕ್ಟರ್ ವೇದಬ್ರಹ್ಮ ಶ್ರೀ ಸತೀಶ್ ಎಚ್ಎಸ್ ರವರು ರಾಜ್ಯ ಉಪಾಧ್ಯಕ್ಷರು ಮಂಡಲ ವೇಣುಗೋಪಾಲ್ ಶರ್ಮಾ ರವರು ಹಾಗೂ ಜಂಟಿ ಕಾರ್ಯದರ್ಶಿ ವೇದ ಬ್ರಹ್ಮ ಶ್ರೀ ಲಂಕಾ ಚಂದ್ರಶೇಖರ್ ರವರು ಬೆಂಗಳೂರು ನಗರ ಗ್ರಾಮಾಂತರ ಅಧ್ಯಕ್ಷರು ವೇದ ಬ್ರಹ್ಮಶ್ರೀ ಸೋಮಸುಂದರ ಶಾಸ್ತ್ರೀಯ ರವರು ಕೆಂಗೇರಿ ಉಪನಗರ ಅಧ್ಯಕ್ಷರು ಪ್ರದೀಪ್ ರವರು ಹಾಗೂ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು
ಎಲ್ಲ ಕಾರ್ಯಕ್ರಮಕ್ಕೆ
ಎಲ್ಲಾ ಅಖಂಡ ಹಿಂದೂ ಬಾಂಧವರು ಸಹಕರಿಸಬೇಕಾಗಿ ಅಖಿಲ್ ಭಾರತ್ ಹಿಂದೂ ಧಾರ್ಮಿಕ ಮಹಾಸಭಾ ರಾಜ್ಯಾಧ್ಯಕ್ಷರು ಪದಾಧಿಕಾರಿಗಳು ವಿನಂತಿ ಮಾಡಿದರು.

City Today News – 9341997936