ಹೋರಾಟ ಮತ್ತು ಯಾತನೆ ಹೋರಾಟ ಮತ್ತು ಯಾತನೆಗಳನ್ನು ಸಹಿಸಲು ಸಿದ್ಧನಿಲ್ಲದ ಯಾವ ತುಳಿತಕ್ಕೊಳಗಾದವನೂ ದೊಡ್ಡದನ್ನು ಸಾಧಿಸಲಾರ- *ಡಾ.ಬಾಬಾಸಾಹೇಬ್ ಅಂಬೇಡ್ಕರ್

*ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ತಮ್ಮ ೫೫ನೇ ಹುಟ್ಟು ಹಬ್ಬದ ಪ್ರಯುಕ್ತ ೧೯೪೭ರ ಏಪ್ರಿಲ್ ೧೩ರ ರಾತ್ರಿ ತನ್ನ ಅನುಯಾಯಿಗಳಿಗೆ ನೀಡಿದ ಸಂದೇಶ*

*”ಹೋರಾಟ ಮತ್ತು ತ್ಯಾಗಗಳಿಂದ ಮಾತ್ರ ಶ್ರೇಷ್ಠತನ ಬರುತ್ತದೆ. ಪುರುಷತ್ವವಾಗಲೀ ದೈವತ್ವವಾಗಲೀ ಅಗ್ನಿ ಪರೀಕ್ಷೆಗೆ ಒಳಗಾಗದೆ ಸಿದ್ಧಿಸುವುದಿಲ್ಲ. ಅಗ್ನಿ ಪರಿಶುದ್ಧಗೊಳಿಸುತ್ತದೆ ಮತ್ತು ಬಲಿಷ್ಠಗೊಳಿಸುತ್ತದೆ. ಅಂತೆಯೇ ಹೋರಾಟ ಮತ್ತು ಯಾತನೆ ಹೋರಾಟ ಮತ್ತು ಯಾತನೆಗಳನ್ನು ಸಹಿಸಲು ಸಿದ್ಧನಿಲ್ಲದ ಯಾವ ತುಳಿತಕ್ಕೊಳಗಾದವನೂ ದೊಡ್ಡದನ್ನು ಸಾಧಿಸಲಾರ. ಅವನು ತನ್ನ ಭವಿಷ್ಯ ನಿರ್ಮಾಣಕ್ಕಾಗಿ ಎಲ್ಲ ಸುಖ ಸವಲತ್ತುಗಳನ್ನೂ ಸದ್ಯದ ಅಗತ್ಯಗಳನ್ನು ಕೂಡ ತ್ಯಾಗ ಮಾಡಲು ಸಿದ್ಧನಿರಬೇಕು. ಬೈಬಲ್ಲಿನ ಪರಿಭಾಷೆಯಲ್ಲಿ ಹೇಳುವುದಾದರೆ, ‘ಜೀವನ ಸ್ಪರ್ಧೆ’ಯಲ್ಲಿ ಎಲ್ಲರನ್ನೂ ಆಮಂತ್ರಿಸಿದರೂ , ಆಯ್ಕೆ ಹೊಂದುವವರು ಕೆಲವರು ಮಾತ್ರ ಏಕೆ? ಕಾರಣ ಸ್ಪಷ್ಟವಿದೆ. ಈ ‘ಜೀವನ ಸ್ಪರ್ಧೆ’ಯಲ್ಲಿ ತುಳಿತಕ್ಕೊಳಗಾದವರಲ್ಲಿ ಬಹುಪಾಲು ಮಂದಿ ದೊಡ್ಡದನ್ನು ಸಾಧಿಸಲು ವಿಫಲರಾಗುತ್ತಾರೆ. ಏಕೆಂದರೆ, ಭವಿಷ್ಯದ ಅಗತ್ಯಗಳಿಗಾಗಿ ವರ್ತಮಾನದ ಭೋಗ ಜೀವನವನ್ನು ತೊರೆಯುವ ಕೆಚ್ಚಾಗಲೀ ಸಂಕಲ್ಪವಾಗಲೀ ಅವರಲ್ಲಿರುವುದಿಲ್ಲ….ನನ್ನ ಸಂದೇಶವೆಂದರೆ ಹೋರಾಟ,ಹೆಚ್ಚು ಹೋರಾಟ; ಪರಿತ್ಯಾಗ, ಹೆಚ್ಚು ಪರಿತ್ಯಾಗ. ಮಾಡಿರುವ ತ್ಯಾಗಗಳು ಅಥವಾ ಅನುಭವಿಸಿದ ಯಾತನೆಗಳನ್ನು ಪರಿಗಣಿಸದೆ ನಡೆಸಿದ ಹೋರಾಟ ಮತ್ತು ಹೋರಾಟ ಮಾತ್ರವೇ ಅವರಿಗೆ ಬಿಡುಗಡೆ ತರುತ್ತದೆ. ಮತ್ತಾವುದೂ ಅಲ್ಲ “ಅಸ್ಪೃಶ್ಯರು ಸಮಷ್ಠಿಯ ಇಚ್ಚಾಶಕ್ತಿಯನ್ನು ಬೆಳೆಸಿಕೊಂಡು ಎದ್ದು ನಿಂತು ಪ್ರತಿಭಟಿಸಬೇಕು. ತಾವು ಕೈಗೊಂಡ ಕೆಲಸದ ಪಾವಿತ್ರ್ಯತೆಯಲ್ಲಿ ನಂಬಿಕೆಯಿರಿಸಿ ಉದ್ದೇಶ ಸಾಧನೆಗಾಗಿ ಒಂದು ಒಗ್ಗಟಿನ ತೀರ್ಮಾನ ತೆಗೆದುಕೊಳ್ಳಬೇಕು. ನಿಮ್ಮ ಕಾರ್ಯ ಎಷ್ಟು ಅಗಾಧವದುದು ಉದ್ದೇಶ ಎಷ್ಟೂ ಉದಾತ್ತವಾದದ್ದು ಎಂದರೆ ಎಲ್ಲ ಅಸ್ಪೃಶ್ಯರೂ ಒಟ್ಟಿಗೆ ಸೇರಿ ಹೀಗೆ ಪ್ರಾರ್ಥಿಸಬೇಕು: *” ತಾವು ಹುಟ್ಟಿದ ಜನಾಂಗವನ್ನು ಮೇಲೆತ್ತುವ ಕರ್ತವ್ಯದಲ್ಲಿ ನಿರತರಾಗಿರುವವರೇ ಧನ್ಯರು. ತಮ್ಮ ಅಮೂಲ್ಯ ಸಮಯವನ್ನು ತಮ್ಮ ದೇಹಾತ್ಮಗಳ ಬಲವನ್ನು ಹಾಗೂ ಅಲ್ಪ ಕಾಣಿಕೆಯನ್ನು ನೀಡಿ ದಾಸ್ಯವನ್ನು ಪ್ರತಿಭಟಿಸುವವರೇ ಧನ್ಯರು. ಒಳ್ಳೆಯದು ಬರಲಿ ಕೆಟ್ಟದ್ದು ಬರಲಿ ಬಿಸಿಲಿರಲಿ ಬಿರುಗಾಳಿ ಬೀಸಲಿ ಕೀರ್ತಿ ಬರಲಿ ಅಪಕೀರ್ತಿ ಬರಲಿ ಅಸ್ಪೃಶ್ಯರೆಲ್ಲರೂ ತಮ್ಮ ಪೌರುಷವನ್ನು ಸಂಪೂರ್ಣವಾಗಿ ಮರಳಿ ಪಡೆಯುವವರೆಗೆ ವಿರಮಿಸುವುದಿಲ್ಲ ಎಂದು ದೃಢ ಸಂಕಲ್ಪ ಹೊಂದಿರುವವರೇ ಧನ್ಯರು”*

ಬಾಬಾಸಾಹೇಬರ ಈ ಮಾತನ್ನು ಇದುವರೆಗೆ ಎಷ್ಟು ಜನ ಪಾಲಿಸುತ ಬಂದಿದ್ದಾರೊ ಗೊತ್ತಿಲ್ಲ ಆದರೆ ಇನ್ನೂ ಮುಂದಾದರು ಈ ಮಹಾನ್ ಚೇತನವಾದ ತಂದೆಯ ಮಾತನ್ನು ನಾವೇಲ್ಲರೂ ತಪ್ಪದೇ ಪಾಲಿಸಬೇಕಾಗಿದೆ ಮತ್ತು ಪಾಲಿಸೋಣ.

City Today News

(Tj vision media)

9341997936

Leave a comment

This site uses Akismet to reduce spam. Learn how your comment data is processed.