
ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ ಸಮನ್ವಯ ಕನ್ನಡ ಸಂಘ ಹಾಗೂ ಕೆ ಎಸ್ ಆರ್ ಟಿ ಸಿ ಸಹಯೋಗದೊಂದಿಗೆ ಇಂದು
ಕೆ ಎಸ್ ಆರ್ ಟಿ ಸಿ, ಕೆಂಪೇಗೌಡ ಬಸ್ ನಿಲ್ದಾಣದಲ್ಲಿ, ಉಗ್ರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಹಾಗೂ ಪುಷ್ಪ ನಮನ ಅರ್ಪಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ.ಶಿವಯೋಗಿ ಸಿ.ಕಳಸದ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆ ಎಸ್ ಆರ್ ಟಿ ಸಿ, ನಾಡೋಜ ಶ್ರೀ ಮಹೇಶ್ ಜೋಶಿ, ವಿಶ್ರಾಂತ ಹೆಚ್ಚುವರಿ ಮಹಾ ನಿರ್ದೇಶಕರು, ದೂರದರ್ಶನ ಹಾಗೂ ಗೌರವಾಧ್ಯಕ್ಷರು, ಸಮನ್ವಯ ಕನ್ನಡ ಸಂಘ, ಬ್ರಿಗೇಡಿಯರ್ ಶ್ರೀ.ಎಸ್.ಬಿ.ಸಜ್ಜನ್, ನಿರ್ದೇಶಕರು ,ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ, ಕರ್ನಾಟಕ ಸರ್ಕಾರ ಹಾಗೂ ಇನ್ನಿತರೆ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ಯೋಧರು ತಮ್ಮ ಜೀವನವನ್ನು ದೇಶದ ಒಳಿತಿಗಾಗಿ ಮುಡಿಪಾಗಿಟ್ಟು ಹೋರಾಡುತ್ತಾರೆ. ಅವರನ್ನು ಕಳೆದುಕೊಂಡ ನಮಗೆ ತುಂಬಾ ನೋವಾಗಿದೆ ಎಂದು ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದರು.
ನಗರದ ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬುಧವಾರ ಆಯೋಜಿಸಿದ್ದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಲ್ವಾಮಾದಲ್ಲಿ ೪೪ ಯೋದರು ಹುತಾತ್ಮರಾಗಿದ್ದಕ್ಕೆ ಇಡೀ ವಿಶ್ವವೇ ಮರುಗುತ್ತಿದೆ. ದೇಶದ ಈ ವೀರ ಯೋಧರಿಗೆ ಪ್ರತಿಯೊಬ್ಬರೂ ಗೌರವ ಸಲ್ಲಿಸಬೇಕು ಮತ್ತು ಅವರ ಕುಟುಂಬಕ್ಕೆ ಧೈರ್ಯ ತುಂಬುವ ಮೂಲಕ ಸಾಂತ್ವನ ಹೇಳಬೇಕು ಎಂದು ಹೇಳಿದರು.
ಸರ್ಕಾರ ಅವರಿಗೆ ನೆರವು ನೀಡುತ್ತಿದೆ.ನಾವೂ ಕೂಡ ಕೈಲಾದ ಸಹಾಯ ಮಾಡಬೇಕು. ಇಡೀ ದೇಶವೇ ಹುತಾತ್ಮ ಯೋಧರ ಕುಟುಂಬಕ್ಕೆ ಬೆಂಬಲಕ್ಕಿದೆ. ನಮ್ಮ ರಾಜ್ಯದ ಹುತಾತ್ಮ ಯೋಧ ಶ್ರೀ ಗುರು ಅವರ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ, ಕೆಎಸ್ಆರ್ ಟಿಸಿಯು ಮಾ.೮ ರಂದು ಮಹಿಳಾ ದಿನಾಚರಣೆ ದಿನ ಸಂದರ್ಭದಲ್ಲಿ,ಹುತಾತ್ಮ ಯೋಧ ಗುರು ಅವರ ಪತ್ನಿಯವರನ್ನು ಕೇಂದ್ರ ಕಛೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಹ್ವಾನಿಸಿ ಸಾಂತ್ವನ ಹಾಗೂ ಸಂಸ್ಥೆಯ ವತಿಯಿಂದ ಆಗುವ ನೆರವನ್ನು ಮಾಡಲಾಗುವುದು.
ಇಂದು ನಮ್ಮ ಕಾರ್ಮಿಕರು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು. ಹುತಾತ್ಮ ಯೋಧರನ್ನು ಸದಾ ಸ್ಮರಿಸುತ್ತಿರಬೇಕು ಎಂದರು.
City Today News
(citytoday.media)
9341997936
