14 / 02 / 2019 ರಂದು ಶ್ರೀಮತಿ . ನೀಲಮ್ಮ , ಡಿ – ಗ್ರೂಪ್ ನೌಕರರ ಮೂಲಕ ಶ್ರೀ . ವಿ . ಮಂಜುನಾಥ ರವರು ಪಿರ್ಯಾದುದಾರರಿಂದ ರೂ . 18 , 000 / – ಲಂಚದ ಹಣವನ್ನು ಪಡೆಯುತ್ತಿರುವ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ .

ದಿನಾಂಕ 14 / 02 / 2019 , ಕೋಲಾರ ಟೌನ್ , ಕನಕನಪಾಳ್ಯದ ನಿವಾಸಿಯೊಬ್ಬರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಿದ್ದು , ಸರಬರಾಜು ಮಾಡಿದ್ದ ನೀರಿನ ಬಿಲ್ಲಿನ ಒಟ್ಟು ಮೊತ್ತ ರೂ . 65 , 600 / – ಗಳನ್ನು ಮಂಜೂರು ಮಾಡಿಕೊಡಲು ಶ್ರೀ . ವಿ . ಮಂಜುನಾಥ , ತಾಲ್ಲೂಕು ವಿಸ್ತರಣಾಧಿಕಾರಿ , ಕೋಲಾರ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ರವರು ರೂ . 18 , 800 / – ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 14 / 02 / 2019 ರಂದು ಶ್ರೀಮತಿ . ನೀಲಮ್ಮ , ಡಿ – ಗ್ರೂಪ್ ನೌಕರರ ಮೂಲಕ ಶ್ರೀ . ವಿ . ಮಂಜುನಾಥ ರವರು ಪಿರ್ಯಾದುದಾರರಿಂದ ರೂ . 18 , 000 / – ಲಂಚದ ಹಣವನ್ನು ಪಡೆಯುತ್ತಿರುವ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಇಬ್ಬರೂ ಆರೋಪಿತರನ್ನು ದಸ್ತಗಿರಿ ಮಾಡಿ , ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ , ತನಿಖೆ ಮುಂದುವರೆದಿದೆ .

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.