ಸ್ವಾಮಿ ವಿವೇಕಾನಂದ ಪ್ರತಿಮೆ ಎದುರು ಭಾರತಮಾತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿ ಶ್ರದ್ದಾಂಜಲಿ ಸಭೆ ನಡೆಸಿ ಹಾಗೂ ಎರಡು ನಿಮಿಷ ಮೌನಚರಣೆ ಮಾಡಿದರು ವೀರ ಯೋಧರಿಗೆ ಕ್ಯಾಂಡಲ್ ಲೈಟ್ ಬೆಳಗಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು

ಪುಲ್ವಾಮಾ ಅವಂತಿಪುರ ಪ್ರದೇಶದಲ್ಲಿ ಉಗ್ರನ ದಾಳಿಯಲ್ಲಿ ಭಾರತೀಯ ಹೆಮ್ಮೆಯ 44ಸಿ.ಆರ್.ಫಿ.ಎಫ್ ಸೈನಿಕರ ವೀರ ಮರಣ ಹೊಂದಿದರು.ವಿಜಯ ವಿವೇಕ ಪ್ರತಿಷ್ಟಾನ ವತಿಯಿಂದ ಸ್ವಾಮಿ ವಿವೇಕಾನಂದ ಉದ್ಯಾನವನದಲ್ಲಿ ಸ್ವಾಮಿ ವಿವೇಕಾನಂದ ಪ್ರತಿಮೆ ಎದುರು ಭಾರತಮಾತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿ ಶ್ರದ್ದಾಂಜಲಿ ಸಭೆ ನಡೆಸಿ ಹಾಗೂ ಎರಡು ನಿಮಿಷ ಮೌನಚರಣೆ ಮಾಡಿದರು ವೀರ ಯೋಧರಿಗೆ ಕ್ಯಾಂಡಲ್ ಲೈಟ್ ಬೆಳಗಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು.

ಸಭೆಯಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ.ಸೋಮಣ್ಣರವರು ,ಗೋವಿಂದರಾಜನಗರ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು ,ವಿಜಯ ವಿವೇಕ ಪ್ರತಿಷ್ಟಾನದ ಪದಾಧಿಕಾರಿಗಳು ಮತ್ತು ಸ್ಥಳೀಯ ನೂರಾರು ನಾಗರಿಕರು ಭಾಗವಹಿಸಿದ್ದರು .

ಶಾಸಕರಾದ ವಿ.ಸೋಮಣ್ಣರವರು ಮಾತನಾಡಿ
ಭಾರತೀಯ ಸೈನ್ಯದ 44 ಸೈನಿಕರ ಹತ್ಯೆ ಮಾಡಿದ ಪಾಕಿಸ್ತಾನ ಬೆಂಬಲದ ಉಗ್ರ ಸಂಘಟನೆಯಾದ ಜೈಷ್ ಎ.ಮೊಹಮದ್ಮ ಭಯೋತ್ಪಾದನಾ ಚಟುವಟಿಕೆಗಳಿಗೆ ಸರಿಯಾದ ಪಾಠ ಕಲಿಸಲು ಭಾರತದ ದಿಟ್ಟ ಪ್ರಧಾನಿ ನರೇಂದ್ರ ಮೋದಿರವರು ಸೈನ್ಯದ ಮುಖ್ಯಸ್ಥರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ 130ಕೋಟಿ ಭಾರತೀಯರು ನೋವಿನಲ್ಲಿ ಮುಳುಗಿದ್ದಾರೆ .ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಭಾರತೀಯ ಸೇನಾ ಪಡೆ ಸಜ್ಜಾಗಿದೆ .44ಸೈನಿಕರ ಅತ್ಮಕ್ಕೆ ಶಾಂತಿ ಸಿಗಲಿ ಮತ್ತು ಹುತಾತ್ಮರಾದ ಸೈನಿಕ ಕುಟುಂಬಕ್ಕೆ ಆತ್ಮಸ್ಥೈರ್ಯ ಸಿಗಲಿ ,ಅವರ ಕುಟುಂಬಕ್ಕೆ ಇಡಿ ಭಾರತೀಯರು ನಿಮ್ಮೊಂದಿಗೆ ಇದ್ದೆವೆ.” ಜೈ ಜವಾನ್ ಜೈ ಕಿಸಾನ್” ಎಂದು ಹೇಳಿದರು.ಕೆ.ಉಮೇಶ್ ಶೆಟ್ಟಿರವರು ಮಾತನಾಡಿ 44ಹುತಾತ್ಮರಾದ ಸೈನಿಕರು ಕುಟುಂಬದ ಜೊತೆಯಲ್ಲಿ ಇಡಿ ಭಾರತವೆ ನಿಂತಿದೆ .ಪಾಕಿಸ್ತಾನ ಇಂದು ಆಧೋಗತಿ ಸ್ಥಿತಿ ತಲುಪಿದೆ ಭಯೋತ್ಪದನಾ ಚಟುವಟಿಕೆ ಮಾಡುವ ಮತ್ತು ಉಗ್ರರ ಬೆಂಬಲಿಸುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೈನ್ಯ ವೀರ ಯೋದರ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.