
ರಾಜಪ್ಪ ಮತ ಚಲಾವಣೆಗಾಗಿ ಬೂತ್ ಗೆ ಆಗಮಿಸಿ, ಮತದಾನ ಮಾಡಿದನು. ಬಳಿಕ ಬೂತ್ ಏಜಂಟ್ ನ ಬಳಿ ತೆರಳಿ ಕೇಳಿದನು, ‘ನನ್ನ ಹೆಂಡತಿ ಓಟ್ ಮಾಡಿ ಹೊದಳಾ? ಎಂದು.
ಬೂತ್ ಏಜಂಟ್ ಮತ ಚಲಾವಣೆ ಮಾಡಿದವರ ಪಟ್ಟಿಯನ್ನು ಪರಿಶೀಲಿಸಿ ‘ಅಣ್ಣ, ಮೇಡಂ ಓಟು ಮಾಡಿ ಹೋದರು’ ಎಂದ.
ಬೇಸರದಿಂದ ರಾಜಣ್ಣ, ‘ ಛೇ ನಾನು ತಡವಾಗಿಬಿಟ್ಟೆ. ಸ್ವಲ್ಪ ಮುಂಚೆ ಬಂದಿದ್ರೆ ಅವಳನ್ನು ಒಮ್ಮೆ ನೋಡ್ಬಹುದಿತ್ತು’
ಏಜಂಟ್: ಅವರು ನಿಮ್ಮೊಂದಿಗೆ ಇಲ್ವಾ ಅಣ್ಣ? ನೀವೇನು ಬೇರಾಗಿದ್ದೀರಾ?
ರಾಜಣ್ಣ: *ಅವಳು ಸಾವನ್ನಪ್ಪಿ 15 ವರ್ಷವಾಯಿತ್ತು. ಆದರೇ ಪ್ರತೀ ಚುನಾವಣೆಗೂ ಅವಳು ಓಟ್ ಮಾಡಲು ಬರುತ್ತಿದ್ದಾಳೆ.
“ಮತ ಕಳ್ಳರಿದ್ದಾರೆ ಎಚ್ಚರಿಕೆ”
City Today News
(citytoday.media)
9341997936
