
“ದಯವಿಟ್ಟು ಶ್ರೀಗಳ ವಿಷಯದಲ್ಲಿ ರಾಜಕೀಯ ಬಣ್ಣ ತರಬೇಡಿ”
ದಯಮಾಡಿ ಯಾರೂ ಶ್ರೀಗಳಿಗೆ ಭಾರತ ರತ್ನ ಕೊಡಿ ಅಂತ ಕೇಳಬೇಡಿ..ದೇವರಿಗೆ ಬಿರುದು ಅಥವಾ ಪ್ರಶಸ್ತಿಗಳನ್ನು ಕೊಡುವ ಅರ್ಹತೆ ಯಾರಿಗೂ ಇಲ್ಲ..ಅವರೆಂದೂ ತಮಗೆ ಭಾರತ ರತ್ನವೋ ಇನ್ನೊಂದು ಪ್ರಶಸ್ತಿ ಸಿಗಬೇಕೆಂದು ಆ ಮಹಾತ್ಕಾರ್ಯಗಳನ್ನು ಮಾಡಿಲ್ಲ..

ಜನರಿಂದಲೇ “ನಡೆದಾಡುವ ದೇವರು” ಅಂತ ಕರೆಸಿಕೊಂಡ ಅವರನ್ನು ಭಾರತ ರತ್ನ ಅಂತ ಕರೆದು ದೇವರನ್ನು ಚಿಕ್ಕವರನ್ನಾಗಿ ಮಾಡಬೇಡಿ.. ಬೇಕಾದರೆ ಸರ್ಕಾರವೇ ಅವರ ಹೆಸರಿನಲ್ಲಿ ಅತ್ಯುನ್ನತ ಪ್ರಶಸ್ತಿಯನ್ನು ಸ್ಥಾಪಿಸಿ ಇತರ ಸಾಧಕರಿಗೆ ಕೊಡಲಿ..
“ಭಾರತ ರತ್ನ” ಪಡೆದವರು ಸಾಕಷ್ಟು ಜನ ಇದ್ದಾರೆ.. ಆದರೆ “ನಡೆದಾಡುವ ದೇವರು” ಅಂತ ಕರೆಸಿಕೊಳ್ಳುವವರು ಶ್ರೀಗಳೊಬ್ಬರೇ..
ಇಂತಿ,
“ಭಕ್ತಿಪೂರ್ವಕವಾಗಿ ಶ್ರೀಗಳ ಭಕ್ತ”
ಜಿ. ಎಸ್. ಗೋಪಾಲ್ ರಾಜ್
City Today News
(citytoday.media)
9341997936
