
Bengaluru,8th Feb, 2019:
ಶ್ರೀ ಪತಂಜಲಿ ಯೋಗ ಶಿಕ್ಕಣ ಸಮಿತಿಯು ( SPYSS } 39 ವರ್ಷಗಳಿಂದ ರಾಷ್ಟ್ರ , ರಾಜ್ಯ , ಮತ್ತು ಜಿಲ್ಲೆಗಳಲ್ಲಿ ಉಚಿತವಾಗಿ ಯೋಗಾಭ್ಯಾಸವನ್ನು ಕಲಿಸಿಕೊಡಿತ್ತಿದ್ದು , ಬೆಂಗಳೂರು ನಗರದಲ್ಲಿ ೧೭೦ ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು ಸುಮಾರು ೨೫೦೦೦ ಯೋಗ ಬಂದುಗಳು ನಿತ್ಯ ಅಭ್ಯಾಸವನ್ನು ಕಲಿಯುತ್ತಿದ್ದಾರ . SPYSS ಸಮಿತಿಯು ಕಳೆದ ನಾಲ್ಕು ವರ್ಷಗಳಿಂದ ನಿಮ್ಮೆಲ್ಲರ ಸಹಕಾರದಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾಮೂಹಿಕ ರಥಸಪ್ತಮಿಯನ್ನು ಆಚರಿಸುತ್ತಾ ಬಂದಿದೆ . ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಇದೇ ಸ್ಥಳದಲ್ಲಿ ಸಾಮೂಹಿಕ ಸಪ್ತ ನಮಸ್ಕಾರವನ್ನು ಲೋಕ ಕಲ್ಯಾಣಾರ್ಥವಾಗಿ ಆಯೋಜಿಸಿದ್ದು , ಯೋಗದ ಪ್ರಚಾರ ಜೊತೆಗೆ ನೈಸರ್ಗಿಕ ಹಾಗೂ ಸಾಮಾಜಿಕ ಸಕಾರಾತ್ಮಕ ವಾತಾವರಣವನ್ನು ಹೆಚ್ಚಿಸುವ ಉದ್ದೇಶ ಸಮಿತಿಯದ್ದಾಗಿರುತ್ತದೆ .
ಕಾರ್ಯಕ್ರಮ : “ರಥಸಪ್ತಮಿ ಅಂಗವಾಗಿ ಸಾಮೂಹಿಕ ಸಪ್ತ ನಮಸ್ಕಾರ” . ಕಾರ್ಯಕ್ರಮದ ದಿನಾಂಕ : ೧೨ – ೦೨ – ೨೦೧೯ . ವೇದಿಕೆ ಕಾರ್ಯಕ್ರಮ : ಬೆಳಿಗ್ಗೆ ೬ . ೧೫ ರಿಂದ ೭ . ೧೫ ರ ವರೆಗೆ . ಸ್ಥಳ : ಬಸವನಗುಡಿ ನ್ಯಾಷನಲ್ ಕಾಲೇಜು ಆಟದ ಮೈದಾನ .
City Today News
(citytoday.media)
9341997936
