ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಈಶ ಫೌಂಡೇಶನ್ ನಿಂದ 50 ಲಕ್ಷ ರೂ. ಗಳ ಕೊಡುಗೆ

ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಈಶ ಫೌಂಡೇಶನ್ ನಿಂದ 50 ಲಕ್ಷ ರೂ. ಗಳ ಕೊಡುಗೆ

25 ಫೆಬ್ರವರಿ, ಬೆಂಗಳೂರು : ಇದೇ ತಿಂಗಳ, 14ನೇ ತಾರೀಕು ಘಟಿಸಿದ ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿರುವ ಸಿ.ರ್.ಪಿ.ಫ್ (CRPF) ಯೋಧರ ಕುಟುಂಬದವರಿಗೆ ಈಶ ಫೌಂಡೇಶನ್ INR 50 ಲಕ್ಷ ರೂ. ಗಳ ಧನಸಹಾಯವನ್ನು ನೀಡಿದ್ದಾರೆ.

ದೇಶದ ಗಡಿಗಳನ್ನು ಕಾಯುತ್ತಿರುವ ಯುವಕ-ಯುವತಿಯರ ಶೌರ್ಯ ಮತ್ತು ತ್ಯಾಗವನ್ನು ಕುರಿತು ಮಾತನಾಡಿದ ಸದ್ಗುರು ಅವರು – “ನಮ್ಮೆಲ್ಲಾ ಚಟುವಟಿಕೆಗಳು ಹಾಗು ಗೆಲುವುಗಳು, ನಮ್ಮ ಧೀರ ಯೋಧರ ಸೇವೆ ಮತ್ತು ತ್ಯಾಗದ ಒಂದು ತಳಹದಿಯ ಮೇಲೆ ನಿಂತಿದೆ” ಎಂದು ಹೇಳಿದರು.

ಸಶಸ್ತ್ರ ಪಡೆ ಮತ್ತು ಅರೆಸೇನಾ ಪಡೆಗಳ ಜೊತೆ ಈಶ ಫೌಂಡೇಶನ್ ಸಾಮೀಪ್ಯದಲ್ಲಿ ತೊಡಗಿಸಿಕೊಂಡಿದೆ. ನಮ್ಮ ಸೇನಾಬಲದ ಪುರುಷರಿಗೆ ಹಾಗು ಮಹಿಳೆಯರಿಗೆ ಸದ್ಗುರು ಅವರು ವಿಶೇಷವಾಗಿ ವಿನ್ಯಾಸಗೊಳಿಸಿರುವ ಯೋಗ ಕಾರ್ಯಕ್ರಮಗಳನ್ನು ಈಶ ನಡೆಸುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, ಲತಾ ಕೃಷ್ಣಮೋಹನ್ 9663326770

ಈಶ ಫೌಂಡೇಷನ್ ಬಗ್ಗೆ

ಸದ್ಗುರು ಅವರಿಂದ ಸ್ಥಾಪಿಸಲ್ಪಟ್ಟಿರುವ ಈಶ ಫೌಂಡೇಷನ್, ಸ್ವಯಂಸೇವಕರುಗಳು ನಡೆಸುವ, ಅಂತಾರಾಷ್ಟ್ರೀಯ ಮಟ್ಟದ ಲಾಭಕ್ಕಾಗಿ ಅಲ್ಲದಮಾನವ ಸೇವಾ ಸಂಸ್ಥೆಯಾಗಿದ್ದು ಮನುಷ್ಯನ ಅಂತಃಸತ್ವವನ್ನು ರೂಢಿಸಿಕೊಳ್ಳುವುದಕ್ಕೆ ಮುಡಿಪಾದ ಸಂಸ್ಥೆಯಾಗಿದೆ. ಪ್ರಪಂಚದಾದ್ಯಂತ 250ಕೇಂದ್ರಗಳಲ್ಲಿ ಪಸರಿಸಿರುವ ಈಶ ಫೌಂಡೇಷನ್ ಅನ್ನು 90 ಲಕ್ಷ ಸ್ವಯಂಸೇವಕರು ನಡೆಸುತ್ತಾರೆ. ಈಶ ಫೌಂಡೇಷನ್ನಿನ ಕೇಂದ್ರ ಸ್ಥಾನವು ಭಾರತದವೆಳ್ಳಯನಗಿರಿ ಬೆಟ್ಟದ ತಪ್ಪಲಿನಲ್ಲಿರುವ ಈಶ ಯೋಗ ಕೇಂದ್ರದಲ್ಲಿ ಮತ್ತು ಅಮೇರಿಕದ ಮಧ್ಯ ಟೆನ್ನೆಸ್ಸೀನಲ್ಲಿರುವ ಅದ್ಭುತವಾದ ಪ್ರೇಕ್ಷಣೀಯ ಕಂಬರ್-ಲ್ಯಾಂಡ್ ಪ್ರಸ್ತಭೂಮಿಯಲ್ಲಿರುವ ಈಶ ಇನ್ಸ್ಟಿಟ್ಯೂಟ್ ಆಫ್ ಇನ್ನರ್ ಸೈನ್ಸಸ್ ಇಲ್ಲಿವೆ.

City Today News

(cutytoday.media)

9341997936

Leave a comment

This site uses Akismet to reduce spam. Learn how your comment data is processed.