
ಸುಧಾಮನಗರದಲ್ಲಿ ಎಂ.ಎ.ಅಪೇರಲ್ಸ್ ಮಾಲೀಕರು ಅಲ್ಪಸಂಖ್ಯಾತ ಮುಖಂಡರು,ಸಮಾಜ ಸೇವಕರಾದ ಅಬ್ದುಲ್ ಮುನೀರ್ ರವರ ನೇತೃತ್ವದಲ್ಲಿ ಭಾವೈಕ್ಯತೆ ಸಾರುವ ದೀಪಾವಳಿ ಅಚರಣೆ ಹಿಂದು ಮತ್ತು ಮುಸ್ಲಿಂ ಭಾಂಧವರು ಒಟ್ಟಾಗಿ ಸೇರಿ ಮಾಡಿದರು .ಮೊದಲಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ್ಮೀ ಪೂಜೆ ಮಾಡಲಾಯಿತು ,ನಂತರ ಬಂದ ಅತಿಥಿಗಳಿಗೆ ಅಬ್ದುಲ್ ಮುನೀರ್ ರವರು ಸಿಹಿ,ತಿಂಡಿ ವಿತರಣೆ ಮಾಡಿದರು.
ತದನಂತರ ಮಾತನಾಡಿ ಸಮಾಜ ಸೇವಕರಾದ ಅಬ್ದುಲ್ ಮುನೀರ್ ರವರು ಹಿಂದು ,ಮುಸ್ಲಿಂ ಸಮುದಾಯದ ಹಬ್ಬಗಳು ಸಮಾಜದ ಸಂಘಟನೆ ,ಒಗ್ಗಟ್ಟು ಮತ್ತು ಐಕ್ಯತೆ ಸಾರುವ ಹಬ್ಬಗಳಾಗಿ .ಇಂದು ನಮ್ಮಲ್ಲಿ ಭೇದಭಾವವಿಲ್ಲ ,ನಾವೆಲ್ಲರು ಒಂದೇ ,ಮಾನವೀಯತೆ ಎಲ್ಲರಲ್ಲು ಇರಬೇಕು .ಜಾತಿ ಏನ್ನುವುದು ಮನುಷ್ಯ ಮಾಡಿರುವುದು ,ದೇವರ ಮುಂದೆ ಎಲ್ಲರು ಒಂದೇ .ದೀಪಾವಳಿ ,ರಂಜಾನ್ ,ಬಕ್ರೀದ್ ,ಗಣೇಶ ಹಬ್ಬ ಎಲ್ಲ ಹಬ್ಬವನ್ನು ಹಿಂದು ,ಮುಸ್ಲಿಂ ಭಾಂಧವರು ಒಟ್ಟಾಗಿ ಅಚರಣೆ ಮಾಡುತ್ತೆವೆ .ಮಾನವ ಜನ್ಮ ದೊಡ್ಡದು,ಅದನ್ನು ಸಮಾಜದ ಒಳಿತಿಗಾಗಿ ಉಪಯೋಗ ಮಾಡಬೇಕು ಎಂಬುದು ನಮ್ಮೆಲ್ಲರ ಆಶಯ ವಾಗಬೇಕು. ದೀಪದಿಂದ, ದೀಪ ಬೆಳಗುವ ಈ ಶುಭಾ ದಿನದಂದು ಎಲ್ಲರ ಬಾಳಿನಲ್ಲಿ ಕಷ್ಟವೆಂಬ ಕತ್ತಲು ದೂರವಾಗಿ ,ಸುಖ,ಶಾಂತಿ ಮತ್ತು ಐಶ್ವರ್ಯ ಎಂಬ ಬೆಳಕು ಎಲ್ಲರ ಬಾಳಿನಲ್ಲಿ ಮೂಡಲಿ ,ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಹೇಳಿದರು.
City Today News
(Tj vision media)
9341997936
