ಕರ್ನಾಟಕಕ್ಕೆ ತನ್ನ ಸೇವೆಗಳನ್ನು ವಿಸ್ತರಿಸಿದ docprime.com – 3000 ವೈದ್ಯರು ಮತ್ತು 200 ಲ್ಯಾಬ್‌ಗಳೊಂದಿಗೆ ಒಪ್ಪಂದ – ರೋಗ ನಿರೋಧಕ ಆರೋಗ್ಯ ಸೇವೆಗಾಗಿ 15 ಮಿಲಿಯನ್‌ ಅಮೆರಿಕನ್‌ ಡಾಲರ್‌ ಹೂಡಿಕೆ

ಬೆಂಗಳೂರು, ಜನವರಿ 09, 2019: ಆರೋಗ್ಯ ಸೇವೆ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು docrprime.com, ಪಾಲಿಸಿಬಜಾರ್‌ ತನ್ನ ಆರೋಗ್ಯ ಸೇವೆಯನ್ನು ಕರ್ನಾಟಕಕ್ಕೂ ವಿಸ್ತರಿಸಿ ಪ್ರಕಟಣೆ ಹೊರಡಿಸಿದೆ. 3000 ವೈದ್ಯರು ಮತ್ತು ಲ್ಯಾಬ್ ಸಮರ್ಥ ಜಾಲ ಒಳಗೊಂಡ ಸೇವೆ ಮತ್ತು ಸೌಲಭ್ಯಗಳು ಪ್ರಸ್ತುತ ಬೆಂಗಳೂರಿನಲ್ಲಿ ಮಾತ್ರ ಲಭ್ಯವಿತ್ತು. ಈ ವರ್ಷಾಂತ್ಯದಕ್ಕೆ ರಾಜ್ಯದ ಎಲ್ಲ ಭಾಗಗಳಿಗೂ ಈ ಸೇವೆ ವಿಸ್ತರಣೆಯಾಗಲಿದೆ. ದೆಹಲಿ ಮತ್ತು ಎನ್‌ ಸಿ ಆರ್‌ಗಳಲ್ಲಿ ಈಗಾಗಲೇ ಸಕ್ರಿಯವಾಗಿರುವ docprime.com ದೇಶದ 34 ನಗರಗಳಲ್ಲಿ ಮಹತ್ವದ ಪ್ರಸ್ತುತಿಯನ್ನು ದಾಖಲಿಸಿದೆ.
docprime.com ಆನ್‌ಲೈನ್‌ ಕನ್ಸಲ್ಟೇಷನ್ ನೀಡುವ ಉಚಿತ ಪ್ಲಾಟ್‌ಫಾರಂ ಆಗಿದ್ದು, ರೋಗಿಗಳು, ದೇಶದಾದ್ಯಂತ ಇರುವ 20,000 ವೈದ್ಯರು ಮತ್ತು 5,000 ಡಯಾಗ್ನಸ್ಟಿಕ್ ಲ್ಯಾಬ್‌ ಗಳ ಅಪಾಯಿಂಟ್‌ ಮೆಂಟ್ ತೆಗೆದುಕೊಳ್ಳುವುದಕ್ಕೆ ನೆರವಾಗುತ್ತದೆ. ರೋಗ ನಿರೋಧಕ ಆರೋಗ್ಯಕ ಸೇವೆಯಲ್ಲಿ 15 ಮಿಲಿಯನ್ ಡಾಲರ್ ಗಳಷ್ಟು ಹಣವನ್ನು ಹೂಡಿಕೆಯನ್ನೂ ಮಾಡುತ್ತಿದೆ.

docprime.com ನ ಸಿಇಒ ಆಶೀಶ್ ಗುಪ್ತಾ ಅವರ ಪ್ರಕಾರ “ಜೀವನ ಶೈಲಿಗೆ ಸಂಬಂಧಿಸಿದ ರೋಗಗಳು ಮತ್ತು ಕಾಯಿಲೆಗಳು ಭಾರತದಲ್ಲಿ ಹೆಚ್ಚುತ್ತಿದ್ದು, ರೋಗನಿರೋಧಕ ಆರೋಗ್ಯ ಸೇವೆ ಆಯ್ಕೆಗಿಂತ, ಅಗತ್ಯವಾಗಿ ಪರಿಣಮಿಸಿದೆ. ಹೀಗಾಗಿ, ನಮ್ಮ ಜೇಬಿಗೆ ಹೊರೆಯಾಗದಂತೆ ಆರೋಗ್ಯ ಸೇವೆಯನ್ನು ಒದಗಿಸಲು ನೆರವಾಗುವ ನಿಟ್ಟಿನಲ್ಲಿ docprime.com ಬೆಂಗಳೂರಿಗೆ ತನ್ನ ಸೇವೆ ವಿಸ್ತರಿಸಿದ್ದು, 3000 ವೈದ್ಯರು ಮತ್ತು 200 ಡಯಾಗ್ನಸ್ಟಿಕ್ ಕೇಂದ್ರಗಳ ಮೂಲಕ ಪ್ರತಿಯೊಬ್ಬರಿಗೂ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವ ಗುರಿ ಹೊಂದಿದೆ.’’
“15 ಮಿಲಿಯನ್ ಅಮೆರಿಕನ್‌ ಡಾಲರ್‌ಗಳ ಹೂಡಿಕೆಯ ಮೂಲಕ ನಿರಂತರ ಆರೋಗ್ಯದ ಸ್ಥಿತಿಗತಿಯನ್ನು ತಿಳಿಯುವುದಕ್ಕೆ ಮತ್ತು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜನರನ್ನು ಪ್ರೋತ್ಸಾಹಿಸುತ್ತಿದೆ. ಈ ಕಾರಣಕ್ಕಾಗಿ ದೇಶದ 100 ನಗರಗಳ 100000 ವೈದ್ಯರು ಮತ್ತು 20000 ಲ್ಯಾಬ್‌ಗಳನ್ನು 2019 ರಲ್ಲಿ ಈ ಯೋಜನೆಯ ಭಾಗವಾಗಿ ವಿಸ್ತರಿಸುವ ಗುರಿ ಹೊಂದಿದ್ದೇವೆ’ ಎಂದು ಅವರು ಹೇಳಿದರು.
docprime.com, ಮುಂಜಾಗ್ರತಾ ಆರೋಗ್ಯ ಸೇವೆ ಮತ್ತು ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರಿಗೆ ಸೇವೆಯನ್ನು ಸಲ್ಲಿಸುವ ನಿಟ್ಟಿನಲ್ಲಿ ಜನರಿಗೆ ಶಿಕ್ಷಣ ನೀಡುವುದು, ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಈ ಪೈಕಿ ಅತಿ ಮುಖ್ಯವಾದ ಸಂಗತಿಯೆಂದರೆ ನಗದು ರಹಿತ ವ್ಯವಹಾರ. ಅಂದರೆ ಗ್ರಾಹಕರು ಅಪಾಯಿಂಟ್‌ಮೆಂಟ್‌ ಬುಕ್ ಮಾಡುವ ವೇಳೆಯೇ ವೈದ್ಯರ ಕನ್‌ಸಲ್ಟೇಷನ್‌ ಶುಲ್ಕವನ್ನು ಪಾವತಿ ಮಾಡುತ್ತಾರೆ. ಇದರಿಂದಾಗಿ ವೈದ್ಯರಿಗೆ ಕನ್‌ಸಲ್ಟೇಷನ್ ಬಳಿಕ ಹೆಚ್ಚಿನ ಶುಲ್ಕವನ್ನು ಪಾವತಿಸುವ ಅಗತ್ಯವಿರುವುದಿಲ್ಲ. ಅಲ್ಲದೆ ರೋಗಿಗಳು ವೈದ್ಯರನ್ನು ಭೇಟಿಯಾಗುವ ಸಮಯವನ್ನು ಬದಲಿಸಿಕೊಳ್ಳುವುದಕ್ಕೂ ಅವಕಾಶ ಸಿಗುತ್ತದೆ ಮತ್ತು ವೈದ್ಯರನ್ನು ಭೇಟಿ ರದ್ದು ಮಾಡಿದ್ದಲ್ಲಿ 100% ರಷ್ಟು ಹಣ ಮರಳಿಸುವ ಅವಕಾಶ ಇದೆ. ಗ್ರಾಹಕರಿಗೆ ಶ್ರೇಷ್ಠ ಸೇವೆಯನ್ನು ಪೂರೈಸುವುದಕ್ಕೆ ಬದ್ಧವಾಗಿದ್ದು, ಹಾಗಾಗಿ ವೈದ್ಯರು ಮತ್ತು ಲ್ಯಾಬ್ ಸೇವೆ ಬುಕಿಂಗ್ ನಲ್ಲಿ ಶೇ. 60 ಮತ್ತು ಹೆಲ್ತ್ ಚೆಕ್ ಪ್ಯಾಕೇಜ್‌ಗಳಲ್ಲಿ ಶೇ.80ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಇದು ಆರೋಗ್ಯ ಸೇವಾ ಉದ್ಯಮದಲ್ಲಿ ಅಪರೂಪದ್ದು ಮತ್ತು ಇದೇ ಮೊದಲನೆಯ ಬಾರಿ ಎಂದು ಹೇಳಬಹುದು.
ಕಳೆದ ವರ್ಷ ಆಗಸ್ಟ್‌ನಲ್ಲಿ ಆರಂಭಗೊಂಡ ಈ ಕಂಪನಿಯು ಸಮೂಹದ ಮೂರನೆಯ ಉದ್ಯಮವಾಗಿದ್ದು, ಇದು ಇನ್‌ಸ್ಯೂರ್‌ ಟೆಕ್‌ ವಲಯದಲ್ಲಿ ಮಹತ್ವದ ಸಂಸ್ಥೆ ಪಾಲಿಸಿಬಜಾರ್.ಕಾಂವನ್ನು ತನ್ನದಾಗಿಸಿಕೊಂಡಿದೆ. ಮತ್ತು ಪೈಸಾಬಜಾರ್.ಕಾಂಗೆ ಮಾರುಕಟ್ಟೆಯಲ್ಲಿ ಅವಕಾಶವನ್ನು ನೀಡುತ್ತದೆ. ಮೂಲಕಂಪನಿಯಾದ ಇಟೇಶೆಸ್‌ ಮಾರ್ಕೆಂಟಿಂಗ್‌ ಅಂಡ್‌ ಕನ್ಸಲ್ಟಿಂಗ್‌ ಪ್ರೈವೇಟ್‌ ಲಿಮಿಟೆಡ್‌ ನಿಂದ 50 ಮಿಲಿಯನ್‌ ಡಾಲರ್‌ಗಳನ್ನು ಆರಂಭಿಕ ಹೂಡಿಕೆಯ ಮೊತ್ತವಾಗಿ ಕಳೆದ ಸೆಪ್ಟೆಂಬರ್‌ನಲ್ಲಿ ಪಡೆದುಕೊಂಡಿದೆ. ಅಲ್ಲದೆ ಕಂಪನಿಯು ಬಿ2ಸಿ ಉದ್ಯಮವನ್ನು ಕಾರ್ಪೋರೇಟ್‌ ವಲಯಕ್ಕೂ ವಿಸ್ತರಿಸುವ ಗುರಿಯನ್ನು ಹೊಂದಿದ್ದು, ಈ ವಲಯವು ಕಂಪನಿಯ ಒಟ್ಟು ಆದಾಯದ ಶೇ. 20-30 ಪ್ರಮಾಣದ ಆದಾಯವನ್ನು ಸೃಷ್ಟಿಸಲಿದೆ.
docprime.com ಕುರಿತು – docprime.com ಪಾಲಿಸಿಬಜಾರ್ ಸಮೂಹದ ಇತ್ತೀಚಿನ ಉದ್ಯಮವಾಗಿದ್ದು ಭಾರತೀಯರ ಆರೋಗ್ಯ ಸೇವೆಯನ್ನು ಮರುವ್ಯಾಖ್ಯಾನಿಸುವ ಗುರಿಯನ್ನು ಹೊಂದಿದೆ. ಇದು ಸ್ಟೇಟ್‌ ಆಫ್‌ ದಿ ಆರ್ಟ್‌ ತಂತ್ರಜ್ಞಾನವನ್ನು ಬಳಸುವ ಮೂಲಕ ರೋಗಿಗಳು ಮತ್ತು ವೈದ್ಯರನ್ನು ನೇರ ಸಂಪರ್ಕ ಕಲ್ಪಿಸುವ ಮೂಲಕ ಅಗತ್ಯ ಮತ್ತು ಸೇವೆ ಪೂರೈಕೆಯ ನಡುವಿನ ಸೇತುವೆಯಾಗಿ ಕೆಲಸ ಮಾಡುತ್ತಿದೆ ಮತ್ತು ಆಫ್‌ ಲೈನ್‌ ಜಾಲವನ್ನು ತೀವ್ರವಾಗಿಸಿದೆ. ಚಾಟ್‌ ಮತ್ತು ಪೋನ್‌ ಮೂಲಕ ನಿವಾಸಿ ಆರೋಗ್ಯ ತಜ್ಞರ ತಂಡದ ಮೂಲಕ ಉಚಿತವಾಗಿ ಕನ್‌ಸಲ್ಟೇಷನ್‌ ನೀಡುವುದರ ಜೊತೆಗೆ, ವೈದ್ಯರು ಮತ್ತು ಲ್ಯಾಬ್‌ ಟೆಸ್ಟ್‌ಗಳಿಗೆ ರಿಯಾಯಿತಿ ದರದಲ್ಲಿ ಬುಕಿಂಗ್‌ ಸೇವೆಯನ್ನು ಕಲ್ಪಿಸುತ್ತಿದೆ ಮತ್ತು ಶೀಘ್ರದಲ್ಲೇ ಒಪಿಡಿ ಚಂದಾ ಪ್ಯಾಕೇಜ್‌ಗಳನ್ನು ನೀಡಲಿದ್ದು, ಇದರ ಮೂಲಕ ಅನಿಯಮಿತ ಕನ್‌ಸಲ್ಟೇಷನ್‌ ಮತ್ತು ಟೆಸ್ಟ್‌ ಸೇವೆ ಒದಗಿಸಲಿದೆ. ಕಂಪನಿಯು 100000 ಉಚಿತ ಮೆಡಿಕಲ್‌ ಕನ್‌ಸಲ್ಟೇಷನ್‌ಗಳನ್ನು ಪ್ರತಿ ತಿಂಗಳು ನೀಡುತ್ತಿದ್ದು, ಡಿಸೆಂಬರ್ 2019ರ ಹೊತ್ತಿಗೆ ಪ್ರತಿ ದಿನ 500000 ಕನ್‌ಸಲ್ಟೇಷನ್‌ ತಲುಪುವ ಗುರಿ ಹೊಂದಿದೆ.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.