
ದಿನಾಂಕ : 06 / 02 / 2019 , ತುಮಕೂರು ಜಿಲ್ಲೆ , ಕುಣಿಗಲ್ ಟೌನ್ ಹೌಸಿಂಗ್ಬೋರ್ಡ್ ಕಾಲೋನಿಯ ನಿವಾಸಿಯೊಬ್ಬರು ತಮ್ಮ ಮನೆಗೆ ಮೀಟರ್ ಅಳವಡಿಸಿ , ವಿದ್ಯುತ್ ಸಂಪರ್ಕ ಒದಗಿಸಿಕೊಡಲು ಕೋರಿ ಕುಣಿಗಲ್ ಬೆಸ್ಕಾಂ ಕಛೇರಿಗೆ ಅರ್ಜಿಯನ್ನು ಸಲ್ಲಿಸಿಕೊಂಡಿರುತ್ತಾರೆ . ಶ್ರೀ . ಹೆಚ್ . ಟಿ . ಶಂಕರ್ , ಕಿರಿಯ ಅಭಿಯಂತರರು , ಬೆಸ್ಕಾಂ . ಕುಣಿಗಲ್ ಶಾಖೆ ರವರು ಮೀಟರ್ ಅಳವಡಿಸಿ , ವಿದ್ಯುತ್ ಸಂಪರ್ಕ ನೀಡಲು ರೂ . 6 , 000 / – ಲಂಚದ ಹಣ ನೀಡಬೇಕೆಂದು ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 06 / 02 / 2019 ರಂದು ಶ್ರೀ . ಹೆಚ್ . ಟಿ . ಶಂಕರ್ ರವರು ದೂರುದಾರರಿಂದ ರೂ . 6 , 000 / ಲಂಚದ ಹಣವನ್ನು ಪಡೆದು , ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಆರೋಪಿತರನ್ನು ದಸ್ತಗಿರಿ ಮಾಡಿ , ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ತನಿಖೆ ಮುಂದುವರೆದಿದೆ .
City Today News
(citytoday.media)
9341997936
