ಸರ್ಕಾರ ಏಕೆ ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ, ಇದರ ಹಿಂದಿನ ಉದ್ದೇಶವೇನೆಂದು ನಮಗೆ ತಿಳಿಯುತ್ತಿಲ್ಲ, ಇದಕ್ಕೆ ನಮ್ಮ ಬೆಂಬಲವೂ ಇಲ್ಲ – ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ 

ಬೆಳಗಾವಿ
“ಟಿಪ್ಪು ಜಯಂತಿಯನ್ನು ಸರ್ಕಾರ ಯಾವ ಕಾರಣಕ್ಕಾಗಿ ಆಚರಿಸುತ್ತಿದೆ? ಅವನು ನಮ್ಮ ಕುಟುಂಬಕ್ಕೆ ದೊಡ್ಡ ಪ್ರಮಾಣದಲ್ಲಿ ತೊಂದರೆ ನೀಡಿದ್ದ.ಆತ ಮಹಾರಾಣಿ ಲಕ್ಷ್ಮಮ್ಮಣ್ಣಿ ದೇವಿಯವರನ್ನು ಶ್ರೀರಂಗಪಟ್ಟಣದ ಜನನ ಮಂಟಪದಲ್ಲಿ ನಿರ್ಬಂಧ ರೂಪದಲ್ಲಿ ಇಟ್ಟಿದ್ದ. ಅವನ ದಾಳಿಗಳಿಂದ ಮೈಸೂರಿನ ಅರಸರಿಗೆ ಭಾರೀ ನೋವಾಗಿತ್ತು” ಎಂದಿದ್ದಾರೆ.
“ದೀಪಾವಳಿಯ ದಿನದಂದೇ ಮೇಲುಕೋಟೆಯ ಐಯ್ಯಂಗಾರ್ ಸಮುದಾಯದ ಮೇಲೆ ಸಾಮೂಹಿಕ ನರಮೇಧ ನಡೆಸಿದ್ದ ಟಿಪ್ಪು ಮುಮ್ಮಡಿ ಚಿಕ್ಕರಾಜ ಒಡೆಯರ್ ಕಾಲದಲ್ಲಿ ಟಿಪ್ಪು ರಾಜಮನೆತನದವರನ್ನು ಬಂಧನದಲ್ಲಿರಿಸಿದ್ದನು. ಆದರೆ ಹೀಗೆಲ್ಲಾ ನೋವುಂಟು ಮಾಡಿದ್ದರೂ ಸಹ ನಮ್ಮ ಹಿರಿಯರ ಮಾತಿನಂತೆ ನಾನು ನಮಗೆ ನೋವುಂಟು ಮಾಡಿದವರ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ.
ನಾನೊಬ್ಬ ದೇಶದ ನಾಗರಿಕಳಾಗಿದ್ದು ಟಿಪ್ಪು ಜಯಂತಿಯ ವಿಚಾರದಲ್ಲಿ ಸರ್ಕಾರವನ್ನು ಪ್ರಶ್ನಿಸಲಾರೆ. ಇದು ಅವರಿಗೆ ಬಿಟ್ಟ ವಿಚಾರ.ಈ ಕುರಿತು ನಾನು ಹೆಚ್ಚು ಮಾತನಾಡುವುದಿಲ್ಲ” ಎಂದು ಪ್ರಮೋದಾದೇವಿ ಹೇಳಿದ್ದಾರೆ.

City Today News

(Tj vision media)

9341997936

Leave a comment

This site uses Akismet to reduce spam. Learn how your comment data is processed.