
ನೂತನ ಹೈಟೆಕ್ ಬಸ್ ನಿಲ್ದಾಣ ಲೋಕರ್ಪಣೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ :ಅಗ್ರಹಾರ ದಾಸರಹಳ್ಳಿ ವಾರ್ಡ್ ,ಬಸವೇಶ್ವರನಗರ ಕೆ.ಎಚ್.ಬಿ.ಕಾಲೋನಿ 2ನೇ ಹಂತದಲ್ಲಿ ನೂತನವಾಗಿ ನಿರ್ಮಾಣವಾದ ಹೈಟೆಕ್ ಬಸ್ ನಿಲ್ದಾಣವನ್ನು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ.ಸೋಮಣ್ಣರವರು ಮತ್ತು ಅಗ್ರಹಾರ ದಾಸರಹಳ್ಳಿ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀಮತಿ ಶಿಲ್ಪ ಶ್ರೀಧರ್ ಮತ್ತು ಬಿ.ಜೆ.ಪಿ.ಮುಖಂಡರಾದ ಶ್ರೀಧರ್ ಹಾಗೂ ಬಿ.ಬಿ.ಎಂ.ಪಿ.ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಹಿರಿಯ ನಾಗರಿಕರು ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಿದರು.
ತದನಂತರ ಶಾಸಕರಾದ ವಿ.ಸೋಮಣ್ಣರವರು ಮಾತನಾಡಿ ದಾಸರಹಳ್ಳಿ ವಾರ್ಡ್ ನಲ್ಲಿರುವ ಬಸವೇಶ್ವನಗರ ಮುಖ್ಯ ರಸ್ತೆಯಲ್ಲಿ ಕಳೆದ 13ವರ್ಷಗಳಿಂದ ಒಂದೂವರೆ ಕಿಲೋ ಮೀಟರ್ ವರಗೆ ಯಾವುದೇ ಬಸ್ ನಿಲ್ದಾಣ ವಿರುವುದಿಲ್ಲ ,ಸಾವಿರಾರು ಸ್ಥಳೀಯ ನಿವಾಸಿಗಳು ಬಹುದೂರ ನಡೆದುಕೊಂಡು ಹೋಗಿ ,ಮುಂದಿನ ಬಸ್ ನಿಲ್ದಾಣದ ವರೆಗೆ ನಡೆದುಕೊಂಡು ಹೋಗಬೇಕಿತ್ತು .ಅದ್ದರಿಂದ ಪ್ರಮುಖ ರಸ್ತೆ ಬಸವೇಶ್ವರ ನಗರ ,ಕೆ.ಹೆಚ್.ಬಿ.ಕಾಲೋನಿ ಬಸ್ ನಿಲ್ದಾಣ ಪ್ರಾರಂಭದಿಂದ ನಾಗರಿಕರಿಗೆ ಅನುಕೂಲವಾಗಲಿದೆ.
ನಾಗರಿಕರ ರಾಜ್ಯ ಸರ್ಕಾರದ ಸಾರಿಗೆ ವ್ಯವಸ್ತೆ ಬಳಿಸಿಕೊಳ್ಳಿ ,ಇದ್ದರಿಂದ ವಾಹನ ಸಂಚಾರ ದಟ್ಚನೆ ತಪ್ಪಲಿದೆ ಮತ್ತು ಪರಿಸರಕ್ಕೂ ಉಪಯೋಗವಾಗಲಿದೆ ಎಂದು ಹೇಳಿದರು.
City Today News
(Tj vision media)
9341997936
