ಬೆಂಗಳೂರು, ೨೭ – ೦೨ – ೨೦೧೯ ಬುಧವಾರ

೦೨ – ೦೩ – ೨೦೧೯ ಶನಿವಾರದಂದು ರಾತ್ರಿ ೯ ಕೈ ಮರಿಯಾಪುರ ಗ್ರಾಮದಲ್ಲಿ ಪ್ರದರ್ಶಿಸಲಿರುವ ಪವಿತ್ರ ಬೈಬಲ್ ಆಧಾರಿತ ಕನ್ನಡ ಧ್ವನಿ – ಬೆಳಕು ೮ ನೇ ಕಾರ್ಯಕ್ರಮ ) ಸ್ಥಳ : ೧೮೮೪ ರಲ್ಲಿ ಬರಗಾಲದ ೬೦೦ ಅನಾಥ ಬಾಲಕರಿಗೆ ಒಂದು ಅನಾಥಾಶ್ರಮ ಪ್ರಾರಂಭಿಸಿ ಫ್ರಾನ್ಸ್ ದೇಶದ ಫಾದರ್ ಫಿಲಿಪ್ ಸಿಜೋನ್ ಕನಕಪುರ ಮುಖ , ರಸೆಯ ಬಳಿ ಬೆಂಗಳೂರಿಂದ ೩೦ ಕಿ . ಮೀ . ದೂರದಲ್ಲಿ ಮರಿಯಾಪುರ ಗ್ರಾಮ ಹುಟ್ಟು ಹಾಕಿದರು . ಬಾಲಕರು ಬೆಳೆದು ವೃದ್ದಿಯಾದ ಹಾಗೆ ಅವರಿಗೆ ಮದುವೆ ಮಾಡಿ ಒಂದು ಮನೆ ಹಾಗೂ ಒಂದು ತುಂಡು ಭೂಮಿಯನ್ನು ಅವರು ನೀಡಿದರು . ೩೫ ವರ್ಷಗಳ ಸತತ ನಿಸ್ವಾರ್ಥ ದುಡಿಮೆಯ ನಂತರ ೧೯೨೭ ರಲ್ಲಿ ಮೃತರಾಗಿ ಅವರು ನಿರ್ಮಿಸಿದ ದೇವಾಲಯದಲ್ಲೇ ಅಡಕಮಾಡಲ್ಪಟ್ಟಿದ್ದಾರೆ , ಅನಾಥರ ತಂದೆಯಾದ ಫಾದರ್ ಫಿಲಿಪ್ ಸಿಜೋನ್ ಅವರ ಸ್ಮರಣಾರ್ಥ ೧೯೯೫ ರಿಂದ ಪ್ರತಿವರ್ಷ ೨೫ ಸಂವತ್ಸರಗಳಿಂದ ಇಲ್ಲಿನ ನಿವಾಸಿಗಳು ಬೈಬಲ್ ಆಧಾರಿತ ಧ್ವನಿ – ಬೆಳಕು ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ . ಯೋಬ : ಧ್ವನಿ – ಬೆಳಕು ಕಾರ್ಯಕ್ರಮದ ೨೫ ನೇ ವರ್ಷದ ರಜತ ಮಹೋತ್ಸವದ ಸವಿನೆನಪಿಗಾಗಿ ಈ ೮ ನೇ ಕಾರ್ಯಕ್ರಮ “ ಯೊಬ ” ೦೨ – ೦೩ – ೨೦೧೯ ಶನಿವಾರ ರಾತ್ರಿ ೯ ಕ್ಕೆ ಕನಕರಪುರ ಮುಖ್ಯ ರಸ್ತೆಯಲ್ಲಿರುವ ಮರಿಯಾಮರದಲ್ಲಿ ಪ್ರಥಮ ಬಾರಿ ವೇದಿಕೆಯ ಮೇಲೆ ಮೂಡಿಬರಲಿದೆ . ಬೈಬಲ್ಲಿನ ೭೮ ಪುಸ್ತಕಗಳ ಪೈಕಿ ಈಗಾಗಲೆ ೭ ಕಾರ್ಯಕ್ರಮಗಳಲ್ಲಿ ೫೩ ಪುಸ್ತಕಗಳು ಕಥಾವಸ್ತುಗಳಾಗಿವೆ . ಯೋಬ ನಾಟಕಕ್ಕೆ ಪವಿತ್ರ ಬೈಬಲ್ಲಿನ ಮತ್ತೆರಡು ಪುಸ್ತಕಗಳು , ಯೋಬ ಹಾಗೂ ತೊಗೀತ , ಆಧಾರವಾಗಿವೆ . ಅಲ್ಲಿ ಕಂಡುಬರುವ ಘಟನೆಗಳು ಇಸ್ರಯೇಲ್ ಹಾಗೂ ಮಧ್ಯ ಪ್ರಾಚ್ಯ ಪ್ರದೇಶಗಳ ಕ್ರಿ . ಪೂ . ೨೦೦ ರ ಹಿಂದಕ್ಕೆ ಹೋಗುತ್ತವೆ . ತಾತ್ಪರ್ಯ : ನಾಟಕದಲ್ಲಿ ಆದಿ ತಂದೆ – ತಾಯಿಗಳಾದ ಆದಾಮ್ – ಏವ , ಕಾಯಿನ ಪಿಶಾಚಿಯ ಶೋಧನೆಗೆ ಒಳಪಟ್ಟರೆ , ನೋಹ , ಯೋಬ ಮತ್ತು ತೊಬಿತ ಸದೃಢರಾಗಿ ದೇವರಲ್ಲಿ ಅಚಲ ಭಕ್ತಿ ಇರಿಸಿದ್ದೇ ಅಲ್ಲದೆ ಬಂದ ಕಷ್ಟಗಳನ್ನು ಸಹಿಸಿಕೊಂಡು ಕಡೆಯವರೆಗೂ ದೇವರ ಪರ ನಿಷ್ಠೆಯಿಂದ ನಿಲ್ಲುತ್ತಾರೆ . ೬ . ೩೦ ಗಂಟೆಗಳ ಈ ನೃತ್ಯ – ನಾಟಕದಲ್ಲಿ ೫೦೦ ನೃತ್ಯ ಮಾಡುವ ಗ್ರಾಮದ ಮಕ್ಕಳು , ೨೫೦ ಪಾತ್ರದಾರಿಗಳಲ್ಲದೆ ದನ – ಕರು , ಕುರಿ , ಕತ್ತೆ , ಕುದುರೆ ಮುಂತಾದ ಪ್ರಾಣಿಗಳು ೧೨೫ ಮೀಟರ್ ವೇದಿಕೆಯ ಮೇಲೆ ಬರುತ್ತವೆ .
City Today News
(citytoday.media)
9341997936
