ಹಿಂದೂ ಧರ್ಮದಲ್ಲಿ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ಸೌಹಾರ್ದತೆಗಾಗಿ ಸ್ನೇಹ ಸಮ್ಮೇಳನ ಆಯೋಜನೆ – ವಿಶ್ವ ಹಿಂದೂ ಅಂತರ್ಜಾತಿ ವಿವಾಹ ಪ್ರೋತ್ಸಾಹ ಸಂಘದ ನಿರ್ಧಾರ

ಬೆಂಗಳೂರು , ಜೂ , 4 : ಸಮಾಜದಲ್ಲಿ ಮೇಲು , ಕೀಳು , ತಾರತಮ್ಯಗಳನ್ನು ನಿವಾರಣೆ ಮಾಡಿ , ಸಾಮರಸ್ಯ ಮೂಡಿಸುವ ಹಾಗೂ ಹಿಂದೂಗಳಲ್ಲಿ ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲು ವ್ಯಾಪಕ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮನ್ನಿಕೇರಿಯ ವಿಶ್ವ ಹಿಂದೂ ಅಂತರ್ಜಾತಿ ವಿವಾಹ ಪ್ರೋತ್ಸಾಹಕ ಸಂಘದ ಸಂಸ್ಥಾಪಕ ಅಧ್ಯಕ್ಷರು ಮನ್ನಿಕೇರಿಯ ಮಹಾಂತಲಿಂಗೇಶ್ವರ ಮಠದ ಪೂಜ್ಯ ಶ್ರೀ ವಿಜಯ ಸಿದ್ಧೇಶ್ವರ – ಸ್ವಾಮೀಜಿ ಹೇಳಿದ್ದಾರೆ . ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಅಂತರ್ಜಾತಿ ವಿವಾಹ ಪ್ರೋತ್ಸಾಹಿಸಲು ರಾಜ್ಯದಾದ್ಯಂತ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು . ಅಂತರ್ಜಾತಿ ವಿವಾಹವಾದ ದಂಪತಿಗಳನ್ನು ಗೌರವಿಸುವ ಅವರ ಸಂಕಷ್ಟಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಸ್ನೇಹ ಸಮ್ಮೇಳನ ಹಾಗೂ ಇನ್ನಿತರ ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು . ವಿವಾಹವಾದ ದಂಪತಿಗಳಿಗೆ ಪ್ರೋತ್ಸಾಹ ನೀಡುವ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿ ಕೊಡಲಾಗುವುದು . ಒಟ್ಟಾರೆ ಜಾತಿವ್ಯವಸ್ಥೆ ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಗುವುದು ಎಂದರು . ಎಲ್ಲ ಜನರಿಗೂ ಧಾರ್ಮಿಕ ಹಾಗೂ ಸಾಮಾಜಿಕ ಸಮಾನತೆಯ ಅವಕಾಶಗಳನ್ನು ದೊರಕಿಸುವ , ಸಮಾನತೆ ಸಾರುವ ವಿಚಾರ ಧಾರೆಗಳನ್ನು ಉತ್ತೇಜಿಸುವಂತಹ ಉದಾತ್ತ ಧೈಯ ಹೊಂದಿದ್ದು ಈ ಮೂಲಕ ಹಿಂದ ಧರ್ಮದಿಂದ ಅನ್ಯ ಧರ್ಮಗಳಿಗೆ ಮತ್ತಾಂತರವಾಗುವುದನ್ನು ತಪ್ಪಿಸುವುದು ನಮ್ಮ ಪರಮ ಗುರಿಯಾಗಿದೆ . ಈಗಾಗಲೇ ಮತಾಂತರಗೊಂಡವರನ್ನು ಮನವೊಲಿಸಿ ಮತ್ತೆ ಹಿಂದೂ ಧರ್ಮಕ್ಕೆ ಮರಳಿ ಕರೆತರುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು . ಲಕ್ಷಾಂತರ ಜನ ಅಂತರ್ಜಾತಿ ವಿವಾಹವಾಗಿದ್ದು ಅವರೆಲ್ಲರನ್ನು ಒಂದೇ ವೇದಿಕೆಗೆ ತರುವ ಜೊತೆಗೆ ಅಂತರ್ಜಾತಿ ವಿವಾಹವಾದ ಹಿಂದೂಗಳು ಹಾಗೂ ಹಿಂದೂ ಧರ್ಮಕ್ಕೆ ಸೇರ್ಪಡೆಗೊಂಡ ಆರ್ಥಿಕವಾಗಿ ಹಿಂದೂಳಿದ ಬಡಕುಂಟುಂಬಗಳಿಗೆ ನೆರವು , ಶೈಕ್ಷಣಿಕ , ಸಾಮಾಜಿಕ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾದ ಗಮನಕ್ಕೆ ತರುವುದು ಎಂದು ವಿಜಯ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು . ವಿಶ್ವ ಹಿಂದೂ ಅಂತರ್ಜಾತಿ ವಿವಾಹ ಪ್ರೋತ್ಸಾಹಕ ಸಂಘದ ಗೌರವಾಧ್ಯಕ್ಷರಾಗಿ ಬೆಂಗಳೂರಿನ ರಾಮೋಹಳ್ಳಿಯ ಸಿದ್ಧಾರೂಢ ಮಿಷನ್‌ ಆಶ್ರಮದ ಡಾ || ಆರೂಢ ಭಾರತಿ ಸ್ವಾಮೀಜಿ , ಕಾರ್ಯನಿರ್ವಹಿಸುತ್ತಿದ್ದು ಉಪಾಧ್ಯಕ್ಷರಾಗಿ ರಾಮದುರ್ಗದ ಶ್ರೀ ಸಿದ್ಧಾರೂಢ ಮಠದ ಶ್ರೀ ಜಗದಾತ್ಮಾನಂದ ಸ್ವಾಮೀಜಿ , ಪ್ರಧಾನ ಕಾರ್ಯದರ್ಶಿ ಕಲ್ಲಯ್ಯಾ ಈ , ಹಿರೇಮಠ , ಕಾರ್ಯನಿರತರಾಗಿದ್ದಾರೆ ಎಂದರು . ಯಾವುದೇ ಭಾಗದ ಅಂತರ್ಜಾತಿ ವಿವಾಹವಾದಂತಹ ದಂಪತಿಗಳನ್ನು ಈ ಸಂಘದ ಸದಸ್ಯತ್ವವನ್ನು ಪಡೆದುಕೊಳ್ಳಲೂ ಫತ್ರಿಕಾ ಗೋಷ್ಠಿಯಲ್ಲಿ ಕೋರಲಾಗಿದೆ .

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಪ್ರಧಾನ ಕಾರ್ಯದರ್ಶಿ ಕಲ್ಲಯ್ಯ ಈ . ಹಿರೇಮಠ ಮೊ : 8971867407 ಆಪೀಸ್ ನಂ : 6361163100

City Today News

9341997936