ಬಸ್ ನಿಲ್ದಾಣ/ ಬಸ್ಸಿನಲ್ಲಿ ಸಹ ಪ್ರಯಾಣಕರ ಸೋಗಿನಲ್ಲಿ ಪ್ರಯಾಣಿಸು ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಪ್ರಯಾಣಿಕರು ಜಾಗ್ರತೆ ವಹಿಸುವುದು


ಕೆ. ಎಸ್.ಆರ್. ಟಿ. ಸಿ, ಮೈಸೂರು ರಸ್ತೆ ಬಸ್ ನಿಲ್ದಾಣ ದಿಂದ ಹೊರಡುವ ಸಾರಿಗೆ ಬಸ್ ನಲ್ಲಿ ಹತ್ತಿ ಟಿಕೆಟ್ ಪಡೆದು ಪಕ್ಕ ಕುಳಿತುಕೊಳ್ಳುವ ಅಮಾಯಕ ಮಹಿಳೆಯರಿಂದ ಮಾತು ಬೆಳೆಸಿ, ಅವರ ವಿಶ್ವಾಸಗಳಿಸಿ, ನಂತರ ಅವರಿಗೆ ಮತ್ತು ಬರುವ ಪಾನೀಯ ನೀಡಿ, ನಿದ್ದೆಗೆ ಜಾರಿ ಹೋದಾಗ ಅವರ ಆಭರಣ, ನಗದು ದೋಚಿ ಹೋಗುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಕುರಿತು ಲಷ್ಕರ್ ಪೊಲೀಸ್ ಠಾಣೆ ಮೈಸೂರು ನಲ್ಲಿ ಪ್ರಕರಣ ದಾಖಲಾಗಿ ಇರುತ್ತದೆ.
ಈ ಬಗ್ಗೆ ಅಲ್ಲಿನ ಪೊಲೀಸರು ವಿಚಾರಣೆ ಮಾಡಿ, ಸಂಶಯ ವ್ಯಕ್ತಿಗಳ ಚಿತ್ರ ನೀಡಿ ಮಾಹಿತಿ ನೀಡುವಂತೆ, ನಿಗಮದ ಭದ್ರತಾ ಮತ್ತು ಜಾಗೃತ ಇಲಾಖೆಗೆ ತಿಳಿಸಿದ್ದರು. ಈ ಬಗ್ಗೆ ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಮೈಸೂರು ಬಸ್ ನಿಲ್ದಾಣದ ಭದ್ರತಾ ಸಿಬ್ಬಂದಿಗಳಿಗೆ ಮಾಹಿತಿ ಸಂಗ್ರಹಿಸಿ, ವಿಚಾರಣೆ ನಡೆಸಲು ತಿಳಿಸಲಾಗಿತ್ತು. ಅದರಂತೆ, ಈ ದಿನ‌ ನಿಗಮದ ಮೈಸೂರು ರಸ್ತೆ ಬಸ್ ನಿಲ್ದಾಣದ ಭದ್ರತಾ ಸಿಬ್ಬಂದಿಗಳು ಜಾಗ್ರತೆ ವಹಿಸಿ, ಓರ್ವ ಮೈಸೂರು ನಿವಾಸಿ ಮಹಿಳೆಯನ್ನು ಅನುಮಾನಸ್ಪದ ಹಿನ್ನಲೆಯಲ್ಲಿ ವಿಚಾರಣೆ ಮಾಡಲಾಗಿ, ಈವರೆಗೂ ಈ ರೀತಿಯ ಎರಡು ಕೃತ್ಯ ಎಸಗಿರುವುದನ್ನು, ವಿಚಾರಣೆ ವೇಳೆ ಒಪ್ಪಿಕೊಂಡಿರುತ್ತಾರೆ. ಕೂಡಲೇ ಲಷ್ಕರ್ ಪೊಲೀಸ್ ಠಾಣೆ ಮತ್ತು ಸ್ಥಳಿಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೈಸೂರು, ಲಷ್ಕರ್ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಲಾಗುತ್ತಿದೆ.

ಹೆಚ್ಚಿನ‌ ಮಾಹಿತಿಗಾಗಿ ಸಂಪರ್ಕಿಸಿ:
ಉಪಮುಖ್ಯ ಭದ್ರತಾ & ಜಾಗೃತಾಧಿಕಾರಿ, 7760990563, ಕೆ‌ಎಸ್ ಆರ್ ಟಿ ಸಿ ,ಮೈಸೂರು ರಸ್ತೆ ಬಸ್ ನಿಲ್ದಾಣ, ಬೆಂಗಳೂರು.
ಸಾರ್ವಜನಿಕ ಪ್ರಯಾಣಿಕರು ಬಸ್ಸಿನಲ್ಲಿ ಅಥವಾ ಬಸ್ ನಿಲ್ದಾಣದಲ್ಲಿ ಈ ರೀತಿಯ ಅನುಮಾನಸ್ಪದ ವ್ಯಕ್ತಿಗಳ ನಡೆಗಳ ಬಗ್ಗೆ ತಮ್ಮ ಗಮನಕ್ಕೆ ಬಂದ ಕೂಡಲೇ,‌ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕ/ ನಿರ್ವಾಹಕರ ಅಥವಾ ಸ್ಥಳೀಯ ಬಸ್ ನಿಲ್ದಾಣದ ಅಧಿಕಾರಿಗಳ ಗಮನಕ್ಕೆ ತರುವುದು.
ಸಾರ್ವಜನಿಕ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಇಂತಹ ಪ್ರಯಾಣಿಕರ ಬಗ್ಗೆ ಜಾಗ್ರತೆ ವಹಿಸುವುದರೊಡನೆ, ಯಾವುದೇ ಅಪರಿಚಿತ ವ್ಯಕ್ತಿಗಳು ನೀಡುವ ತಿಂಡಿ, ತಿನಿಸು, ಪಾನೀಯವನ್ನು ಸ್ವೀಕರಿಸುವ ಮುನ್ನ ಎಚ್ಚರಿಕೆ ವಹಿಸಲು ಕೋರಲಾಗಿದೆ.
ಶಿವಯೋಗಿ ಸಿ‌.ಕಳಸದ ಭಾಆಸೇ,
ವ್ಯವಸ್ಥಾಪಕ ನಿರ್ದೇಶಕರು, ‌
ಕೆ ಎಸ್ ಆರ್ ಟಿ ಸಿ.

City Today News

(citytoday.media

Leave a comment

This site uses Akismet to reduce spam. Learn how your comment data is processed.