98 ವರ್ಷದ ವಯೋವೃದ್ಧೆಗೆ ಸೊಂಟದ ಬದಲಿ ಶಸ್ತ್ರಚಿಕಿತ್ಸೆ

Bangalore 17th Jan 2019:

98ರ ವಯಸ್ಸಿನಲ್ಲಿ ಸೊಂಟ ಮುರಿದುಕೊಂಡರೆ ನಡೆಯುವ ಹಾಗು ಅನುಭವಿಸುವ ನೋವನ್ನು ಊಹಿಸಿಕೊಳ್ಳುವುದು ಕಷ್ಟ. ಅಂತಹ ಕ್ಲಿಷ್ಟಕರ ಪರಿಸ್ಥಿತಿ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ನಿವಾಸಿ ಲಕ್ಷ್ಮಮ್ಮನವರದ್ದಾಗಿತ್ತು. ಜಾರಿ ಬಿದ್ದಿದ್ದರ ಪರಿಣಾಮ ಅವರ ಎಡ ಸೊಂಟವು ಮುರಿದು ದೇಹದ ಕೆಳಭಾಗವು ಅಲ್ಲಾಡಿಸಲು ಆಗದ ಸ್ಥಿತಿಯಾಗಿತ್ತು. ಮಲಮೂತ್ರ ವಿಸರ್ಜನೆ ಕೂಡ ತ್ರಾಸದಾಯಕವಾಗಿತ್ತು. ನೋವನ್ನು ನಿವಾರಿಸಲು ಮತ್ತು ನಡೆದಾಡಲು ವೈದ್ಯರು ಸೊಂಟದ ಬದಲಿ ಶಸ್ತ್ರಚಿಕಿತ್ಸೆಯ ಸಲಹೆ ನೀಡುವುದು ಈ ಸಂದರ್ಭದಲ್ಲಿ ಅನಿವಾರ್ಯ ಎನಿಸಿತ್ತು. ವೈದ್ಯಕೀಯ ಲೋಕದ ವಿಸ್ಮಯಗಳು ಹೊಸ ದಿಗಂತಗಳನ್ನು ತಲುಪುತ್ತಿರುವ ಈ ಯುಗದಲ್ಲಿ ಅಪೊಲೊ ಹಾಸ್ಪಿಟಲ್ ಶೇಷಾದ್ರಿಪುರಂ ಬೆಂಗಳೂರು ಹೊಸ ಅಧ್ಯಾಯವನ್ನು ಬರೆದಿದೆ. ಲಕ್ಷ್ಮಮ್ಮ ನವರ ಎಡ ಸೊಂಟದ ಬದಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ, ರೋಗಿಯು ಮುಂಚಿನಂತೆ ನಡೆದಾಡುವುದು ಈಗ ವರ್ಷ ತಲುಪುತ್ತಿದೆ. 98ರ ವಯಸ್ಸಿನಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆ ನಡೆಸಿ, ರೋಗಿ ಸಂಪೂರ್ಣ ಗುಣಮುಖರಾಗಿ ಸರಳ ಜೀವನ ನಡೆಸುವ ಉದಾಹರಣೆಗಳು ಬಹಳ ವಿರಳ. ಇಂಥದ್ದೊಂದು ಸವಾಲಿನ ಕೆಲಸವನ್ನು ನಡೆಸಿದ ಡಾಕ್ಟರ್ ವಾಸುದೇವ ಪ್ರಭು ಹಾಗು ಅವರ ತಂಡ ನಿಜಕ್ಕೂ ಪ್ರಶಂಸನಾರ್ಹ. ರೋಗಿಯು ಹಿಂದೊಮ್ಮೆ ಬಲ ಸೊಂಟದ ಮುರಿತಕ್ಕೆ ಒಳಗಾಗಿದ್ದರು ಮತ್ತು ಚೇತರಿಸಿಕೊಂಡಿದ್ದರು ಎಂದು ಶಸ್ತ್ರಚಿಕಿತ್ಸೆ ಅಗತ್ಯದ ಬಗ್ಗೆ ವಿಚಾರಿಸಿದಾಗ ಡಾII ಪ್ರಭುರವರು ತಿಳಿಸಿದರು. ಮುಂದಿದ್ದ ಸವಾಲುಗಳೆಂದರೆ –

ಓಸ್ಟೆಯೋಪೋರೋಟಿಕ್ ಎಲುಬುಗಳು (ಸವೆದುಹೋಗಿರುವ ಎಲುಬುಗಳು), ಸಬ್ ಆಪ್ಟಿಮಲ್ ಶ್ವಾಸಕೋಶಗಳು, ಹೃದಯದ ಸ್ಥಿತಿಗತಿಗಳು ಅತೀವ ವಯಸ್ಸಿನದ್ದಾಗಿದ್ದವು. ಇದರೊಂದಿಗೆ ರಕ್ತ ಹೆಪ್ಪುಗಟ್ಟುವುದು, ರಕ್ತ ಸ್ರಾವ, ವಯಸ್ಸಿಗೆ ಸಂಬಂದಿಸಿದ ತೊಂದರೆಗಳು. ಪರಿವಾರದವರ ಸಮ್ಮತಿ ಹಾಗು ರೋಗಿಯ ಒಪ್ಪಿಗೆಯ ಮೇರೆಗೆ ರಕ್ತದ ವರ್ಗಾವಣೆ ಮಾಡಬೇಕಾಯಿತು ಮತ್ತು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಮಾರನೆಯ ದಿನ ಆಸ್ಪತ್ರೆ ಸಿಬ್ಬಂದಿಯ ಸಹಾಯದಿಂದ ರೋಗಿಯು ನಡೆಯಲು ಆರಂಭಿಸಿದರು.

ಎಲ್ಲಾ ಪ್ರಯತ್ನಗಳು ಫಲಿಸಿದ ಅನುಭವ ಡಾII ವಾಸುದೇವ ಪ್ರಭು ಮತ್ತು ತಂಡಕ್ಕೆ ಕೂಡಿಬಂದು ಸಂತಸ ಇಮ್ಮಡಿಯಾಗಿತ್ತು. ಕಾರ್ಡಿಯೋಲಾಜಿಸ್ಟ್, ಪಲ್ಮೊನೊಲೊಜಿಸ್ಟ್, ಅಗತ್ಯವಿರುವ ICU ಸೌಲಭ್ಯಗಳು ಅಪೊಲೊ ಹಾಸ್ಪಿಟಲ್ ಶೇಷಾದ್ರಿಪುರಂ ನಲ್ಲಿ ಒಂದೇ ಸೂರಿನಡಿಯಲ್ಲಿ ಇರುವ ಕಾರಣ ಈ ಶಸ್ತ್ರಚಿಕಿತ್ಸೆಗೆ ಇನ್ಯಾವ ಹೊರಗಿನ ಅಗತ್ಯಗಳು ಇರಲಿಲ್ಲ ಎಂದು ತಿಳಿಸುತ್ತಾರೆ ಡಾII ಪ್ರಭು.
ಡಾ ಪ್ರಭು ಹಾಗು ಅಪೊಲೊ ಹಾಸ್ಪಿಟಲ್ ಶೇಷಾದ್ರಿಪುರಂ ಬೆಂಗಳೂರು, ಇವರಿಗೆ ನಾವು ಸದಾ ಚಿರಋಣಿ ಎನ್ನುತಾರೆ ಡಾII ಅನಿತಾ, ಲಕ್ಷ್ಮಮ್ಮ ನವರ ಮೊಮ್ಮಗಳು. ಒಂದು ವರ್ಷ ಕಳೆದಿದೆ, ಅಜ್ಜಿ ಎಂದಿನಂತೆ ನಡೆದಾಡಲು ಸಹಕರಿಸಿದ ಎಲ್ಲರಿಗೆ ನಾವು ಸದಾ ನೆನಪಿಸಿಕೊಳ್ಳುತೇವೆ ಎಂದವರು ಹೇಳುತ್ತಾರೆ. ಚಿಕಿತ್ಸಾನಾಂತರ 12 ದಿನಗಳಲ್ಲಿ ರೋಗಿಯನ್ನು ಶಿರಾಗೆ ವರ್ಗಾಯಿಸಲಾಯಿತು. ಅಂದಿನಿಂದ ಈವರೆಗೆ ಯಾವುದೇ ಸಮಸ್ಯೆಗಳು ಇಲ್ಲದೆ 100 ವರ್ಷಗಳತ್ತ ದಾಪುಗಾಲು ಹಾಕುತ್ತಿದ್ದಾರೆ ಲಕ್ಷ್ಮಮ್ಮ. ಅವರು ಆರೋಗ್ಯವಾಗಿರಲಿ ಎಂದು ಹಾರೈಸುತ್ತಾರೆ ಡಾII ವಾಸುದೇವ ಪ್ರಭು ಮತ್ತು ಅಪೊಲೊ ಹಾಸ್ಪಿಟಲ್ ಸಿಬ್ಬಂದಿ.

ಅಪೊಲೊ ಹಾಸ್ಪಿಟಲ್, ಶೇಷಾದ್ರಿಪುರಂ ಬಗ್ಗೆ ಮಾಹಿತಿ:
2 ಎಕರೆ ಭೂಮಿ ಪ್ರದೇಶದಲ್ಲಿ ನಿರ್ಮಿಸಲಾದ 200 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಹಾಗೂ, ಬನ್ನೇರುಘಟ್ಟ, ಜಯನಗರ ಹಾಗು ಮೈಸೂರಿನ ಹಾಸ್ಪಿಟಲ್ ಒಳಗೊಂಡು ರಾಜ್ಯದ ೪ನೇ ಅಪೊಲೊ ಹಾಸ್ಪಿಟಲ್ ಇದಾಗಿದೆ. ಇದರೊಂದಿಗೆ ಅಪೊಲೊ ಹಾಸ್ಪಿಟಲ್ ವೈದ್ಯಕೀಯ ಸೇವೆಗಳನ್ನು ಎಲ್ಲರಿಗೂ ಸಿಗುವಂತೆ ಮಾಡುವ ಉದ್ದೇಶವನ್ನು ಪೂರೈಸುವತ್ತ ಸಾಗುತ್ತಿದೆ. ಈ ಆಸ್ಪತ್ರೆಯು NABHನಿಂದ ಗುಣಮಟ್ಟದ ಸೇವೆ ನೀಡುವ ಅನುಮೋದನೆಗೊಂಡಿದೆ.
ಅಪೊಲೊ ಹಾಸ್ಪಿಟಲ್ ವಿಶೇಷತೆಗಳು:
ಹೆಚ್ಚುತ್ತಿರುವ ಖಾಯಿಲೆಗಳನ್ನು ಗುಣಪಡಿಸಲು ಹಾಗೂ ಕಂಡುಕೇಳರಿಯದ ರೋಗಗಳನ್ನು ತಡೆಯಲು ಆಧುನಿಕ, ನವೀನ ತಂತ್ರಜ್ಞಾನದ ಸೌಲಭ್ಯಗಳನ್ನು ಹಾಗೂ ಸುಸಜ್ಜಿತ ಮೂಲ ಸೌಕರ್ಯಗಳನ್ನು, ನುರಿತ ತಜ್ಞವೈದ್ಯರನ್ನು ಅಪೊಲೊ ಹಾಸ್ಪಿಟಲ್ ಹೊಂದಿದೆ. ಹೃದ್ರೋಗ ವಿಜ್ಞಾನ, ನರರೋಗ ವಿಜ್ಞಾನ, ಆರ್ಥೋಪೆಡಿಕ್ಸ್, ಮೆಡಿಕಲ್ ಮತ್ತು ಸರ್ಜಿಕಲ್ ಗ್ಯಾಸ್ಟ್ರೋಎಂಟೆರೊಲೊಜಿ ಮತ್ತು ಜೆನರಲ್ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜರಿ – ಈ ಐದು ವಿಶೇಷ ವಿಭಾಗಳಲ್ಲಿ 100 ವರ್ಷಗಳ ಕೂಡಿದ ಅನುಭವವುಳ್ಳ ಪರಿಣತ ತಜ್ಞರನ್ನು ಹೊಂದಿದೆ.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.