“ಶೋಷಿತ ಬಹುಜನರ ಐಕ್ಯತಾ ಸಮಾವೇಶ ”

18 – 02 – 2019

ಆರ್ . ಪಿ . ಐ – ಕರ್ನಾಟಕ ಪಕ್ಷದ ವತಿಯಿಂದ ಪತ್ರಿಕಾ ಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ವಿಚಾರಗಳು

ಶೂದ್ರ ಅತಿಶೂದ್ರ ಸಮುದಾಯಗಳಿಗೆ ಅಕ್ಷರ ನೀಡುವ ಮುಖಾಂತರ ಅಸಮಾನತೆಯ ಸಮಾಜವನ್ನು ನಿರ್ನಾಮ ಮಾಡಲು ಮುಂದಾದ ಫುಲೆ ದಂಪತಿಗಳನ್ನು ನೆನೆಯುತ್ತಾ , ಅವರ ಜನ್ಮ ದಿನದ ಅಂಗವಾಗಿ ರಾಜ್ಯ ಮಟ್ಟದ ಬೃಹತ್ ಶೋಷಿತ ಬಹುಜನರ ಐಕ್ಯತಾ ಸಮಾವೇಶ ” ಕಾರ್ಯಕ್ರಮವನ್ನು ದಿನಾಂಕ : 20 – 08 – 2019 ರಂದು . ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶವನ್ನು ಸಂಘಟಿಸಲಾಗಿದೆ . ಬಹುಮುಖ್ಯವಾಗಿ ಸಂವಿಧಾನವನ್ನು ಕಾಪಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ . ಸಂವಿಧಾನವನ್ನು ಉಳಿಸುವ ಮುಖಾಂತರ ದೇಶವನ್ನು , ಬಹುಸಂಖ್ಯಾತರನ್ನು ಕೋಮುವಾದಿಗಳಿಂದ ಕಾಪಾಡಬೇಕಾಗಿದೆ .

ಈ ಸಮಾವೇಶನು ಖ್ಯಾತ ನಟರಾದ ಮಾನ್ಯ ಪ್ರಕಾಶ್ ರೈರವರು ಉದ್ಘಾಟನೆ ಮಾಡಲಿದ್ದಾರೆ . ಸಮಾವೇಶದಲ್ಲಿ ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ , ಸಾಮಾಜಿಕ ಹೋರಾಟಗಾರರಾದ ಟಿ . ಜೆ . ಅಬ್ರಹಾಂ , ಬರಹಗಾರರಾದ ಕೆ . ಷರೀಫ , ಆರ್‌ . ಮಾನಸಯ್ಯ ಇನ್ನೂ ಮುಂತಾದ ಪ್ರಗತಿಪರ ಚಿಂತಕರು ಹಾಗೂ ಹೋರಾಟಗಾರರು ಭಾಗವಹಿಸಲಿದ್ದಾರೆ .

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.