
ಡಿ . ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ : ಕೆ . ಅನ್ನದಾನಿರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಪಕ್ಷದ ರಾಜ್ಯ ಕಛೇರಿಯಲ್ಲಿ ದಿನಾಂಕ : 15 – 03 – 2019ನೇ ಶುಕ್ರವಾರ ಮಧ್ಯಾಹ್ನ : 12 – 30 ಘಂಟೆಗೆ ಹಮ್ಮಿಕೊಳ್ಳಲಾಗಿದ್ದು ,

ಅಂದೇ ಶ್ರೀ ಕೆ . ಎ . ಆನಂದ್‌ರವರು ಕರ್ನಾಟಕ ಪ್ರದೇಶ ಜನತಾದಳ ( ಜಾತ್ಯತೀತ ) ಪಕ್ಷದ ಪರಿಶಿಷ್ಠ ಜಾತಿ ವಿಭಾಗದ “ ನೂತನ ಅಧ್ಯಕ್ಷ ” ರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ . ಈ ಕಾರ್ಯಕ್ರಮಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಹೆಚ್ . ಡಿ . ದೇವೇಗೌಡರವರು , ರಾಜ್ಯಾಧ್ಯಕ್ಷರಾದ ಶ್ರೀ ಅಡಗೂರು ಎಚ್ . ವಿಶ್ವನಾಥ್‌ರವರು , ಪಕ್ಷದ ಸಚಿವರು , ಶಾಸಕರು , ಹಿರಿಯ ಮುಖಂಡರುಗಳು ಭಾಗವಹಿಸಲಿದ್ದಾರೆ .
– ಕಿರಣ್‌ಕುಮಾರ್ ಬಿ.ಆರ್
ರಾಜ್ಯ ಪ್ರಧಾನ ಕಾರ್ಯದರ್ಶಿ
ಪರಿಶಿಷ್ಠ ಜಾತಿ ವಿಭಾಗ
ಕರ್ನಾಟಕ ಪ್ರದೇಶ ಜನತಾದಳ ( ಜಾತ್ಯತೀತ )
City Today News
(citytoday.media)
9341997936
