
ಸಹಕಾರ ನಗರ ಕ್ಲಬ್ ( 6 ) ಮೇಲೆ ದಾಳಿ , 18 ಬಂಧನ – ನಗದು ರೂ . 4 , 94 , 000 / – ರೂ ಹಾಗೂ ಇತರೆ ಪರಿಕರಣಗಳ ವಶ ಬೆಂಗಳೂರು ನಗರದ , ಸಹಕಾರನಗರ ಮೇನ್ ನಲ್ಲಿರುವ ಸಹಕಾರ ನಗರ ಕ್ಲಬ್‌ನ 2ನೇ ಮಹಡಿಯಲ್ಲಿ ಸದಸ್ಯರಲ್ಲದೆ ಕೆಲವು ಜನ ಆಸಾಮಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸೀಟ್ ಜೂಜಾಟವನ್ನು ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗ ( ಸಿಸಿಬಿ ) ವಿಶೇಷ ವಿಚಾರಣಾ ದಳದ ಅಧಿಕಾರಿಗಳು , ದಿನಾಂಕ . 13 – 02 – 2019 ರಂದು ಮೇಲ್ಕಂಡ ಸ್ಥಳದ ಮೇಲೆ ಸಿಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿ , ಅಲ್ಲಿ ಜೂಜಾಟದಲ್ಲಿ ತೊಡಗಿದ್ದ ,

1 . ಚಂದ್ರು ಬಿನ್ ಗಂಗಯ್ಯ , 65 ವರ್ಷ 2 . ಶಾಂತಕುಮಾರ್ ಬಿನ್ ವೆಂಕಟೇಶಪ್ಪ , 46 ವರ್ಷ 3 , ರಾಜರೆಡ್ಡಿ ಬಿನ್ ಶಿವರೆಡ್ಡಿ , 54 ವರ್ಷ 4 . ಭಾಸ್ಕರ್ ಬಿನ್ ಮುನಿನಂಜಪ್ಪರೆಡ್ಡಿ , 59 ವರ್ಷ 5 , ರಮೇಶ್ ಜಿನ್ ಆಂಜನಪ್ಪ , 45 ವರ್ಷ 6 , ಮಂಜುನಾಥ ಬಿನ್ ಮುನಿಯಪ್ಪ , 40 ವರ್ಷ 7 . ಶ್ರೀಕಾಂತ ಬಿನ್ ನಾರಾಯಣಪ್ಪ , 38 ವರ್ಷ 8 . ವೇಣುಗೋಪಾಲ್ ಬಿನ್ ರಂಗಯ್ಯ , 40 ವರ್ಷ 9 , ರವಿಕುಮಾರ್ ಬಿನ್ ರಾಮಯ್ಯ , 45 ವರ್ಷ 10 . ವಿಫ್ರೆಶ್ ಬಿನ್ ಮೂರ್ತಿ , 35 ವರ್ಷ 11 , ನಾರಾಯಣ ಸ್ವಾಮಿ ಬಿನ್ ರಾಮಪ , 46 ವರ್ಷ 12 . ಚಂದ್ರಶೇಖರ ರೆಡ್ಡಿ ಬಿನ್ ಎಸ್ . ಎನ್ . ವೆಂಕಟರಾಯಪ್ಪ , 42 ವರ್ಷ 13 , ಸಂದೀಪ ಬಿನ್ ಸುದೀರ್ 40 ವರ್ಷ 14 . ಜೆ . ಎಂ . ಚಂದ್ರಪ್ಪ ಬಿನ್ ಲೇಟ್ ಮುನಿಸ್ವಾಮಪ್ಪ , 66 ವರ್ಷ 15 . ಹಂಪನ್ನ ಬಿನ್ ನಂದಪ್ಪ , 53 ವರ್ಷ 16 . ಡಿ . ರಮೇಶ್ ಬಿನ್ ಮುನಿಸ್ವಾಮಿಯಲ್ಲಪ್ಪ , 59 ವರ್ಷ 17 . ಶಂಕರ್ ಬಿನ್ ಗೋವಿಂದಸ್ವಾಮಿ , 52 ವರ್ಷ 18 , ಶಿವಪ್ರಸಾದ್ ಬಿನ್ ದಾಮೋಧರರಾವ್ , ವರ್ಷ ಇವರುಗಳನ್ನು ವಶಕ್ಕೆ ಪಡೆದು , ಅಲ್ಲಿ ಜೂಜಾಟಕ್ಕೆ ತೊಡಗಿಸಿದ್ದ , ಹಣ ರೂ . 4 , 94 , 000 / ಹಾಗೂ 7 ಕಟ್ಟು ಇಸ್ಪೀಟ್ ಕಾರ್ಡ್‌ಗಳು ಇವುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ . ಈ ಆಸಾಮಿಗಳ ವಿರುದ್ಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ . ಈ ಕಾರ್ಯಚರಣೆಯನ್ನು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತರು , ಅಪರಾಧ ರವರಾದ ಶ್ರೀ ಅಶೋಕ್ ಕುಮಾರ್ ಐ . ಪಿ . ಎಸ್ , ಮತ್ತು ಉಪ ಪೊಲೀಸ್ ಆಯುಕ್ತರು , ಅಪರಾಧ ರವರಾದ ಶ್ರೀ ಎಸ್ . ಗಿರೀಶ್ ಐ . ಪಿ . ಎಸ್ ರವರ ಮಾರ್ಗದರ್ಶನದಲ್ಲಿ , ಸಿಸಿಬಿ , ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಟಿ . ಪಿ ಸುಬ್ರಮಣ್ಯ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಸಿ , ನಿರಂಜನ ಕುಮಾರ ಮತ್ತು ಸಿಬ್ಬಂದಿಗಳಾದ ಶ್ರೀ ರವಿಕುಮಾರ್ , ಶ್ರೀ ಸುನಿಲ್ ಕುಮಾರ್ , ಶ್ರೀ ಚಂದ್ರಶೇಖರ್ ಹಾಗೂ ಶ್ರೀ ನಾಗರಾಜು ರವರುಗಳು ಕೈಗೊಂಡಿರುತ್ತಾರೆ .
City Today News
(citytoday.media)
9341997936
