Wonderla Bengaluru Unveils Special Republic Day Long-Weekend Offers

Ramanagara, January 24, 2026:
Marking the 77th Republic Day of India, Wonderla Bengaluru has announced exciting long-weekend offers and extended park experiences, inviting visitors to celebrate the national holiday with a perfect blend of thrill, entertainment and festive cheer. The special Republic Day promotions will be available from January 24 to 26, 2026.

As part of the celebrations, Wonderla Bengaluru is offering exclusive online discounts on 8-hour and 11-hour passes, along with attractive ticket-and-buffet combo deals. Guests can enjoy up to 25 per cent off on entry tickets and up to 30 per cent savings on ticket plus unlimited buffet packages, making it an ideal getaway for families and groups during the long weekend.
The Republic Day 11-Hour Pass allows visitors unlimited access to all land rides from 11:00 am to 10:00 pm, while water rides will remain operational until 6:00 pm, ensuring a full day of uninterrupted fun.

Enhancing the patriotic spirit, the park will be decked in Republic Day-themed décor, complemented by a grand parade, flag hoisting ceremony and an energetic DJ party, creating a lively and celebratory atmosphere throughout the day.

Speaking on the occasion, Dheeran Choudhary, Chief Operating Officer, Wonderla Holidays Ltd., said, “Republic Day is a celebration of national pride and unity. At Wonderla Bengaluru, we are excited to offer guests an engaging and value-driven way to enjoy the long weekend, with extended park hours, festive experiences and attractive offers. We look forward to welcoming families and friends for a memorable Republic Day celebration.”

All Republic Day offers are available exclusively through Wonderla’s online booking platform.

Bengaluru Park details: https://www.wonderla.com/offer/republic-day
Contact: +91 80372 30333 | +91 99455 57777

This Republic Day, Wonderla Bengaluru invites guests to celebrate the spirit of India with a day filled with fun, food and thrilling experiences.

City Today News 9341997936

#ಸತ್ಯಮೇವಜಯತೇ – ನಮ್ಮ ಸಂವಿಧಾನದ 75 ನೇ ವರ್ಷದ ಜನರ ಆಚರಣೆ

#SatyamevaJayate – a people’s celebration of the 75th year of our Constitution

ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿ

26 ನವೆಂಬರ್ 2023 ಭಾರತದ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ ಏಕೆಂದರೆ ಇದು ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ 75 ನೇ ವರ್ಷದ ಆರಂಭವಾಗಿದೆ. ಭಾರತದ ಸಂವಿಧಾನವು ನಮ್ಮ ರಾಷ್ಟ್ರದ ಪ್ರಜಾಸತ್ತಾತ್ಮಕ ಚೌಕಟ್ಟಿನ ಮೂಲಾಧಾರವಾಗಿ ನಿಂತಿದೆ, ಅದರ ಹುಟ್ಟಿನಿಂದಲೇ ದೇಶದ ಪ್ರಗತಿ, ಮೌಲ್ಯಗಳು ಮತ್ತು ಆಕಾಂಕ್ಷೆಗಳಿಗೆ ಮಾರ್ಗದರ್ಶನ ನೀಡುತ್ತದೆ. ಈ ಮಹತ್ವದ ಸಂದರ್ಭವು ನಮ್ಮ ಸಂವಿಧಾನದ ಪಯಣವನ್ನು ಪ್ರತಿಬಿಂಬಿಸಲು, ಅದರ ತತ್ವಗಳನ್ನು ಪುನರುಚ್ಚರಿಸಲು ಮತ್ತು ಭಾರತವನ್ನು ರೂಪಿಸಿದ ಪ್ರಜಾಪ್ರಭುತ್ವದ ಮನೋಭಾವವನ್ನು ಆಚರಿಸಲು ಅವಕಾಶವನ್ನು ಒದಗಿಸುತ್ತದೆ.#ReclaimConstitution, International Institute of Art Culture & Democracy (iiacd.org) RR Naik Seva Trust (rrnaikseva.org) ಈ ವಿಶಿಷ್ಟವಾದ, ವರ್ಷವಿಡೀ ಭಾರತೀಯ ಸಂವಿಧಾನದ 75 ನೇ ವರ್ಷದ ಜನರ ಆಚರಣೆಯನ್ನು ಪ್ರಸ್ತುತಪಡಿಸುತ್ತದೆ, ಇದು ಮಹತ್ವವನ್ನು ಪ್ರತಿಬಿಂಬಿಸುವ ಗುರಿಯನ್ನು ಹೊಂದಿದೆ. ಸಾಂವಿಧಾನಿಕ ಮೌಲ್ಯಗಳು ಮತ್ತು ಸಮಕಾಲೀನ ಕಾಲದಲ್ಲಿ ಅವುಗಳ ಪ್ರಸ್ತುತತೆಯ ಕುರಿತು ಚರ್ಚೆಗಳಲ್ಲಿ “ನಾವು, ಜನರು” ತೊಡಗಿಸಿಕೊಳ್ಳಿ. ಈ ಆಚರಣೆಯು ಭಾರತದ ಗುರುತನ್ನು ಮತ್ತು ಪ್ರಜಾಪ್ರಭುತ್ವ, ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಮೂಲಭೂತ ಹಕ್ಕುಗಳಿಗೆ ಅದರ ಬದ್ಧತೆಯನ್ನು ರೂಪಿಸುವಲ್ಲಿ ಸಂವಿಧಾನದ ಪಾತ್ರದ ಬಗ್ಗೆ ಆಳವಾದ ತಿಳುವಳಿಕೆಯನ್ನು ಬೆಳೆಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.ನಾವು ಭಾರತದ ಎಲ್ಲಾ ನಾಗರಿಕರಿಗೆ ತಮ್ಮ ಶಾಲೆಗಳು, ಕಾಲೇಜುಗಳು, ಕೆಲಸದ ಸ್ಥಳಗಳು ಅಥವಾ ಯಾವುದೇ ಸಮುದಾಯ ಕಾರ್ಯಕ್ರಮಗಳಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಆಚರಿಸಲು ಮನವಿ ಮಾಡುತ್ತೇವೆ. ಸಂವಿಧಾನವು ಅವರ ದೈನಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಜೀವನದ ಎಲ್ಲಾ ಹಂತಗಳ ಜನರನ್ನು ತೊಡಗಿಸಿಕೊಳ್ಳಲು ವಿನ್ಯಾಸಗೊಳಿಸಲಾದ ನಮ್ಮ ಬಹುಭಾಷಾ ಟೆಂಪ್ಲೇಟ್‌ಗಳನ್ನು ಹಂಚಿಕೊಳ್ಳಲು ನಾವು ಬಯಸುತ್ತೇವೆ. ಏರ್‌ಲೈನ್ಸ್ ಹೋಟೆಲ್‌ನಲ್ಲಿ (15 ಆಗಸ್ಟ್ 2023) ಸ್ವಾತಂತ್ರ್ಯ ದಿನದಂದು ಮಧ್ಯರಾತ್ರಿ ಧ್ವಜಾರೋಹಣ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಟರ್‌ನಲ್ಲಿ (21-22 ಅಕ್ಟೋಬರ್ 2023) ಗೊಂಬೆ ಹಬ್ಬ ದಸರಾ ಗೊಂಬೆಗಳ ಪ್ರದರ್ಶನದಂತಹ ನಮ್ಮ ಹಿಂದಿನ ಘಟನೆಗಳು ಸಂವಿಧಾನವನ್ನು ಅರ್ಥಮಾಡಿಕೊಳ್ಳುವಲ್ಲಿ ಗಮನಾರ್ಹ ಆಸಕ್ತಿಯನ್ನು ಹುಟ್ಟುಹಾಕಿದೆ ಮತ್ತು ಸಮಕಾಲೀನ ಪ್ರಸ್ತುತತೆ.ಬಾಬಾಸಾಹೇಬ್ ಅಂಬೇಡ್ಕರರ ಮಾತಿನಲ್ಲಿ “ಸಾಂವಿಧಾನಿಕ ನೈತಿಕತೆಯು ಸಹಜ ಭಾವನೆಯಲ್ಲ. ಅದನ್ನು ಬೆಳೆಸಬೇಕು. ನಮ್ಮ ಜನರು ಇನ್ನೂ ಕಲಿಯಬೇಕಾಗಿದೆ ಎಂದು ನಾವು ಅರಿತುಕೊಳ್ಳಬೇಕು.

ಭಾರತದ ಸಂವಿಧಾನದ 75 ನೇ ವರ್ಷವನ್ನು ಆಚರಿಸಲು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಗಳ ಪಟ್ಟಿ

ಸೈಕ್ಲಾಥಾನ್ – ಅಶೋಕ ಸ್ತಂಭದಿಂದ (ಜಯನಗರ) ವಿಧಾನಸೌಧದ ಮೂಲಕ ಸಂವಿಧಾನ ವೃತ್ತಕ್ಕೆ (ಯಶವಂತಪುರ) ಸೈಕಲ್ ಸವಾರಿ 26 ನವೆಂಬರ್ 2023 ರಂದು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತದೆ.

ರಕ್ತದಾನ ಶಿಬಿರ – #BleedForUnity ಎನ್ನುವುದು ರಕ್ತದಾನ ಮಾಡಲು ಜನರನ್ನು ಆಹ್ವಾನಿಸಲು ಮತ್ತು ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಿರುವ ಏಕತೆ, ಸಮಗ್ರತೆ ಮತ್ತು ಕೋಮು ಸೌಹಾರ್ದತೆಯ ಸಂದೇಶವನ್ನು ಕಳುಹಿಸುವ ಅಭಿಯಾನವಾಗಿದೆ. 26 ನವೆಂಬರ್ 2023 ರಂದು ಅಶೋಕ ಪಿಲ್ಲರ್ ಮತ್ತು ಸಂವಿಧಾನದ ವೃತ್ತದಲ್ಲಿ ರಕ್ತದಾನ ವ್ಯಾನ್‌ಗಳನ್ನು ನಿಲ್ಲಿಸಲಾಗುತ್ತದೆ.

ರಸಪ್ರಶ್ನೆ ಕಾರ್ಯಕ್ರಮ – ಸಂವಿಧಾನ ಮತ್ತು ಅದರ ರಚನೆಯ ಕುರಿತು ಪಾಪ್-ಅಪ್ ರಸಪ್ರಶ್ನೆಗಳು 26 ನವೆಂಬರ್ 2023 ರಂದು ನಗರದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ನಡೆಯಲಿದೆ ಮತ್ತು 26 ನವೆಂಬರ್ 2024 ರವರೆಗೆ ದೇಶದಾದ್ಯಂತ ನಡೆಸಲಾಗುವುದು

ಪ್ರದರ್ಶನಗಳು – ಭಾರತದ ಸಂವಿಧಾನದ ಕಲಾಕೃತಿಯನ್ನು 26 ನವೆಂಬರ್ 2023 ರಿಂದ ನಗರದಾದ್ಯಂತ ವಿವಿಧ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಪ್ರದರ್ಶಿಸಲಾಗುತ್ತದೆ. ಈ ಪ್ರದರ್ಶನವನ್ನು ಆಯೋಜಿಸಲು ಬಯಸುವ ದೇಶದಾದ್ಯಂತ ಯಾವುದೇ ಸಂಸ್ಥೆಗೆ ಲಭ್ಯವಿದೆ.

ಸಾಂಸ್ಕೃತಿಕ ಪ್ರದರ್ಶನಗಳು – ಸಾಂವಿಧಾನಿಕ ಮೌಲ್ಯಗಳ ವಿಷಯದ ಮೇಲೆ ವಿಶಿಷ್ಟವಾದ ಗೊಂಬೆಗಳ ಪ್ರದರ್ಶನವು ಅದನ್ನು ಹೋಸ್ಟ್ ಮಾಡುವ ಯಾವುದೇ ಸಂಸ್ಥೆಗೆ ಲಭ್ಯವಿದೆ. ಈ ಪ್ರದರ್ಶನವನ್ನು ಜನಪದ ಲೋಕ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಟರ್‌ನಲ್ಲಿ ಪ್ರೇಕ್ಷಕರು ಚೆನ್ನಾಗಿ ಸ್ವೀಕರಿಸಿದರು.

ಚರ್ಚೆಗಳು – #CultureKatte ಎಂಬುದು ಭಾರತದಾದ್ಯಂತ ಆಚರಣೆಯಲ್ಲಿರುವ ಸಾಂವಿಧಾನಿಕ ಮೌಲ್ಯಗಳನ್ನು ಪ್ರದರ್ಶಿಸಲು ಸಂಗೀತ/ನೃತ್ಯ/ರಂಗಭೂಮಿ ಪ್ರದರ್ಶನದೊಂದಿಗೆ ಸಂಯೋಜಿತವಾದ ಪ್ಯಾನಲ್ ಚರ್ಚೆಯಾಗಿದೆ.

26 ನವೆಂಬರ್ ಏಕೆ, 26 ಜನವರಿ ಅಲ್ಲ?

ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಿದಂತೆ ಭಾರತದ ಸಂವಿಧಾನವನ್ನು 26 ನವೆಂಬರ್ 1949 ರಂದು ಅಂಗೀಕರಿಸಲಾಯಿತು. 1929 ರಲ್ಲಿ, ಬ್ರಿಟಿಷ್ ಸರ್ಕಾರವು ಮುಂದಿಟ್ಟಿದ್ದ ಡೊಮಿನಿಯನ್ ಸ್ಥಾನಮಾನದ ಪ್ರಸ್ತಾಪವನ್ನು ಧಿಕ್ಕರಿಸಿ ಸಂಪೂರ್ಣ ಸ್ವಾತಂತ್ರ್ಯ ಅಥವಾ ಪೂರ್ಣ ಸ್ವರಾಜ್ಜಾಗಿ ಕರೆ ನೀಡಲಾಯಿತು. ‘ಸಂಪೂರ್ಣ ಸ್ವಾತಂತ್ರ್ಯವೇ ನಮ್ಮ ಧೈಯ’ ಎಂದು ಜವಾಹರಲಾಲ್ ನೆಹರು ಘೋಷಿಸಿದ್ದರು.ಒಂದು ವರ್ಷದ ನಂತರ ಎಂ.ಕೆ. ಗಾಂಧಿಯವರು 26 ಜನವರಿ 1930 ರಂದು ಒಂದು ಲೇಖನವನ್ನು ಪ್ರಕಟಿಸಿದರು, ‘ಇಂದು ನಾವು ಡೊಮಿನಿಯನ್ ಸ್ಥಾನಮಾನದಿಂದ ತೃಪ್ತರಾಗುವುದಿಲ್ಲ ಎಂದು ಘೋಷಿಸುವ ದಿನವಾಗಿದೆ. ನಮಗೆ ಪೂರ್ಣ ಸ್ವರಾಜ್ ಅಥವಾ ಸಂಪೂರ್ಣ ಸ್ವಾತಂತ್ರ್ಯ ಬೇಕು.’ ಈ ದಿಟ್ಟ ಮತ್ತು ಪ್ರತಿಭಟನೆಯ ಕ್ರಮವನ್ನು ಜನವರಿ 26 ರಂದು ಪೂರ್ಣ ಸ್ವರಾಜ್ ದಿವಸ್ ಎಂದು ಗುರುತಿಸಲು ಪ್ರಾರಂಭಿಸಿತು ಮತ್ತು ವಾಡಿಕೆಯಂತೆ ಆಚರಿಸಲಾಗುತ್ತದೆ. ಈ ಮಹತ್ವದ ಬೇಡಿಕೆಗೆ ಮರುಪ್ರಶ್ನೆಯಾಗಿ, ಸಂವಿಧಾನ ಸಭೆಯು ಹೊಸ ಸಂವಿಧಾನ, ಪೀಠಿಕೆ ಮತ್ತು ಎಲ್ಲವು 26 ಜನವರಿ 1950 ರಂದು ಸಂಪೂರ್ಣವಾಗಿ ಜಾರಿಗೆ ಬರಲಿದೆ ಎಂದು ನಿರ್ಧರಿಸಿತು, – ಆಕಾಶ್ ಸಿಂಗ್ ರಾಥೋರ್ ಅವರಿಂದ ಅಂಬೇಡ್ಕರ್ ಅವರ ಪೀಠಿಕೆಯಿಂದ ಆಯ್ದ ಭಾಗಗಳು

City Today News 9341997936

ಏಟ್ರಿಯಾ ವಿಶ್ವವಿದ್ಯಾಲಯ ಹಾಗೂ ಏಟ್ರಿಯಾ ತಾಂತ್ರಿಕ ಕಾಲೇಜು ವತಿಯಿಂದ ಅರ್ಥಗರ್ಬಿತ 73ನೆ ಗಣರಾಜೋತ್ಸವ

ಏಟ್ರಿಯಾ ವಿಶ್ವವಿದ್ಯಾಲಯ ಹಾಗೂ ಏಟ್ರಿಯಾ ತಾಂತ್ರಿಕ ಕಾಲೇಜು ವತಿಯಿಂದ 73ನೆ ಗಣರಾಜೋತ್ಸವ ಧ್ವಜಾರೋಹಣವನ್ನು ಹಿರಿಯ ಪತ್ರಕರ್ತ ಮೋಹನ ಕುಲಕರ್ಣಿ, ಪರಿವರ್ತನೆ ಸಮೂಹ ಮುಖ್ಯ ಅತಿಥಿಗಳಾಗಿ ಆಗಮಿಸಿ ನಡೆಸಿಕೊಟ್ಟರು.

ಈ ದಿನವನ್ನು ‘ ಸಮರ್ಪಣೆ ದಿನವಾಗಿ ‘ ಆಚರಿಸಿ ಪ್ರತಿ ನಾಗರಿಕರು ತಮ್ಮ ಇತಿ ಮಿತಿಯಲ್ಲಿ ಸಂಕಲ್ಪ ಮಾಡಿ ದೇಶದ ಶ್ರೇಯಸಿಗಾಗಿ ತಮ್ಮಂನ್ನು ತಾವು ಮನಸಾಕ್ಷಯಿಂದ ಸಮರ್ಪಿಸಿ ಬರುವ ಗಣತಂತ್ರ ದಿವಸ ನಿಮಗೆ ನೀವೇ ವರದಿ ಸಲ್ಲಿಸಿ ಕೊಳ್ಳಲು ಕರೆ ನೀಡಿದ್ರು.ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಎಂ. ಸ್. ರಾಜೇಂದ್ರ ಕುಮಾರ್, ಸಂವಿಧಾನದ ಇಣುಕ ನೋಟ ನೀಡ ಸಭೆಗೆ ಉಪಯುಕ್ತ ಮಾಹಿತಿ ಕೊಟ್ಟರು.

ಏಟ್ರಿಯಾ ವಿಶ್ವ ವಿದ್ಯಾಲಯದ ನಿರ್ದೇಶಕರು ಕೆ. ವಿ. ನಾರಾಯಣ ಸ್ವಾಮಿ ಸಂವಿಧಾನದ ನಾಗರಿಕರಿಗೆ ನೀಡಿದ ಸವಲತ್ತು ಹಾಗು ಜವಾಬ್ದಾರಿಯ ಸೂಕ್ಷ್ಮ ತೆಯನ್ನು ಸಾಮಾನ್ಯ ನಾಗರೀಕರಿಗೆ ಅರ್ಥವಾಗುವಂತೆ ತಿಳಿಸಿಕೊಟ್ಟರು. ಡಾ. ಐಶ್ವರ್ಯ ಮುಖ್ಯ ಅತಿಥಿಗಳ ಪರಿಚಯಿಸುತ್ತ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಂಡರು.

ವಂದನಾರ್ಪಣೆಯಲ್ಲಿ ಪ್ರಾಂಶುಪಾಲರು ಡಾ. ಟಿ. ನ. ಶ್ರೀನಿವಾಸ್ ಗಣರಾಜೋತ್ಸವ ಹಾಗೂ ಜನೆವರಿ 26 ರ ಮಹತ್ವ ತಿಳಿಸುತ್ತ, ಮುಖ್ಯ ಅತಿಥಿಗಳೂ ನೀಡಿದ ಸಲಹೆಗೆ ಮನ್ನಣೆ ನೀಡಿ ದೇಶ ಮತ್ತು ಏಟ್ರಿಯಾ ಸಂಸ್ಥೆ ಹಿತದ್ರಷ್ಠಿಯಲ್ಲಿ ಏರಡು ಬಹಿರಂಗ ಸಂಕಲ್ಪ ಎಲ್ಲರ ಪರವಾಗಿ ಕೈಗೊಂಡರು. ಸುಭದ್ರ ಹಾಗು ಸುಶೀಕ್ಷತ ದೇಶ ಕಟ್ಟುವದರಲ್ಲಿ ಶಿಕ್ಷಕ ರ ಪಾತ್ರದ ಮಹತ್ವದ ಮನವರಿಕೆ ಮಾಡಿಕೊಟ್ಟರು. ಒಟ್ಟಾರೆ ಗಣರಾಜ್ಯೋಸ್ತವ ಅರ್ಥಗರ್ಬಿತವಾಗಿ ಮೂಡಿ ಬಂತು.

City Today News

9341997936

ಬೆಂಗಳೂರಿನ ಯಾವುದೇ ಖಾಸಗಿ ಪ್ರತಿಷ್ಢಿತ ಕಚೇರಿಗಳು ಮಾಡದ ಕಾರ್ಯವನ್ನು ಡಿ.ಎಸ್.ಮ್ಯಾಕ್ಸ್ ನ ಉತ್ತರ ಕರ್ನಾಟಕದ ದಯಾನಂದ ಮಾಡಿ ತೋರಿಸಿದ್ದಾರೆ.

ವಸತಿ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದ ಡಿ.ಎಸ್.ಮ್ಯಾಕ್ಸ್ ನಿಂದ ಆಸ್ಪತ್ರೆ  ಸೇವೆ ಆರಂಭ.

ಬೆಂಗಳೂರು – ಬಡವರು ಹಾಗೂ ಮಧ್ಯಮ ವರ್ಗದವರಿಗೆ ಡಿ ಎಸ್ ಮ್ಯಾಕ್ಸ್ ಎಂಬ ಸಂಸ್ಥೆಯ ಮೂಲಕ  ಕಡಿಮೆ ದರದಲ್ಲಿ ಸೂರು ಒದಗಿಸಿದ್ದ ಉತ್ತರ ಕರ್ನಾಟಕದ ದಯಾನಂದ ಪ್ರತಿ ವರ್ಷ ನಾಡಿನ ಹಬ್ಬ,ದಿನಾಚರಣೆ ಗಳನ್ನು ವಿಶಿಷ್ಢವಾಗಿ ಆಚರಿಸುತ್ತಾರೆ. ಬೆಂಗಳೂರಿನ ಯಾವುದೇ ಖಾಸಗಿ ಪ್ರತಿಷ್ಢಿತ ಕಚೇರಿಗಳು ಮಾಡದ ಕಾರ್ಯವನ್ನು ಇವರು ಮಾಡಿ ತೋರಿಸಿದ್ದಾರೆ.

ಬೆಂಗಳೂರಿನ ಹೆಚ್. ಬಿ. ಆರ್. ಲೇ ಔಟ್ ನಲ್ಲಿರುವ ಕಚೇರಿಯಲ್ಲಿ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಕೋವಿಡ್ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಡಿ ಮ್ಯಾಕ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ್,  ಡಿ ಎಸ್ ಮ್ಯಾಕ್ಸ್ ಸಂಸ್ಥೆ ಕಳೆದ ಅನೇಕ ವರ್ಷಗಳಿಂದ ವಸತಿ ಸಮುಚ್ಚಯ ನಿರ್ಮಾಣದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು. ಇದುವರೆಗೂ 16 ಸಾವಿರ ಮನೆಗಳನ್ನು ನಿರ್ಮಿಸಿದ ಕೀರ್ತಿ ಹೊಂದಿದೆ. ಮಧ್ಯಮ ಹಾಗೂ ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಮನೆಗಳನ್ನು( ಅಪಾರ್ಟ್ ಮೆಂಟ್) ಒದಗಿಸಿದೆ. ಮುಂಬರುವ ದಿನಗಳಲ್ಲಿ ಬೆಂಗಳೂರಿನ ನಾಲ್ಕೈದು ಕಡೆ ವ್ಯವಸ್ಥಿತ ಆಸ್ಪತ್ರೆಗಳನ್ನು ಸ್ಥಾಪಿಸಿ ಕಡಿಮೆ ದರದಲ್ಲಿ ಸೇವೆ ಒದಗಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು..

ಯಾವುದೇ ಹಬ್ಬ, ರಾಷ್ಟ್ರೀಯ ಹಬ್ಬಗಳನ್ನು ಸಿಬ್ಬಂದಿಯೊಂದಿಗೆ ಆಚರಿಸುವುದು ನಮ್ಮ ಉದ್ದೇಶವಾಗಿದೆ. ಅದೇ ರೀತಿ ಸಿಬ್ಬಂದಿಯೊಂದಿಗೆ ಗಣರಾಜ್ಯೋತ್ಸವ ಆಚರಣೆಯನ್ನು ಆಚರಿಸಲಾಗಿದೆ ಎಂದು ತಿಳಿಸಿದರು.

City Today News

9341997935

72ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್. ಸಿ. ಪಾಟೀಲ ವಕೀಲರು ನೆರವೇರಿಸಿದರು

ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ತಂತ್ರಜ್ಞಾನದ ನಿದೇ೯ಶಕರು ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಐಟಿಬಿಟಿ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲನಗೌಡ ಎಸ್. ಪಾಟೀಲ( M.Tech) ಕೋರವಾರ ಇವರು ಸುಧೀಘ೯ವಾಗಿ ಎಳೆ ಎಳೆಯಾಗಿ ಸವ೯ತಂತ್ರ ಸ್ವಾತಂತ್ರ್ಯ ಭಾರತದ ಸಂವಿಧಾನ ರಚನೆ ಹಾಗೂ ಅದರ ಮಹತ್ವವನ್ನು ಕುರಿತು ಮಾತನಾಡಿ ಸಮಸ್ತ ದೇಶದ ಜನತೆಗೆ 72ನೇ ಗಣರಾಜ್ಯೋತ್ಸವದ ಹಾದಿ೯ಕ ಶುಭಾಶಯಗಳನ್ನು ಕೋರಿದರು

ಮಂಗಳವಾರ ಬೆಳಿಗ್ಗೆ, ದಿನಾಂಕ 26ನೇ ಜನೇವರಿ 2021 ರಂದು, ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದ ಶ್ರೀ ಹನುಮಾನ್ ವಿದ್ಯಾವರ್ಧಕ ಸಂಘದ ಶ್ರೀ ಎನ್. ಎಸ್. ಢವಳಗಿ ಸಂಯುಕ್ತ ಪದವಿ ಪೂವ೯ ಮಹಾವಿದ್ಯಾಲಯದಲ್ಲಿ, 72ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್. ಸಿ. ಪಾಟೀಲ ವಕೀಲರು ನೆರವೇರಿಸಿದರು. ಸಭೆಯನ್ನು ಉದ್ದೇಶಿಸಿ ಗಣರಾಜ್ಯೋತ್ಸವವನ್ನು ಕುರಿತು, ಸಂಸ್ಥೆಯ ನಿದೇ೯ಶಕರು, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ತಂತ್ರಜ್ಞಾನದ ನಿದೇ೯ಶಕರು ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಐಟಿಬಿಟಿ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲನಗೌಡ ಎಸ್. ಪಾಟೀಲ( M.Tech) ಕೋರವಾರ ಇವರು ಸುಧೀಘ೯ವಾಗಿ ಎಳೆ ಎಳೆಯಾಗಿ ಸವ೯ತಂತ್ರ ಸ್ವಾತಂತ್ರ್ಯ ಭಾರತದ ಸಂವಿಧಾನ ರಚನೆ ಹಾಗೂ ಅದರ ಮಹತ್ವವನ್ನು ಕುರಿತು ಮಾತನಾಡಿ ಸಮಸ್ತ ದೇಶದ ಜನತೆಗೆ 72ನೇ ಗಣರಾಜ್ಯೋತ್ಸವದ ಹಾದಿ೯ಕ ಶುಭಾಶಯಗಳನ್ನು ಕೋರಿದರು.

ಶ್ರೀ ಹನುಮಾನ ವಿದ್ಯಾವರ್ಧಕ ಸಂಘದ ಶ್ರೀ ಎನ್. ಎಸ್. ಢವಳಗಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಸಂಸ್ಥೆಯ ಸಿಬ್ಬಂದಿ ವಗ೯ ಅಧ್ಯಕ್ಷರ ನೇತ್ರೃತ್ವದಲ್ಲಿ ಮಲ್ಲನಗೌಡರಿಗೆ ಗೌರವ ಪೂರ್ವಕವಾದ ಸನ್ಮಾನ ವನ್ನು ಮಾಡಿದರು.

ಸಭೆಯಲ್ಲಿ ಸಂಸ್ಥೆಯ ನಿದೇ೯ಶಕರುಗಳಾದ ನಿಂಗನಗೌಡ ಸಿ ಪಾಟೀಲ ಹಾಗೂ ಹಿರಿಯರಾದ ನಿವ್ರೃತ್ತ ಶಿಕ್ಷಕ ನಾನಾಗೌಡ ಎಸ್ ಪಾಟೀಲ್, ಸಂಸ್ಥೆಯ ಕಾಯ೯ದಶಿ೯ ಶಿವಕಾಂತ ಎಸ್. ಚವ್ಹಾಣ, ಕಾಲೇಜಿನ ಪ್ರಾಚಾರ್ಯ ಎಸ್. ಜಿ. ಬಿರಾದಾರ, ಪ್ರೌಢಶಾಲೆ ನಿವ್ರೃತ್ತ ಮುಖ್ಯೋಪಾಧ್ಯಾಯ ಎಮ್. ಆರ್ ಚಿಂಚೋಳಿ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಎಸ್. ವಿ. ಜೋಶಿಯವರು ಸ್ವಾಗತಿಸಿದರು. ಉಪನ್ಯಾಸಕ ರಾದ ಎಮ್. ಆರ್. ಸಿರಸಂಗೀಮಠ ವಂದನಾಪ೯ಣೆ ಮಾಡಿದರು. ಉಪನ್ಯಾಸಕರುಗಳಾದ ಆಯ್. ಎಸ್. ವೀರಘಂಟೀಮಠ, ಎಸ್. ಎಸ್. ಮೋರಟಗಿ, ಎಸ್. ಬಿ. ಮಠ, ಅತಿಥಿ ಶಿಕ್ಷಕರುಗಳಾದ ಆರ್. ಎಚ್. ರಾಮನಳ್ಳಿ, ಎಮ್. ಆರ್. ಗುಂಡದ ಹಾಗೂ ಇನ್ನುಳಿದ ಸಿಬ್ಬಂದಿ ವಗ೯ & ಗ್ರಾಮದ ಮುಖಂಡರು, ವಿಧ್ಯಾರ್ಥಿಗಳು ಗಣರಾಜ್ಯೋತ್ಸವ ಆಚರಣೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಭಾವಂತ ವಿದ್ದಾಥಿ೯ಗಳಿಗೆ ಪ್ರತಿಭಾ ಪುರಸ್ಕಾರವನ್ನು ಕೈಗೊಂಡರು.

City Today News
9341997936