
ಕೇರಳದ ಮಸೀದಿಯೊಂದರ ಸಮೀಪದಲ್ಲೇ ಅಯ್ಯಪ್ಪ ಭಕ್ತರು ತೆರಳುತ್ತಿದ್ದ ಬಸ್ಸೊಂದು ಅಪಘಾತದಲ್ಲಿ ಮಗುಚಿ ಬಿದ್ದಾಗ ತಕ್ಷಣವೇ ಮಸೀದಿಯ ಧರ್ಮಗುರುಗಳು ಮತ್ತು ಮಸೀದಿಯಲ್ಲಿದ್ದ ವಿದ್ಯಾರ್ಥಿಗಳು ಅಯ್ಯಪ್ಪ ಭಕ್ತರ ರಕ್ಷಣೆಗೆ ಧಾವಿಸುತ್ತಾರೆ. ನಂತರ ಮಸೀದಿಯ ವಠಾರದಲ್ಲಿ ವಿಶ್ರಾಂತಿ ಪಡೆದುಕೊಳ್ಳುವಂತೆ ವ್ಯವಸ್ಥೆ ಮಾಡಿ ಬೆಳಗಿನ ಚಹಾ ಮತ್ತು ತಿಂಡಿ ನೀಡಿ ಸತ್ಕರಿಸಿದರು.
ಜಾತಿ ಧರ್ಮ ಅಂತ ಪರಸ್ಪರ ಗಲಭೆಗಳನ್ನೆಬ್ಬಿಸಿ ಇಡೀ ಊರೇ ಸುಟ್ಟು ಹೋಗುತ್ತಿರುವ ಈ ಕಾಲದಲ್ಲಿ ಧರ್ಮಗಳ ನಡುವೆ ಬಾಂಧವ್ಯ ಬೆಸೆಯುವ ಇಂತಹ ಸನ್ನಿವೇಷಗಳು ನಮ್ಮ ದೇಶದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

City Today News
(citytoday.media)
9341997936
