
ಉತ್ತರ ಕರ್ನಾಟಕ ಖದರ್ , ಕಲ್ಬುರ್ಗಿ , ಯಾದಗಿರಿ , ರಾಯಚೂರು , ಬಳ್ಳಾರಿ , ಕೊಪ್ಪಳ , ಬೆಳಗಾವಿ , ವಿಜಯಪುರ , ಧಾರವಾಡ , ಕಾರವಾರ , ಬಾಗಲಕೋಟೆ , ಗದಗ ಮತ್ತು ಹಾವೇರಿ ಒಟ್ಟು 13 ಜಿಲ್ಲೆಗಳಿಂದ ಬದುಕಿಗಾಗಿ ಬೆಂಗಳೂರಿಗೆ ಬಂದು ಹಲವಾರು ಭಾಗಗಳಲ್ಲಿ ನೆಲೆಸಿರುವ ಉತ್ತರ ಕರ್ನಾಟಕ ಸಮುದಾಯಗಳು ವಿವಿಧೋದ್ದೇಶಗಳಿಂದ ರಚಿತಗೊಂಡಿರುವ ರಚನೆಮಾಡಿಕೊಂಡು ಚಿಕ್ಕ ಪುಟ್ಟ ಕಾರ್ಯಕ್ರಮಗಳನ್ನ ಮಾಡಿಕೊಂಡು ಉತ್ತರ ಕರ್ನಾಟಕ ಸೊಗಡನ್ನ ಉಳಿಸಿ ಬೆಳೆಸುತ್ತಿವೆ . ಇಂತಹ ಸುಮಾರು 37 ಸಂಘ – ಸಂಸ್ಥೆಗಳು ಒಗ್ಗೂಡಿ ಒಂದು “ ಮಹಾ ಸಂಸ್ಥೆ ” ಯನ್ನು ರಚನೆ ಮಾಡಿ ನೋಂದಣಿ ಸಂಖ್ಯೆ : DRB1 / SOR / 510 / 2018 – 19 ದಿನಾಂಕ : 07 – 12 – 2018 ರಂದು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ಮೆರೆಗೆ ನೋಂದಣಿ ಮಾಡಿಸಲಾಗಿದೆ . ಮಹಾ ಸಂಸ್ಥೆಯ ಧೇಯೋದ್ದೇಶ : – ಉತ್ತರ ಕರ್ನಾಟಕ ಸಾಂಸ್ಕೃತಿಕ ಪರಂಪರೆ , ಸಾಹಿತ್ಯ ಮತ್ತು ಕಲೆಗಳನ್ನು ಉಳಿಸಿ , ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಪಡಿಸುವುದು . ಉತ್ತರ ಕರ್ನಾಟಕ ನಾಡಿನ ಅಭಿವೃದ್ಧಿ , ಸಮಾಜದ ಅಭಿವೃದ್ಧಿ , ಏಳಿಗೆಗಾಗಿ ಸರಕಾರಕ್ಕೆ ಮನವಿ ಸಲ್ಲಿಸಿ , ಉತ್ತರ ಕರ್ನಾಟಕದ ಉತ್ತರೋತ್ತರ ಬೆಳವಣಿಗೆಗೆ , ಅಭಿವೃದ್ಧಿಗಾಗಿ ಮಹಾ ಸಂಸ್ಥೆಯಿಂದ ಅರ್ಥ ಪೂರ್ಣವಾದ ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುವಲ್ಲಿ ಸರ್ಕಾರದೊಂದಿಗೆ ಸಹಕಾರ ನೀಡುವುದು ಹಾಗೂ ಸಕ್ರೀಯವಾಗಿ ಮಹಾ ಸಂಸ್ಥೆ ಕಾರ್ಯ ನಿರ್ವಹಿಸುವುದು . ಕರ್ನಾಟಕ ರಾಜ್ಯದಲ್ಲಿರುವ ಇತರೆ ಒಕ್ಕೂಟ , ಸಂಘ – ಸಂಸ್ಥೆಗಳೊಂದಿಗೆ ಸೌಹಾರ್ದತೆಯಿಂದ ವ್ಯವಹರಿಸಿ ‘ ರಾಷ್ಟ್ರೀಯ ಭಾವೈಕ್ಯತೆ ‘ ಬೇರೂರಲು ಸದಭಿವೃದ್ಧಿಯ ಕಾರ್ಯಕ್ರಮಗಳನ್ನು ಆಯೋಜಿಸಿ ಕಾರ್ಯಗತಗೊಳಿಸುವುದು ಉದ್ದೇಶವಾಗಿದೆ .

‘ ಮಹಾ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ 11 ಪದಾಧಿಕಾರಿಗಳು ಹಾಗೂ 16 ನಿರ್ದೇಶಕರು ( ಕಾರ್ಯಕಾರಿ ಸಮಿತಿ ಸದಸ್ಯರು ) ಒಟ್ಟು 27 ಸದಸ್ಯರನ್ನು ಒಳಗೊಂಡಿರುತ್ತದೆ . ಕರ್ನಾಟಕ ಸರ್ಕಾರದ ಬೊಅಸ್ ಇಲಾಖೆಯಲ್ಲಿ ಮಹಾ ನಿರ್ದೇಶಕರಾಗಿ ನಿವೃತ್ತಿ ಹೊಂದಿದ ಶ್ರೀ ಶಂಕರ ಬಿದರಿ , ಭಾ . ಪೋ . ಸೇ . , ಅವರು ಮಹಾ ಸಂಸ್ಥೆಯ ಗೌರವ ಅಧ್ಯಕ್ಷರಾಗಿರುತ್ತಾರೆ . ಇವರ ಸಲಹೆ , ಸೂಚನೆ , ಮಾರ್ಗದರ್ಶನದಲ್ಲಿ ಮಹಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಿವಕುಮಾರ , ಆರ್ . ಮೇಣ ಮತ್ತು ಆಡಳಿತ ಮಂಡಳಿ ತಂಡ ಕಾರ್ಯ ರೂಪರೇಶೆಗಳನ್ನು ಹಾಕಿ ನಿರ್ವಹಿಸುತ್ತದೆ . ಮಹಾ ಸಂಸ್ಥೆಯ ಉದ್ದೇಶ ಉತ್ತರ – ದಕ್ಷಿಣ ಅಲ್ಲ ಆದರೆ ಕರ್ನಾಟಕ “ ಅಖಂಡ ಕರ್ನಾಟಕ ” ಎಂಬ ಮಂತ್ರ ಸದಾ ಹೊಂದಿದ್ದು , ಕರ್ನಾಟಕ ಏಕೀಕರಣದ ಪ್ರತೀಕವೆಂದು ಹೇಳಿದರೆ ತಪ್ಪಾಗಲಾರದು .
City Today News
(citytoday.media)
9341997936
