ಯಲಹಂಕ ವಾಯುನೆಲೆಯಲ್ಲಿ, ವಾಹನಗಳ ಮಾಲೀಕರ ಅನುಕೂಲಕೋಸ್ಕರ ಸಾರಿಗೆ ಇಲಾಖಾ ವತಿಯಿಂದ ಪ್ರಾದೇಶಿಕ ಸಾರಿಗೆ ಕಛೇರಿ , ಯಲಹಂಕದಲ್ಲಿ ಸಹಾಯ ಕೇಂದ್ರವನ್ನು ಪ್ರಾರಂಭಿಸಲಾಗಿದೆ

ಯಲಹಂಕ ವಾಯುನೆಲೆಯಲ್ಲಿ 2019 ರ ಏರ್ ಷೋನಲ್ಲಿ ದಿನಾಂಕ : 23 – 02 – 2019ರಂದು ಸಂಭವಿಸಿದ ಬೆಂಕಿ ಅವಗಡದಲ್ಲಿ ನಿಲುಗಡೆ ಪ್ರದೇಶದಲ್ಲಿದ್ದ ಸುಮಾರು 300ಕ್ಕೂ ಹೆಚ್ಚು ಮೋಟಾರು ವಾಹನಗಳು ಸುಟ್ಟು ಕರಕಲಾಗಿರುವುದಾಗಿ ವರದಿಗಳು ಬಂದಿದ್ದು , ಈ ವಾಹನಗಳ ಮಾಲೀಕರ ಅನುಕೂಲಕೋಸ್ಕರ ಅಂದರೆ ವಾಹನದ ನೋಂದಣಿ ಮತ್ತು ಚಾಲನಾ ಪತ್ರಗಳ ವಿವರಗಳನ್ನು ಪಡೆಯಲು ಬೇಕಾಗುವ ವಿಧಿ ವಿಧಾನಗಳನ್ನು ತಿಳಿದುಕೊಳ್ಳಲು ಸಾರಿಗೆ ಇಲಾಖಾ ವತಿಯಿಂದ ಪ್ರಾದೇಶಿಕ ಸಾರಿಗೆ ಕಛೇರಿ , ಯಲಹಂಕದಲ್ಲಿ ಸಹಾಯ ಕೇಂದ್ರವನ್ನು ಪ್ರಾರಂಭಿಸಲಾಗಿದೆ , ಸಹಾಯ ಕೇಂದ್ರದ ದೂರವಾಣಿ ಸಂಖ್ಯೆ 080 – 29729908 , 29729909 ಮೊಬೈಲ್ 9449864050 ಆಗಿದ್ದು ಸಂಬಂಧಿಸಿದವರು ಈ ಕೇಂದ್ರದ ಉಪಯೋಗವನ್ನು ಪಡೆದುಕೊಳ್ಳಲು ಕೋರಿದೆ . ಸದರಿ ಸಹಾಯ ಕೇಂದ್ರವು ದಿನಾಂಕ : 24 – 02 – 2019 ( ಭಾನುವಾರ ) ರಂದು ಕಾರ್ಯನಿರ್ವಹಿಸುತ್ತದೆ .

-ಆಯುಕ್ತರು

ಸಾರಿಗೆ ಮತ್ತು ರಸ್ತೆ ಸುರಕ್ಷತೆ

ಬೆಂಗಳೂರು

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.