ಪರಮಪೂಜ್ಯರು ಡಾ ! ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ಭಗವಂತನ ಇಚ್ಛೆಯಂತೆ ದಿನಾಂಕ 21 – 01 – 2019 ರಂದು ಸೋಮವಾರ ಬೆಳಿಗ್ಗೆ 11 . 44 ಗಂಟೆಗೆ ಶಿವಸಾಯುಜ್ಯವನ್ನು ಹೊಂದಿರುತ್ತಾರೆ .

ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ ( ರಿ . ) ಶ್ರೀ ಸಿದ್ದಗಂಗಾ ಮಠ , ತುಮಕೂರು, ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿರುವ ಪರಮಪೂಜ್ಯರು ಡಾ ! ಶ್ರೀ ಶ್ರೀ ಶಿವಕುಮಾರಮಹಾಸ್ವಾಮಿಗಳವರು ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದು , ಉತ್ತಮ ರೀತಿಯ ಚಿಕಿತ್ಸೆಯನ್ನು ಸಹ ಪಡೆದುಕೊಂಡಿರುವುದು ಸರ್ವರಿಗೂ ಗೊತ್ತಿರುವ ವಿಚಾರ . ಶ್ರೀಮಠದ ಹಳೆಯ ವಿದ್ಯಾರ್ಥಿಗಳು , ಹಿತೈಷಿಗಳು , ಭಕ್ತಾದಿಗಳು ಪರಮ ಪೂಜ್ಯರು ಗುಣಮುಖವಾಗುವಂತೆ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು . ಆದರೂ ಸಹ ಭಗವಂತನ ಇಚ್ಛೆಯಂತೆ ದಿನಾಂಕ 21 – 01 – 2019ರಂದು ಸೋಮವಾರ ಬೆಳಿಗ್ಗೆ 11 . 44 ಗಂಟೆಗೆ ಶಿವಸಾಯುಜ್ಯವನ್ನು ಹೊಂದಿರುತ್ತಾರೆ .

ಪರಮ ಪೂಜ್ಯರ ಕ್ರಿಯಾಸಮಾಧಿಯ ಕಾರ್ಯಗಳು ಅಂತ್ಯ ಸಂಸ್ಕಾರವನ್ನು ದಿನಾಂಕ 22 – 01 – 2019 ರಂದು ಸಂಜೆ 4 – 30 ಗಂಟೆಗೆ ನಡೆಸಲು ನಿಶ್ಚಿಯಿಸಿರುತ್ತದೆ . ವಿದ್ಯಾರ್ಥಿಗಳು ಮತ್ತು ಸಿಬ್ಬಂದಿವರ್ಗದವರು ಶಿಸ್ತಿನಿಂದ ಪರಮ ಪೂಜ್ಯರ ದರ್ಶನ ಪಡೆದು ಶ್ರೀಮಠದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಕರ್ತವ್ಯವಾಗಿರುತ್ತದೆ . ಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ದಿನಾಂಕ 21 – 01 – 2019 ರಿಂದ 22 – 01 – 2019 ರವರೆಗೆ ರಜೆ ಘೋಷಿಸಿದೆ .

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.