ಏರೋ ಇಂಡಿಯಾ 2019ಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ

20 Feb 2019 ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ 5 ದಿನಗಳ ಕಾಲ ನಡೆಯಲಿರುವ ಏರೋ ಇಂಡಿಯಾ 2019ಕ್ಕೆ ಚಾಲನೆ ಸಿಕ್ಕಿದೆ. ಕೇಂದ್ರ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಏರ್ ಶೋಗೆ ಚಾಲನೆ ನೀಡಿದ್ರು.
ನಿರ್ಮಲಾ ಸೀತಾರಾಮನ್ ಆಗಮಿಸಿದ ಬಳಿಕ 3 ಹೆಲಿಕಾಪ್ಟರ್ಗಳ ಹಾರಾಟದ ಮೂಲಕ ವೇದಿಕೆಗೆ ಸ್ವಾಗತಿಸಲಾಯಿತು.

ನಿನ್ನೆ ಸೂರ್ಯ ಕಿರಣ್ ಲಘು ವಿಮಾನಗಳ ಅಪಘಾತದಲ್ಲಿ ಮೃತಪಟ್ಟ ಪೈಲೆಟ್ ಸಾಹಿಲ್ ಗಾಂಧಿಗೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಎರಡು ನಿಮಿಷ ಮೌನಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಿಎಂ ಹೆಚ್.ಡಿ ಕುಮಾರಸ್ವಾಮಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಡಿಸ್ಪ್ಲೇ ಶೋ ಆರಂಭದಲ್ಲಿ ವಿಂಟೇಜ್ ಡಕೋಟ ವಿಮಾನ ಮೊದಲ ಪ್ರದರ್ಶನ ನೀಡಿತು. ಎರಡನೆಯದಾಗಿ ರುದ್ರ ಟೀಮ್ ನಿಂದ ಪ್ರದರ್ಶನ ನಡೆಯಿತು. ಭಾರತದ ಹೆಮ್ಮೆಯ ಸಾರಾಂಗ್ ಟೀಮ್ ನಿಂದ ಸ್ಮೋಕ್ ಹೆಲಿಕಾಪ್ಟರ್ ಗಳ ಸಾಹಸ ಪ್ರದರ್ಶನ ನಡೆಯಿತು.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.