
ದಿನಾಂಕ: 31/10/18
King cobra
Sc:Ophiophagus Hannah
ವಿಷಕಾರಿ
ಸ್ಥಳ: ಆಡಿನ ಕೊಟ್ಟಿಗೆ, ಹಣಗೆರೆ ವನ್ಯಜೀವಿ ವಲಯ, ಶಿವಮೊಗ್ಗ .
ಸುಮಾರು ಒಂದು ವಾರದಿಂದ ಭತ್ತಗದ್ದೆ ಹಾಗು ಅಡಿಕೆತೋಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಾವನ್ನು ಗ್ರಾಮಸ್ಥರ ಮನವಿ ಮೇರೆಗೆ ಹಾಗೂ ಅರಣ್ಯ ಇಲಾಖೆ ಸಹಕಾರದೊಂದಿಗೆ ಸೆರೆ ಹಿಡಿದು ಸಮೀಪದ ಕಾಡಿಗೆ ಬಿಡಲಾಯಿತು. ಸಾಮಾನ್ಯವಾಗಿ ಗದ್ದೆ, ತೋಟಗಳಲ್ಲಿ ಕಾಣಿಸುವ ಕಾಳಿಂಗಗಳನ್ನು ಹಿಡಿವ ಅಗತ್ಯ ಇರುವುದಿಲ್ಲ , ಆದರೆ ಮೇಲಿನ ಘಟನೆಯಲ್ಲಿ ಕಾಳಿಂಗ ಪದೇ ಪದೇ ಜನರ ಕಣ್ಣಿಗೆ ಬಿದ್ದು ಜನರು ಭಯಗೊಳ್ಳಲು ಕಾರಣವಾಗಿತ್ತು.
ಕಾಳಿಂಗಗಳು ಹಾವುಗಳನ್ನ ಮಾತ್ರ ತಿನ್ನುತ್ತವೆ (ಅಪರೂಪಕ್ಕೆ ಉಡಗಳನ್ನು ತಿನ್ನುತ್ತವೆ)
ಭತ್ತದ ಗದ್ದೆಗಳಲ್ಲಿ ನಾಗರಹಾವು, ಕೇರೆ, ಕೊಳಕು ಮಂಡಲಗಳನ್ನು ಹುಡುಕಿ ಆಹಾರ ಸಿಗದೆ ಜನರ ಕಣ್ಣಿಗೆ ಆಗಾಗ ಕಾಣಿಸಿರಬೇಕು.ಆಹಾರ ತಿಂದ ನಂತರ ಕಾಳಿಂಗಗಳು ಯಾರ ಕಣ್ಣಿಗೂ ಬೀಳದೆ ಸುರಕ್ಷಿತವಾದ ಜಾಗವನ್ನು ಸೇರುತ್ತವೆ.
ಹಾವನ್ನು ರಕ್ಷಣೆ ಮಾಡಿದ ಸ್ನೇಕ್ ನಾಗರಾಜ್ ಬೆಳ್ಳೂರು, ನಂತರ ಸ್ಥಳೀಯ ಜನರಿಗೆ ಹಾವುಗಳ ಬಗ್ಗೆ ತಿಳುವಳಿಕೆ ಹಾಗು ಹಾವಿನ ಕಡಿತಗಳ ನಿರ್ವಹಣೆ ಮಾಡುವ ವಿಧಾನ ತಿಳಿಸಲಾಯಿತು.
Dyrfo ಪರಮೇಶ್ವರ್, ಪಾರೆಸ್ಟ್ ಗಾರ್ಡ್ ಔರಂಗಜೇಬ್ ಜೊತೆಗಿದ್ದರು.
City Today News
(Tj vision media)
9341997936
