ಭಾರತದ ಪ್ರಮುಖ ಶಿಕ್ಷಣ ಸೇವೆಗಳ ಶಿಕ್ಷಣ ಸಂಸ್ಥೆ “ದೀಕ್ಷ”, ಫ್ರೌಢ ಶಿಕ್ಷಣ ಹಂತದಲ್ಲಿ ಬದಲಾವಣೆ ಬೇಕಿದೆಯೇ ಎಂಬ ವಿಷಯದ ಬಗ್ಗೆ ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ಚರ್ಚೆ

“ಮಗುವಿನ ಆರೋಗ್ಯವು ಕಲಿಕೆಯ ಕೇಂದ್ರ ವಿಷಯವಾಗಿದೆ”

ಆಧುನಿಕ ಜಗತ್ತಿನ ಸವಾಲುಗಳು ಎದುರಿಸಲು, ನಾಳಿನ ವಾಸ್ತುಶಿಲ್ಪಿಗಳಿಗೆ ಆಕಾರ ನೀಡಲು ಎದುರಾಗುವ ಶೈಕ್ಷಣಿಕ ಸವಾಲುಗಳ ಕುರಿತು ದೀಕ್ಷಾ ಸಂಸ್ಥೆ ನೇತೃತ್ವದಲ್ಲಿ ಚರ್ಚೆ ನಡೆಯಿತು.

ಬೆಂಗಳೂರು, 23 ಅಕ್ಟೋಬರ್ 2018: ಭಾರತದ ಪ್ರಮುಖ ಶಿಕ್ಷಣ ಸೇವೆಗಳ ಶಿಕ್ಷಣ ಸಂಸ್ಥೆ “ದೀಕ್ಷ”, ಫ್ರೌಢ ಶಿಕ್ಷಣ ಹಂತದಲ್ಲಿ ಬದಲಾವಣೆ ಬೇಕಿದೆಯೇ ಎಂಬ ವಿಷಯದ ಬಗ್ಗೆ ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ಚರ್ಚೆ ನಡೆಸಿತು. ಅದರಲ್ಲಿ ಸಮಿತಿಯ ನಾಯಕರು ಮತ್ತು ಶಿಕ್ಷಣ ಕ್ಷೇತ್ರದ ಪರಿಣತರಾದ ಸಾಮಿ ಉಲ್ಲಾ (ಸಿಇಒ, ಮಣಿಪಾಲ್ ಅಕಾಡೆಮಿ ಆಫ್ ಹೆಲ್ತ್ ಆಂಡ್ ಎಜುಕೇಶನ್), ಡಾ ಮೊಹಮ್ಮದ್ ಸಯೀದ್ (ಸಮಿತಿ ಸದಸ್ಯರು ಎನ್ಸಿಇಆರ್ಟಿ, ಸ್ಥಾಪಕ – ಡಾ ಸಯೀದ್ ಅಕಾಡೆಮಿ, ಬೆಂಗಳೂರು), ಡಾ. ಗೀತಾ ಅಪ್ಪಚು (ಸೈಕಾಲಜಿಸ್ಟ್, ಸ್ಥಾಪಕಿ – ಸ್ವಪ್ರೆರನ್) ಮತ್ತು ಪ್ರಶಾಂತ್ ಪ್ರಕಾಶ್ (ವ್ಯವಸ್ಥಾಪಕ ಪಾಲುದಾರ, ಅಕೆಲ್) ಪಾಲ್ಗೊಂಡರು.
ಭಾರತದ ಶಿಕ್ಷಣ ಕ್ಷೇತ್ರ ರೋಮಾಂಚಕ ಘಟ್ಟ ತಲುಪಿದೆ. ಹೊಸ ಸವಾಲುಗಳಿದ್ದರೂ ಹೊಸ ಅವಕಾಶಗಳು ಹೆಬ್ಬಾಗಿಲು ತೆರೆದಿದೆ. ಅದು ವಿಕಸನಗೊಳ್ಳುತ್ತಿರುವ ತಂತ್ರಜ್ಞಾನಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಅದರೊಂದಿಗೆ ವಿಭಿನ್ನ ಮಾಧ್ಯಮಗಳ ಮೂಲಕ ಮಗುವಿನ ಆರೋಗ್ಯ ಯೋಗಕ್ಷೇಮವನ್ನು ಖಚಿತಪಡಿಸುವ ಪರಿಸರ ವ್ಯವಸ್ಥೆಯ ಅಗತ್ಯವೂ ನಮಗಿದೆ..

ದೀಕ್ಷ ನಡೆಸಿದ ಈ ಆತಿಥೇಯ ಚರ್ಚೆಯು ಈ ಹೊಸ ಪ್ರಕಾರದ ಚಿಂತನೆಗೆ ವೇದಿಕೆ ಒದಗಿಸಿತು. ಭಾರತದಲ್ಲಿ ಶಿಕ್ಷಣದ ಯಶಸ್ಸಿಗೆ ಸೂತ್ರವನ್ನು ರೂಪಿಸುವ ಜವಾಬ್ದಾರಿಯನ್ನು ಇಲ್ಲಿ ಪಾಲ್ಗೊಂಡ ತಜ್ಞರು ಹೊತ್ತುಕೊಂಡರು.
ಈ ಕಾರ್ಯಕ್ರಮದ ಜವಾಬ್ದಾರಿ ಹೊತ್ತಿದ್ದ ದೀಕ್ಷಾ ಸಂಸ್ಥಾಪಕ ಹಾಗೂ ಎಂಡಿ ಡಾ. ಶ್ರೀಧರ್ ಜಿ, “ಇಂದಿನ ಪ್ಯಾನಲ್ ಚರ್ಚೆಯ ಉದ್ದೇಶವು ಪ್ರಸ್ತುತ ಮಾಧ್ಯಮಿಕ ಶಿಕ್ಷಣ ಹಂತದಲ್ಲಿರುವ ಸವಾಲುಗಳನ್ನು ಎದುರಿಸುವುದು ಮತ್ತು ನಮ್ಮ ಯುವ ನಾಗರಿಕರ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಅತ್ಯುತ್ತಮ ಪರಿಹಾರಗಳನ್ನು ಒದಗಿಸುವುದು. ಭಾರತದ ಪ್ರೌಢ ಶಿಕ್ಷಣ ವ್ಯವಸ್ಥೆಗೆ ಬದಲಾವಣೆಯ ಅಗತ್ಯವಿದೆಯೇ ಎಂಬುದು ನಮ್ಮ ಮೊದಲ ಪ್ರಶ್ನೆ. ಶಿಕ್ಷಣ ಕ್ಷೇತ್ರದ ಮುಂದಿನ ಹಾದಿ ಯಾವುದು? ಶಿಕ್ಷಣದ ಗುಣಮಟ್ಟವನ್ನು ಮತ್ತು ಮಕ್ಕಳ ಸಮಗ್ರ ಬೆಳವಣಿಗೆಯನ್ನು ಅಡ್ಡಿಪಡಿಸದೆ ವಿಕಸಿಸುತ್ತಿರುವ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಜಾಗತಿಕ ಒತ್ತಡಗಳೊಂದಿಗೆ ಹೇಗೆ ಮುಂದುವರಿಯುವುದು?” ಎಂಬ ಪ್ರಶ್ನೆ ಎತ್ತಿದರು.
ಚರ್ಚೆ ಐದು ಮುಖ್ಯ ಅಂಶಗಳ ಸುತ್ತು ಸುತ್ತಿ ಕೊನೆಗೆ ಪ್ರಶ್ನೋತ್ತರದೊಂದಿಗೆ ಕೊನೆಗೊಂಡಿತು.

ಚರ್ಚೆಯು ಮೂಲಭೂತವಾಗಿ ಮಗುವಿನ ಯೋಗಕ್ಷೇಮದತ್ತ ಗಮನ ಹರಿಸಿತು. ಗಟ್ಟಿಯಾದ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಅಡಿಪಾಯದೊಂದಿಗೆ ಸಂಬಂಧಗಳನ್ನು ನಿರ್ಮಿಸಿ ಬೆಳೆಸುವುದು, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯಗಳನ್ನು ಹೇಳಿಕೊಡುವುದು ಮತ್ತು ಹೊಸ ಕೌಶಲ್ಯಗಳನ್ನು ಕಲಿಸುವುದರ ಬಗ್ಗೆ ಚರ್ಚೆ ನಡೆಯಿತು. ಕಾರ್ಯಕ್ರಮದಲ್ಲಿ ಶಿಕ್ಷಣದೊಂದಿಗೆ ಇತರ ಉತ್ತಮ ಕಾರ್ಯಕ್ರಮಗಳನ್ನು ಸೇರಿಸುವ ಅಗತ್ಯದ ಬಗ್ಗೆ ತಿಳಿಸಲಾಯಿತು.
ಅಲ್ಲಿ ಚರ್ಚಿಸಲಾದ ಇನ್ನೊಂದು ಅಂಶವೆಂದರೆ, ಶೈಕ್ಷಣಿಕ ಸಂಸ್ಥೆಯು ಮಕ್ಕಳ ಸಮತೋಲನ ಬೆಳವಣಿಗೆಗೆ ಹೇಗೆ ನೆರವಾಗಬಹುದು? ಪರಿಕಲ್ಪನಾ ತಿಳುವಳಿಕೆ ಮತ್ತು ಕಲಿಕೆಯ ನಡುವಿನ ವ್ಯತ್ಯಾಸವನ್ನು ವಿಶ್ಲೇಷಿಸಿ ಶೈಕ್ಷಣಿಕ ಪಠ್ಯವನ್ನು ಸರಳಗೊಳಿಸುವ ಅಗತ್ಯವನ್ನು ಒತ್ತಿಹೇಳಲಾಯಿತು. ಅನಾರೋಗ್ಯಕರ ಪರೀಕ್ಷೆಯ ಒತ್ತಡವನ್ನು ಶಮನಗೊಳಿಸಲು ಸಹಾಯ ಮಾಡುವ ಸಿಂಕ್ರೊನೈಸ್ಡ್ ಕಲಿಕೆಯ ವ್ಯವಸ್ಥೆಯನ್ನು ನಿರ್ಮಿಸುವುದು ಇಂದಿನ ಅಗತ್ಯಗಳಲ್ಲಿ ಒಂದು ಎಂಬ ತೀರ್ಮಾನಕ್ಕೆ ಬರಲಾಯಿತು.
ಶಿಕ್ಷಣವನ್ನು ಇನ್ನಷ್ಟು ಸಂವಾದಾತ್ಮಕವಾಗಿ ಮಾಡಲು ಟೆಕ್ ಆಧಾರಿತ ಶೈಕ್ಷಣಿಕ ಕಾರ್ಯಕ್ರಮಗಳು ಮಕ್ಕಳಿಗೆ ಹೇಗೆ ನೆರವಾಗುತ್ತವೆ, ತಂತ್ರಜ್ಞಾನ ಆಧಾರಿತ ಕಲಿಕೆ ವೈಯಕ್ತಿಕ ಮಟ್ಟದಲ್ಲಿ ಮಕ್ಕಳಿಗೆ ನೆರವಾಗುತ್ತದೆ ಎಂಬುದರ ಬಗ್ಗೆ ಮೂಲಭೂತ ಚರ್ಚೆ ನಡೆಯಿತು. ಅಗತ್ಯಗಳು ಮತ್ತು ಬೇಡಿಕೆಗಳ ನಡುವಿನ ಸಮತೋಲನವನ್ನು ಕಾಪಾಡುವುದು ಸುಲಭವಲ್ಲ. ಇಂದು ಶೈಕ್ಷಣಿಕ ಸಂಸ್ಥೆಗಳಿಗೆ, ಹಿಂದೆಂದಿಗಿಂತ ಹೆಚ್ಚು, ಗುಣಮಟ್ಟದ ಸಂಪನ್ಮೂಲಗಳನ್ನು ಒದಗಿಸಿ ಸಮತೋಲನ ಕಾಪಾಡಿಕೊಳ್ಳುವ ಜವಾಬ್ದಾರಿಯಿದೆ. ಬಳಿಕ ಚರ್ಚೆಯಲ್ಲಿ ಸರ್ಕಾರಿ ಶಾಲೆಯಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣದ ಬಗ್ಗೆ ಬೆಳಕು ಚೆಲ್ಲಲಾಯಿತು.
ಅಂತಿಮವಾಗಿ, ಈ ಚರ್ಚೆಯ ಮುಕ್ತಾಯಗೊಳಿಸಿದ ಮೂಲ ಪ್ರಶ್ನೆಯೆಂದರೆ ‘ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣ ಹೇಗೆ ನೀಡಬಹುದು ಹಾಗು ಮಕ್ಕಳು ನೈಜ ಜಗತ್ತನ್ನು ಎದುರಿಸಲು ಹೇಗೆ ಸಿದ್ಧರಾಗಬಹುದು?’ ಪ್ರತಿ ಶೈಕ್ಷಣಿಕ ಸಂಸ್ಥೆಗಳು ಮಕ್ಕಳ ಯೋಗಕ್ಷೇಮಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳತ್ತ ಗಮನ ಹರಿಸುವುದು ಮುಖ್ಯವಾಗಿದೆ ಮತ್ತು ಉತ್ತಮ ಗುಣಮಟ್ಟದ ವಿದ್ಯಾಭ್ಯಾಸದಿಂದ ಮಕ್ಕಳನ್ನು ಸಹಜ ಪ್ರಪಂಚಕ್ಕೆ ಪರಿಚಯಿಸಬೇಕು ಎಂದು ತೀರ್ಮಾನಿಸಿದರು.

ಉನ್ನತ ಪ್ರೌಢ ಶಿಕ್ಷಣ ವ್ಯವಸ್ಥೆಯ ಚರ್ಚೆಯ ನಡೆಸಬೇಕಾದ ಮಹತ್ವದ ಕುರಿತು ಬೆಳಕು ಚೆಲ್ಲಿದ ದೀಕ್ಷಾ ಸಿಇಒ ಪ್ರಮೋದ್ ಗುಪ್ತಾ, “ಇಂದು ಭಾರತದಲ್ಲಿ ಶಿಕ್ಷಣ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಕಳೆದ 20 ವರ್ಷಗಳಿಂದ ದೀಕ್ಷಾ ನಿರಂತರ ಶಿಕ್ಷಣ, ಪರಿಕಲ್ಪನೆ ಅರ್ಥ, ಮೌಲ್ಯ-ಆಧಾರಿತ ಶಿಕ್ಷಣ ಮತ್ತು ಬೋಧನೆಗಳಿಂದ ಸಮಗ್ರ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಲು ಶ್ರಮಿಸುತ್ತಿದೆ. ಈ ಚರ್ಚಾ ಕಾರ್ಯಕ್ರಮದ ಮೂಲಕ ಹಲವಾರು ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಯಿತು ಮತ್ತು ಭಾರತಕ್ಕೆ ಪ್ರಕಾಶಮಾನವಾದ ಶೈಕ್ಷಣಿಕ ಭವಿಷ್ಯದ ಅಡಿಪಾಯವನ್ನು ಹಾಕಲು ನೆರವಾಯಿತು” ಎಂದರು.

ದೀಕ್ಷಾ “ಪ್ರತಿಯೊಂದು ಮಗುವಿನ ಗೆಲುವಿಗಾಗಿ” ಕೆಲಸ ಮಾಡುತ್ತದೆ. ಮೂಲ ಚಿಂತನೆಯನ್ನು ಪೋಷಿಸಿ ಕಾಳಜಿಯ ಶೈಕ್ಷಣಿಕ ವಾತಾವರಣವನ್ನು ಒದಗಿಸಿ, ಸಮರ್ಥ ಯುವಕರನ್ನು ಸೃಷ್ಟಿಸುತ್ತದೆ, ಅವರನ್ನು ಸಮಾಜದಲ್ಲಿ ಜವಾಬ್ದಾರಿಯುತ ಭಾವನೆಯ ವಿಶ್ವಾಸಾರ್ಹ ವ್ಯಕ್ತಿಗಳನ್ನಾಗಿ ಮಾಡುವ ಗುರಿ ಹೊಂದಿದೆ.

City Today News

(Tj vision media)

Leave a comment

This site uses Akismet to reduce spam. Learn how your comment data is processed.