28 / 02 / 2019 ರಂದು ಶ್ರೀ . ಓಂಕಾರಮೂರ್ತಿ ರವರು ದೂರುದಾರರಿಂದ ರೂ . 5 , 000 / – ಲಂಚದ ಹಣವನ್ನು ಪಡೆಯುತ್ತಿದ್ದಾಗ ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ .

ದಿನಾಂಕ : 28 / 02 / 2019 , ತುಮಕೂರು ಜಿಲ್ಲೆ , ಗುಬ್ಬಿ ತಾಲ್ಲೂಕು , ನಿಟ್ಟೂರು ಹೋಬಳಿ ಹೊನ್ನೇನಹಳ್ಳಿ ಗ್ರಾಮದ ನಿವಾಸಿಯೊಬ್ಬರ ಜಮೀನಿನ ಬೆಳೆ ಸಾಲ ರೂ . 50 , 000 / – ದೊಡ್ಡಗುಣಿ ಪ್ರಾಥಮಿಕ ಕೃಷಿ , ಪತ್ತಿನ ಸಹಕಾರ ಸಂಘ ( ನಿ ) ವತಿಯಿಂದ ಮಂಜೂರಾಗಿರುತ್ತದೆ . ಶ್ರೀ . ಓಂಕಾರಮೂರ್ತಿ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ( ನಿ ) ದೊಡ್ಡಗುಣಿ ರವರು ಮಂಜೂರಾಗಿರುವ ರೂ . 50 , 000 / – ಸಾಲದ ಹಣವನ್ನು ದೂರುದಾರರ ಖಾತೆಗೆ ಜಮಾ ಮಾಡಲು ರೂ . 5 , 000 / – ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 28 / 02 / 2019 ರಂದು ಶ್ರೀ . ಓಂಕಾರಮೂರ್ತಿ ರವರು ದೂರುದಾರರಿಂದ ರೂ . 5 , 000 / – ಲಂಚದ ಹಣವನ್ನು ಪಡೆಯುತ್ತಿದ್ದಾಗ ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಆರೋಪಿತರನ್ನು ದಸ್ತಗಿರಿ ಮಾಡಿ , ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ತನಿಖೆ ಮುಂದುವರೆದಿದೆ .

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.