
ದಿನಾಂಕ : 21 – 01 – 2019 ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕು , ಆನೆಕಲ್ ತಾಂಡ ನಿವಾಸಿಯಾಗಿರುವ ಮರಿಯಮ್ಮನಹಳ್ಳಿ ಗ್ರಾಮದ 4ನೇ ವಾರ್ಡ್‌ನ ಸರ್ವೆ ನಂ . 109 ಮತ್ತು 136ರಲ್ಲಿರುವ ಪ್ಲಾಟ್ ನಂ34 ಮತ್ತು 45ಕ್ಕೆ ಸಂಬಂಧಪಟ್ಟಂತೆ ಫಾರಂ ನಂ . 3 ಅನ್ನು ಕೋರಿ ಅರ್ಜಿ ಸಲ್ಲಿಸಿರುತ್ತಾರೆ . ಶ್ರೀ ಹುಲುಗಪ್ಪ , ಬಿಲ್ ಕಲೆಕ್ಟರ್ , ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ರವರು ಫಾರಂ ನಂ . 3 ಅನ್ನು ನೀಡುವ ಸಂಬಂಧ ರೂ . 3 , 000 / – ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 21 / 01 / 2019 ರಂದು ಶ್ರೀ ಹುಲುಗಪ್ಪ ರವರು ಫಿರ್ಯಾದುದಾರರಿಂದ ಲಂಚದ ಹಣ ರೂ . 2 , 000 / – ಗಳನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಬಳ್ಳಾರಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿರುತ್ತಾರೆ . ಇವರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ತನಿಖೆ ಮುಂದುವರೆದಿದೆ .
City Today News
(citytoday.media)
9341997936
