
ದಿನಾಂಕ 08 / 01 / 2019 , ಆನೇಕಲ್ ತಾಲ್ಲೂಕು , ಜಿಗಣಿ ಹೋಬಳಿ , ಬಂಡೇನಲ್ಲಸಂದ್ರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿರವರು ತಮ್ಮ ಸಂಘದ ಆಡಳಿತ ಮಂಡಳಿಯ ಚುನಾವಣೆಯನ್ನು ನಡೆಸಲು ಅಗತ್ಯವಿದ್ದ ದಾಖಲೆಗಳನ್ನು ಪರಿಶೀಲಿಸಿ , ಸಹಕಾರ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲು ಕೋರಿರುತ್ತಾರೆ . ಶ್ರೀ . ಮಂಜುನಾಥ ಸ್ವಾಮಿ , ಸಹಕಾರ ಅಭಿವೃದ್ಧಿ ಅಧಿಕಾರಿ , ಆನೇಕಲ್ ತಾಲ್ಲೂಕು ರವರು ದಾಖಲೆಗಳನ್ನು ಪರಿಶೀಲಿಸಿ ಸಹಕಾರ ಚುನಾವಣಾ ಆಯೋಗಕ್ಕೆ ವರದಿಯನ್ನು ಮಂಡಿಸಲು ರೂ . 7 , 000 / – ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 08 / 01 / 2019 ರಂದು ದೂರುದಾರರಿಂದ ಶ್ರೀ . ಮಂಜುನಾಥ್ ಸ್ವಾಮಿ ರವರು ರೂ . 6 , 000 / – ಲಂಚದ ಹಣವನ್ನು ಪಡೆದುಕೊಂಡಿದ್ದು , ಬೆಂಗಳೂರು ಗ್ರಾಮಾಂತರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಆರೋಪಿಯನ್ನು ದಸ್ತಗಿರಿ ಮಾಡಿ , ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ , ತನಿಖೆ ಮುಂದುವರೆದಿದೆ .
City Today News
(citytoday.media)
9341997936
