30 / 01 / 2019 ರಂದು ಶ್ರೀ ತಿರುಮಲಯ್ಯರವರು ದೂರುದಾರರಿಂದ ರೂ . 5 , 000 / – ಲಂಚದ ಹಣವನ್ನು ಪಡೆದು , ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ .

30 / 01 / 2019 ತುಮಕೂರು ಜಿಲ್ಲೆ , ಪಾವಗಡ ತಾಲ್ಲೂಕು , ತಿಮ್ಮಮ್ಮನಹಳ್ಳಿ ಗ್ರಾಮದ ನಿವಾಸಿಯೊಬ್ಬರು ತಮ್ಮ ಜಮೀನಿನ ಪಹಣಿಯನ್ನು ತಿದ್ದುಪಡಿ ಮಾಡಲು ಕೋರಿ ಪಾವಗಡ ತಹಸಿಲ್ದಾರ್ ಕಛೇರಿಗೆ ಅರ್ಜಿಯನ್ನು ಸಲ್ಲಿಸಿಕೊಂಡಿರುತ್ತಾರೆ . ಶ್ರೀ . ತಿರುಮಲಯ್ಯ , ಗ್ರಾಮ ಲೆಕ್ಕಾಧಿಕಾರಿ , ಕ್ಯಾತಗಾನಕೆರೆ ಕಂದಾಯ ವೃತ್ತ ರವರು ಪಹಣಿ ತಿದ್ದುಪಡಿ ಮಾಡಿಕೊಡಲು ಹಾಗೂ ವರದಿಯನ್ನು ತಹಸಿಲ್ದಾರ್ ಕಛೇರಿಗೆ ಸಲ್ಲಿಸಲು ರೂ . 10 , 000 / – ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 30 / 01 / 2019 ರಂದು ಶ್ರೀ ತಿರುಮಲಯ್ಯರವರು ದೂರುದಾರರಿಂದ ರೂ . 5 , 000 / – ಲಂಚದ ಹಣವನ್ನು ಪಡೆದು , ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಆರೋಪಿತರನ್ನು ದಸ್ತಗಿರಿ ಮಾಡಿ , ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ , ತನಿಖೆ ಮುಂದುವರೆದಿದೆ .

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.