
ದಿನಾಂಕ 27 / 12 / 2018 , ಬೆಂಗಳೂರು ನಗರ ನಿವಾಸಿಯೊಬ್ಬರು ಬೆಂಗಳೂರು ಪೂರ್ವ ತಾಲ್ಲೂಕು , ಕುಂದರಹಳ್ಳಿ ಗೇಟ್‌ನ ತೂಬರಹಳ್ಳಿಯ ಸರಣ್ಯ ಗ್ರೂಪ್ ರವರಿಂದ ನಿರ್ಮಾಣಗೊಂಡಿರುವ ಸರಣ್ಯ ಸೋಹನ್ ಅಪಾರ್ಟ್‌ಮೆಂಟ್‌ನ ಫ್ಲಾಟ್ ಒಂದನ್ನು ಖರೀದಿ ಮಾಡಿದ್ದು , ಶ್ರೀ . ಕಿರಣ್ , ಜಿ . ಪಿ . ಎ ಹೋಲ್ಕರ್ , ಸರಣ್ಯ ಸೋಹನ್ ಅಪಾರ್ಟ್‌ಮೆಂಟ್ ರವರು ರಿಜಿಸ್ಟರ್ ಮಾಡಿಸಲು ಬಿದರಹಳ್ಳಿ ಸಬ್ – ರಿಜಿಸ್ಟ್ರಾರ್ ಕಛೇರಿಗೆ ಲಂಚದ ಹಣ ರೂ . 27 , 000 / – ನೀಡಬೇಕೆಂದು ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 27 / 12 / 2018 ರಂದು ಶ್ರೀ . ಕಿರಣ್ , ಜಿ . ಪಿ . ಎ ಹೋಲ್ಕರ್ ರವರು ರೂ . 27 , 000 / – ಲಂಚದ ಹಣವನ್ನು ದೂರುದಾರರಿಂದ ಬಿದರಹಳ್ಳಿ ಸಬ್ – ರಿಜಿಸ್ಟ್ರಾರ್ ಕಛೇರಿಯಲ್ಲಿ ಪಡೆದುಕೊಂಡಿದ್ದು , ಬೆಂಗಳೂರು ಗ್ರಾಮಾಂತರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಆರೋಪಿಯನ್ನು ದಸ್ತಗಿರಿ ಮಾಡಿದ್ದು , ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ , ತನಿಖೆ ಮುಂದುವರೆದಿದೆ .
City Today News
(Tj vision media)
9341997936
