
ಬಿ.ಬಿ.ಎಂ.ಪಿ.ದಿವಾಳಿಯತ್ತ :ಪೂಳ್ಳು ಭರವಸೆಗಳ ಸುಳ್ಳು ಸರದಾರರು .
ಬಿ.ಬಿ.ಎಂ.ಪಿ.ಕೇಂದ್ರ ಕಛೇರಿಯ ವಿರೋದ ಪಕ್ಷದ ನಾಯಕರಾದ ಪದ್ಮನಾಭರೆಡ್ಡಿ ರವರು ಬಿ.ಬಿ.ಎಂ.ಪಿ.ಆಡಳಿತ ವೈಫಲ್ಯ ಮತ್ತು ರಾಜ್ಯ ಸರ್ಕಾರ ಸುಳ್ಳು ಭರವಸೆಗಳ ಕೊಟ್ಟು ಬೆಂಗಳೂರು ನಗರ ಆಧೋಗತಿಗೆ ಇಳಿಯುತ್ತಿದೆ ಮತ್ತು ಬಿ.ಬಿ.ಎಂ.ಪಿ.ದಿವಾಳಿಯತ್ತ ಸಾಗುತ್ತಿದೆ ಎಂದು ಆರೋಪ ಮಾಡಿದರು.
ಬೃಹತ್ ಬೆಂಗಳೂರು ಪಾಲಿಕೆ ಆಡಳಿತ ಗೊತ್ತು ಗುರಿಯಿಲ್ಲದಂತಾಗಿದೆ .ಕಾಂಗ್ರೆಸ್ ಜೆಡಿಎಸ್ ಪಕ್ಷದವರು ಪಾರದರ್ಶಕ ಕಾಯಿದೆ ಗಾಳಿಗೆ ತೂರಿದ್ದಾರೆ .
☘ಬೆಂಗಳೂರು ಅಭಿವೃದ್ದಿಗೆ ರಾಜ್ಯ ಸರ್ಕಾರ ಷೋಷಣೆ ಮಾಡಿರುವ ಹಣ ಪಾಲಿಕೆಗೆ ಬಿಡುಗಡೆಯಾಗಿಲ್ಲ.
☘ಷೋಷಣೆ ,ಷೋಷಣೆಯಾಗಿಯೇ ಉಳಿಯುತ್ತದೆ .
☘ಸರ್ಕಾರದ ಅನುದಾನ ಷೋಷಣೆಯ ಆದೇಶ ಪತ್ರದ ಮೇಲೆ ಬಿ.ಬಿ.ಎಂ.ಪಿ ಜಾಬ್ ಕೋಡ್ ಗಳನ್ನು
☘2013ರಿಂದ 2018ರವರೆಗೆ ಕೂಟ್ಯಂತರ ರೂಪಾಯಿ ಮಾಡಿ ಕ್ರೀಯಾ ಯೋಜನೆ ರೂಪಿಸಿ ,ಟೆಂಡರ್ ಕರೆದು ಗುತ್ತಿಗೆ ನೀಡಿದ್ದಾರೆ .ಅದರೆ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ.
☘ಬಿಡುಗಡೆಯಾಗಿರುವುದು 6892ಕೋಟಿ ಮಾತ್ರ ಸರ್ಕಾರದಿಂದ ಬಾಕಿ ಬರಬೇಕಾಗಿರುವುದು 5476ಕೋಟಿ .2019ರ ಸಾಲಿನಲ್ಲಿ 8015ಕೋಟಿ ಮೂರು ವರ್ಷಗಳ ಪ್ಯಾಕೇಜ್ ನೀಡಿದ್ದಾರೆ .ಹಣ ಬಿಡುಗಡೆ ಮಾತ್ರ ಮಾಡಿಲ್ಲ .
☘ಬಿ.ಬಿ.ಎಂ.ಪಿ.ಗುತ್ತಿಗೆದಾರರು ತಾವು ಮಾಡಿದ ಕೆಲಸಕ್ಕೆ ಎರಡು ವರ್ಷ ಹಣ ಪಡೆಯಲು ,5476ಕೋಟಿ ಹಣ ಗುತ್ತಿಗೆದಾರರ ಬಿಲ್ಲು ಬಾಕಿ ಇದೆ.
☘2018-19ರ ಸಾಲಿನಲ್ಲಿ 272.21ಕೋಟಿ ರೂಪಾಯಿ ರಾಜ್ಯ ಹಣಕಾಸು ನಿಧಿಯಿಂದ ಹಂಚಿಕೆ ಮಾಡಲಾಗಿತ್ತು .ಜಾಬ್ ಕೋಡ್ ನೀಡಿರುವುದು 68ಕೋಟಿ ಮಾತ್ರ 233ಕೋಟಿ ರೂಪಾಯಿ ಜಾಬ್ ಕೋಡ್ ನೀಡಿರುವುದಿಲ್ಲ ,ಹಣ ಬಿಡುಗಡೆಯಾಗುವುದು ಯಾವಗ.
ಕಾಂಗ್ರೆಸ್ ಜೆ.ಡಿ.ಎಸ್.ಶಾಸಕರ ಕ್ಷೇತ್ರಗಳಿಗೆ ಭರಪೂರ ಅನುದಾನ ,ಬಿ.ಜೆ.ಪಿ.ಪಕ್ಷದ ಶಾಸಕರು ಇರುವ ಕ್ಷೇತ್ರಗಳಿಗೆ ಅನುದಾನವಿಲ್ಲ.
2018-19ರಂದು ಎಸ್.ಎಫ್.ಸಿ.ಅನುದಾನ ಆಡಿಯಲ್ಲಿ ದಾಸರಹಳ್ಳಿ 30ಕೋಟಿ ಮಹಾಲಕ್ಷ್ಮೀಲೇಜೌಟ್ 25ಕೋಟಿ ಜಾಬ್ ಕೋಡ್ ನೀಡಿ ಸರ್ಕಾರ ಆದೇಶ ನೀಡಿ ಕೆ.ಆರ್.ಡಿ.ಎಲ್.ಮುಖಾಂತರ ಕಾಮಗಾರಿಗಳು ಕೈಗೊಳ್ಳಲು ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ .
2018ಪುಲಕೇಶಿನಗರ ವಿಧಾನಸಭಾ ಕ್ಷೇತ್ರಕ್ಕೆ 20ಕೋಟಿ ಚಾಮರಾಜಪೇಟೆ 30ಕೋಟಿ ನೀಡಿದ್ದಾರೆ .ಕಾನೂನುಬಾಹಿರವಾಗಿ ನೀಡಿರುವ ಜಾಬ್ ಕೋಡ್ ಹಾಗೂ ಆದೇಶಗಳನ್ನು ವಾಪಸ್ಸು ಪಡೆಯಬೇಕು.ಇದರಲ್ಲಿ ಅಭಿವೃದ್ದಿಗಿಂತ ,ಲೂಟಿ ಮಾಡಲು ಹೋರಟಂತಿದೆ .ಇದರ ವಿರುದ್ದ ಕ್ರಮ ಕೈಗೊಳ್ಳದೆ ಹೋದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ವಿರೋಧ ಪಕ್ಷದ ನಾಯಕರಾದ ಪದ್ಮನಾಭರೆಡ್ಡಿರವರು ಎಚ್ಚರಿಕೆ ನೀಡಿದರು.
City Today News
(citytoday.media)
9341997936
