ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ನಿಧನ.ಅವರ‌ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ.

ಕಳೆದ ಕೆಲವು ದಿನಗಳಿಂದ ಸ್ವೈನ್ ಫ್ಲೂದಿಂದ (ಹಂದಿ ಜ್ವರ) ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಿಗ್ಗೆ 7 ಗಂಟೆ ವೇಳೆಗೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಳೆದ ಕೆಲವು ದಿನಗಳಿಂದ ಸ್ವೈನ್ ಫ್ಲೂದಿಂದ (ಹಂದಿ ಜ್ವರ) ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಿಗ್ಗೆ 7 ಗಂಟೆ ವೇಳೆಗೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರಾಜ್ಯಸಭಾ ಸದಸ್ಯರಾಗಿದ್ದ ಜಾರ್ಜ್ ಫರ್ನಾಂಡೀಸ್ ರಾಜಕಾರಣಿ ಮಾತ್ರವಲ್ಲದೇ, ಪತ್ರಕರ್ತ, ಕೃಷಿಕ, ಭಾರತೀಯ ಕಾರ್ಮಿಕ ಸಂಘವಾದಿಯಾಗಿದ್ದರು. ಜನತಾ ದಳದ ನಾಯಕರಲ್ಲಿ ಪ್ರಮುಖರಾಗಿದ್ದು, ಸಂವಹನ, ಕೈಗಾರಿಕೆ, ರೈಲ್ವೆ, ರಕ್ಷಣೆಯಂತಹ ಮಹತ್ವದ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಮಂಗಳೂರಿನಲ್ಲಿ ಜನಿಸಿದ ಫರ್ನಾಂಡೀಸ್ ಅವ್ರು ಮುಂಬೈನಲ್ಲಿ ಒಬ್ಬ ಪ್ರಭಾವಿ ಕಾರ್ಮಿಕ ನಾಯಕನಾಗಿ ಮುನ್ನೆಲೆಗೆ ಬಂದರು. ರಾಮಮನೋಹರ ಲೋಹಿಯಾ ಅವರಿಂದ ಪ್ರಭಾವಿತರಾಗಿದ್ದ ಫರ್ನಾಂಡಿಸ್ ಬದುಕು ಬಹುಕಾಲ ಹೋರಾಟದ ಹಾದಿಯಲ್ಲೇ ನಡೆಯಿತು.

ಅವರ‌ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.